ಶನಿವಾರ, ಜನವರಿ 18, 2020
21 °C

ಅಧಿಕಾರಿಗಳಲ್ಲಿ ಅಧ್ಯಯನಶೀಲತೆ ಮಾಯ: ದೇಜಗೌ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜಕಾರಣಿಗಳು ಲೂಟಿ ಮಾಡುವುದೇ ರಾಜಕಾರಣ ಎಂದು ಭಾವಿಸಿದ್ದಾರೆ. ಅಧಿಕಾರ ಸಿಕ್ಕ ಕೂಡಲೇ ರಾಜಕಾರಣಿಗಳು ಹಾಗೂ ಅಧಿಕಾರಿ ಗಳು ಅಧ್ಯಯನದಿಂದ ವಿಮು ಖರಾಗು ತ್ತಾರೆ. ಇಂತಹವರ ನಡುವೆ ಡಾ.ಸಿ.­ಸೋಮಶೇಖರ್‌ ಅವರು ಅಪರೂಪದ ವ್ಯಕ್ತಿ’  ಎಂದು ಹಿರಿಯ ಸಾಹಿತಿ ಡಾ.ದೇ. ಜವರೇಗೌಡ ಶ್ಲಾಘಿಸಿದರು.ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಭಾನುವಾರ ನಡೆದ ಐಎಎಸ್‌ ಅಧಿಕಾರಿ ಡಾ.ಸಿ.ಸೋಮಶೇಖರ್‌ ಅಭಿನಂದನಾ ಸಮಾರಂಭದಲ್ಲಿ ಮಾತ ನಾಡಿದರು. ‘ನಾನು ಕನ್ನಡ ಮಾಧ್ಯಮದಲ್ಲಿ ಬೆಳೆದ ವಿಜ್ಞಾನಿ ಎಂದು ಡಾ.ಸಿ.ಎನ್‌.­ಆರ್‌.ರಾವ್‌ ಹೇಳಿದ್ದಾರೆ. ಸೋಮ­ಶೇಖರ್‌ ಅವರೂ ಕನ್ನಡ ಮಾಧ್ಯಮ­ದಲ್ಲಿ ಕಲಿತು ಉನ್ನತ ಹುದ್ದೆಗೆ ತಲುಪಿ­ದ್ದಾರೆ. ಅವರು ಬಳಸುವ ಕನ್ನಡ ಶಕ್ತಿಶಾಲಿಯಾದುದು’ ಎಂದು ಬಣ್ಣಿಸಿದರು. 

ಹಿರಿಯ ನಿಘಂಟು ತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಕಾರ್ಯಕ್ರಮ ಉದ್ಘಾಟಿಸಿ, ‘ಸೋಮಶೇಖರ್‌ ವಿದ್ಯಾ ರ್ಥಿ­ಯಾಗಿದ್ದಾಗ ಜನಪ್ರಿಯ ರಾಗಿದ್ದರು. ಬಡವರ ಸೇವೆ ಮಾಡುವ ಮೂಲಕ ಅಧಿಕಾರಿಯಾಗಿಯೂ ಜನಪ್ರಿಯ­ರಾಗಿ­ದ್ದಾರೆ. ಅವರು ಜನಪ್ರಿಯ ಆಡಳಿತ ಗಾರ’ ಎಂದರು.ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಹಿರಿಯ ಕವಿ ಡಾ.ಕೆ.ಎಸ್‌. ನಿಸಾರ್‌ ಅಹಮದ್ ಅಭಿನಂದನಾ ಛಾಯಾಚಿತ್ರ ಸಂಪುಟ ‘ಚಿತ್ರ ವಿಹಾರ’ ಬಿಡುಗಡೆ ಮಾಡಿದರು. ನಿವೃತ್ತ ನ್ಯಾಯ­ಮೂರ್ತಿ­ಗಳಾದ ಶಿವರಾಜ ವಿ.ಪಾಟೀಲ್‌, ವಿ.ಎಸ್‌.ಮಳಿಮಠ, ರಾಜ್ಯಸಭಾ ಸದಸ್ಯೆ ಬಿ.ಜಯಶ್ರೀ, ಸಂಸ್ಕೃತ ವಿವಿಯ ಕುಲಪತಿ ಡಾ.ಮಲ್ಲೇಪುರಂ ಜಿ.ವೆಂಕಟೇಶ್‌ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)