ಬುಧವಾರ, ಏಪ್ರಿಲ್ 21, 2021
33 °C

ಅನಾರೋಗ್ಯದಿಂದ ಶ್ರೀನಗರದಲ್ಲಿ ಯೋಧ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ತಾಲ್ಲೂಕಿನ ಯಾದವಾಡ ಗ್ರಾಮದ ಯೋಧ ಮಡಿವಾಳಪ್ಪ ರುದ್ರಪ್ಪ ಕಮ್ಮೋರ (42) ಅನಾರೋಗ್ಯದಿಂದ ಗುರುವಾರ ಬೆಳಿಗ್ಗೆ ಜಮ್ಮು ಕಾಶ್ಮೀರದ ಶ್ರೀನಗರ ಮಿಲಿಟರಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು. ಅವರಿಗೆ ಪತ್ನಿ, ಇಬ್ಬರು ಪುತ್ರರು, ತಂದೆ-ತಾಯಿ, ಮೂವರು ಸಹೋದರರು ಇದ್ದಾರೆ. ಮೃತರ ಪ್ರಾರ್ಥಿವ ಶರೀರ ಇದೇ 10ರಂದು ಯಾದವಾಡಕ್ಕೆ ಆಗಮಿಸಲಿದ್ದು, ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.ಯೋಧ ಮಡಿವಾಳಪ್ಪ ಕಮ್ಮೋರ ನಿಧನ ಹೊಂದಿರುವ ಮಾಹಿತಿ ಗುರು ವಾರ ರಾತ್ರಿಯವರೆಗೂ ಜಿಲ್ಲಾಡಳಿತದ ಗಮನಕ್ಕೆ ಬಂದಿರಲಿಲ್ಲ. ಈ ಕುರಿತು ತಹಶೀಲ್ದಾರ ಶಿವಾನಂದ ವೈ.ಭಜಂತ್ರಿಯವರನ್ನು ಸಂಪರ್ಕಿಸಿದಾಗ, ಪೊಲೀಸ್ ಇಲಾಖೆ ಈ ಕುರಿತು ನಮಗೆ ಯಾವುದೇ ಮಾಹಿತಿ ನೀಡಿಲ್ಲ, ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿ ಸಕಲ ಸರ್ಕಾರಿ ಗೌರವ ನೀಡಲಾಗುವುದು ಎಂದು ತಿಳಿಸಿದರು.ಪರಿಚಯ: 1990ರಲ್ಲಿ ಸಿಆರ್‌ಪಿಎಫ್‌ಗೆ ಸೇರಿದ್ದ ಅವರು 15 ವರ್ಷಗಳ ಸುದೀರ್ಘ ಸೇವೆ ಪೂರ್ಣಗೊಂಡ ಬಳಿಕವೂ ಸೇವೆಯಲ್ಲಿ ಮುಂದುವರೆದಿದ್ದರು. ಆಸ್ಸಾಂ, ತ್ರಿಪುರಾ, ಮಣಿಪುರ, ರಾಜಸ್ತಾನಗಳಲ್ಲಿ ಸಲ್ಲಿಸಿದ್ದರು. ಎರಡು ವರ್ಷದ ಹಿಂದೆ ಪೂಂಚ್ ಗಡಿಯಲ್ಲಿ ನಡೆದ ಲಘು ಯುದ್ದದಲ್ಲಿ ಅವರ ಬಲಭುಜಕ್ಕೆ ಗುಂಡು ತಗುಲಿ ಗಾಯಗೊಂಡಿದ್ದ ಅವರು ರಜೆ ಅವಧಿಯಲ್ಲಿ ಊರಿಗೆ ಬಂದಾಗ ಕಮ್ಮೋರರ ಕೆಲಸವನ್ನು ಮಾಡುತ್ತಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.