ಶನಿವಾರ, ಮೇ 15, 2021
23 °C

ಅಬಕಾರಿ ಸುಂಕ ರ್ದ್ದದತಿಗೆ ಮೋಂಬತ್ತಿ ಮೆರವಣಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಚಿನ್ನದ ಮೇಲಿನ ಅಬಕಾರಿ ಸುಂಕವನ್ನು ಸಂಪೂರ್ಣ ತೆಗೆದುಹಾಕಬೇಕು ಎಂದು ಒತ್ತಾಯಿಸಿ ನಗರದ ಜ್ಯೂಯೆಲ್ಲರ್ಸ್ ಅಸೋಸಿಯೇಷನ್, ಚಿನ್ನ ಬೆಳ್ಳಿ ಕಾರ್ಮಿಕರ, ವ್ಯಾಪಾರಿಗಳ ಸಂಘದ ವತಿಯಿಂದ ಮಂಗಳವಾರ ಬೃಹತ್ ಮೋಂಬತ್ತಿ ಮೆರವಣಿಗೆ ನಡೆಯಿತು.ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಶೇ. 2ರಷ್ಟು ಹೆಚ್ಚಿಸಿರುವುದರಿಂದ ಚಿನ್ನ-ಬೆಳ್ಳಿ ಕ್ಷೇತ್ರದಲ್ಲಿ ದುಡಿಯುತ್ತಿರುವವರ ಬದುಕು ದುಸ್ತರವಾಗಿದೆ. ಗ್ರಾಹಕರಿಗೂ ಇದರಿಂದ ಹೊರೆಯಾಗಿದೆ. ಈ ಬಗ್ಗೆ 17 ದಿನದಿಂದಲೂ ದೇಶಾದ್ಯಂತ ಪ್ರತಿಭಟನೆ ನಡೆಯುತ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ.ಚಿನ್ನ ಬೆಳ್ಳಿ ಉತ್ಪನ್ನಗಳು ಅಬಕಾರಿ ಸುಂಕದ ವ್ಯಾಪ್ತಿಗೆ ಬರುತ್ತಿರಲಿಲ್ಲ. ಇದೀಗ ಅದನ್ನೂ ಸುಂಕದ ವ್ಯಾಪ್ತಿಗೆ ಒಳಪಡಿಸಲಾಗಿದೆ. ಅಲ್ಲದೇ, ಹೆಚ್ಚಳವಾಗಿರುವ ಸುಂಕ ಸೇರಿದರೆ ಶೇ. 4ರಷ್ಟಾಗುತ್ತದೆ. ಇದರಿಂದ ಸಣ್ಣ ವ್ಯಾಪಾರಿಗಳು ಏನು ಮಾಡಬೇಕು ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.ಈ ಬಗ್ಗೆ ಇನ್ನೂ ಹೋರಾಟ ತೀವ್ರಗೊಳಿಸಲಾಗುವುದು. ಸರ್ಕಾರ ಅಬಕಾರಿ ಸುಂಕವನ್ನು ಕೂಡಲೇ ತೆಗೆದುಹಾಕಬೇಕು. ಇಲ್ಲವಾದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಆಭರಣ ವ್ಯಾಪಾರಿ ವಾಸುದೇವ ರಾಯ್ಕರ್ ತಿಳಿಸಿದರು.ನಗರದ ಗುರು ಬಕ್ಕೇಶ್ವರ ದೇವಸ್ಥಾನದಿಂದ ಹೊರಟ ಮೋಂಬತ್ತಿ ಮೆರವಣಿಗೆ ಪಾಲಿಕೆ ಆವರಣದಲ್ಲಿ ಅಂತ್ಯಗೊಂಡಿತು.ಪ್ರಭಾಕರ ವಿ. ಶೇಟ್, ಬದರಿನಾಥ್, ಪಾರಸ್‌ಮಲ್ ಜೈನ್, ರಾಜು ಜೈನ್, ಶಂಕರ ಇತರರು ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.