ಗುರುವಾರ , ಮೇ 13, 2021
16 °C

ಅಭಿವೃದ್ಧಿಗೆ ಸಹಕರಿಸಿ: ರಂಭಾಪುರಿ ಶ್ರೀ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಮನಾಬಾದ್: ಸೋಂತ ಹುಮನಾಬಾದ್ ಶಾಖಾ ಮಠ ಅಭಿವೃದ್ಧಿಗಾಗಿ ಮಠದ ಪೀಠಾಧ್ಯಕ್ಷರು ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಅವರನ್ನು ಸಂಪರ್ಕಿಸಬೇಕು. ಧಾರ್ಮಿಕ ಕಾರ್ಯಗಳಿಗೆ ಯಾವತ್ತೂ ಉದಾರ ಸಹಾಯ ಸಹಕಾರ ನೀಡುವ ಮನೋಭಾವ ಉಳ್ಳವರಾದ ಶಾಸಕ ಪಾಟೀಲ, ಸಂಸದ ಎನ್. ಧರ್ಮಸಿಂಗ್ ಅವರಿಗೆ ವೈಯಕ್ತಿಕ ಸಲಹೆ ನೀಡುವುದಾಗಿ ಜಗದ್ಗುರು ರಂಭಾಪುರಿ ಶ್ರೀ ತಿಳಿಸಿದರು.ಸೋಂತ ಮಠ ಜೀರ್ಣೋದ್ಧಾರ ನಿಮಿತ್ತ  ಗುರುವಾರ ರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಐತಿಹಾಸಿಕ ಹಿನ್ನೆಲೆ ಹೊಂದಿರುವ ಮಠದ ಅಭಿವೃದ್ಧಿ ಹಿನ್ನೆಲೆಯಲ್ಲಿ ಕೈಗೊಳ್ಳುವ ಕಟ್ಟಡ ನಿರ್ಮಾಣ ವಿಷಯಕ್ಕೆ ಸಂಬಂಧಿಸಿದಂತೆ ಅವಸರದ ನಿರ್ಣಯ ತೆಗೆದುಕೊಳ್ಳದೇ ಖ್ಯಾತ ವಾಸ್ತುತಜ್ಞರ ಮಾಗದರ್ಶನ ಪಡೆದು ಮುಂದಿನ ಹೆಜ್ಜೆ ಇಡಬೇಕು. ಶಿವಕುಮಾರ ಸ್ವಾಮೀಜಿ ಅವರು ಮಠದಲ್ಲಿ ಸದ್ಯ 12ಜ್ಯೋತಿರ್ಲಿಂಗ ಪ್ರತಿಷ್ಠಾಪಿಸಿರುವುದು ಸಂತಸದ ಸಂಗತಿ. ತನ್ಮೂಲಕ ಹುಮನಾಬಾದ್ ಜನತೆಗೆ 12ಜ್ಯೋತಿರ್ಲಿಂಗಗಳ ದರ್ಶನ ಭಾಗ್ಯ ಕಲ್ಪಿಸಿಕೊಟ್ಟಿದ್ದಾರೆ ಎಂದರು.ಈ ಹಿಂದೆಯೇ ಹೇಳಿದಂತೆ ಹುಮನಾಬಾದ್‌ನಲ್ಲಿ ದಸರಾ ಉತ್ಸವ ನಡೆಸುವ ಮಹತ್ತರ ಉದ್ದೇಶ ಹೊಂದಿದ್ದು, ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಆ ಕಾರ್ಯ ಯಶಸ್ವಿಯಾಗಿ ನಡೆಸಿಕೊಡುವುದಾಗಿ ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದರು.ಪ್ರಾಸ್ತಾವಿಕ ಮಾತನಾಡಿದ ಸೋಂತದ ಹುಮನಾಬಾದ್ ಶಾಖಾ ಮಠದ ಪೀಠಾಧ್ಯಕ್ಷ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಮಠದ ಸ್ಥಿತಿಗತಿ, ಆಗಬೇಕಾದ ಅಭಿವೃದ್ಧಿ, ಭಕ್ತ ಸಮುದಾಯದ ಸಹಕಾರ ಇತ್ಯಾದಿ ಗಳ ಕುರಿತು ವಿವರಿಸಿದರು.ಲಾಡಗೇರಿ ಮಠದ ಗಂಗಾಧರ ಸ್ವಾಮೀಜಿ, ಸಾಯಿಗಾಂವ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಚಿಲ್ಲರಗಿಯ ಗುರುಪಾದ ಸ್ವಾಮೀಜಿ, ಹುಡಗಿಯ ಚನ್ನಮಲ್ಲ ದೇವರು, ವಾಸವಿ ಸಮಾಜ ಜಿಲ್ಲಾಧ್ಯಕ್ಷ ನಾರಾಯಣರಾವ ಚಿದ್ರಿ, ಶ್ರೀಶೈಲ್ ಪರಡಿಮಠ್, ಹಣಮಂತರಾವ ನರನಾಳ್, ಮಲ್ಲಿಕಾರ್ಜುನ ಹಿರೇಮಠ್ ಮೊದಲಾದವರು ಇದ್ದರು. ಬೆಳಿಗ್ಗೆಯಿಂದ ರಾತ್ರಿವರೆಗೆ ನರನಾಳ್ ಗ್ರಾಮದ ಅಕ್ಕನಬಳಗದ ಮಾತೆಯರು ತಡೆರಹಿತ ಭಜನೆ ಕಾರ್ಯಕ್ರಮ ನಡೆಸಿಕೊಟ್ಟರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.