ಶನಿವಾರ, ಮೇ 15, 2021
26 °C

ಅಮಾಯಕರಿಗೆ ಹಿಂಸೆ ಬೇಡ

ಬಿ. ಲಕ್ಕಣ್ಣ, ಬೆಂಗಳೂರು Updated:

ಅಕ್ಷರ ಗಾತ್ರ : | |

ಬೆಳ್ತಂಗಡಿ ತಾಲ್ಲೂಕಿನ ಕಾಲೇಜು ವಿದ್ಯಾರ್ಥಿ ಮಲೆಕುಡಿಯ ಸಮುದಾಯದ 23 ವರ್ಷದ ವಿಠಲ ಎಂಬ ವಿದ್ಯಾರ್ಥಿಯನ್ನು ಬಂಧಿಸಿದ ಪ್ರಕರಣ ಮಗುವನ್ನು ಚಿವುಟಿ ತೊಟ್ಟಿಲನ್ನೂ ತೂಗುವ ವರ್ತನೆಯಂತಿದೆ.ನಕ್ಸಲೀಯರು ಹಿಂಸೆಯ ಹಾದಿ ತೊರೆದು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಕೊಳ್ಳಲೆಂದು ಸರ್ಕಾರ ಕರೆ ನೀಡುತ್ತದೆ. ಮತ್ತೊಂದೆಡೆ ಆದಿವಾಸಿ  ಸುಶಿಕ್ಷಿತನಿಗೆ ನಕ್ಸಲೀಯ ಎಂಬ ಹಣೆಪಟ್ಟಿ ಕಟ್ಟುತ್ತದೆ.ಬೆಳ್ತಂಗಡಿ ತಾಲ್ಲೂಕಿನ ಕುತ್ಲೂರು ಗ್ರಾಮದ ವಿಠಲ ಮಲೆಯಕುಡಿಯ ಯುವಕ ಹಾಗೂ ಅವರ ತಂದೆಯನ್ನು  ಬಂಧಿಸಿದ ಕ್ರಮ ಸಮರ್ಥನೀಯವಲ್ಲ. ಸರ್ಕಾರ ತಕ್ಷಣವೇ ಇಬ್ಬರನ್ನು ಬಿಡುಗಡೆ ಮಾಡಬೇಕು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.