ಕೊಲಂಬೊ: ಹಂಗಾಮಿ ನಾಯಕ ಲೋರ್ಕನ್ ಟಕ್ಕರ್ ಅವರ ಅಜೇಯ 94 ರನ್ಗಳ ನೆರವಿನಿಂದ ಐರ್ಲೆಂಡ್ ತಂಡ, ಟಿ20 ವಿಶ್ವಕಪ್ ಪಂದ್ಯದಲ್ಲಿ ಒಮಾನ್ ತಂಡವನ್ನು ಶನಿವಾರ 96 ರನ್ಗಳಿಂದ ಸದೆಬಡಿಯಿತು.

ಐರ್ಲೆಂಡ್ 5 ವಿಕೆಟ್ಗೆ 235 ರನ್ ಗಳಿಸಿ, ಈ ವಿಶ್ವಕಪ್ನ ಅತ್ಯಧಿಕ ಮೊತ್ತ ದಾಖಲಿಸಿತು. ಇದು ಪುರುಷರ ಟಿ20 ವಿಶ್ವಕಪ್ನ ಎರಡನೇ ಅತ್ಯಧಿಕ ಮೊತ್ತ ಸಹ. ಒಮಾನ್ ತಂಡ 18 ಓವರುಗಳಲ್ಲಿ 139 ರನ್ಗಳಿಗೆ ಕುಸಿಯಿತು.

ಟಕ್ಕರ್ ಗಳಿಸಿದ ಅಜೇಯ 94 ರನ್ಗಳು ಈ ವಿಶ್ವಕಪ್ನ ವೈಯಕ್ತಕ ಗರಿಷ್ಠ ಮೊತ್ತವೆನಿಸಿತು. ಅವರು ಪಂದ್ಯಶ್ರೆಷ್ಠ ಗೌರವಕ್ಕೂ ಪಾತ್ರರಾದರು. ತಂಡಕ್ಕೆ ನಾಯಕರಾಗಿದ್ದ ಪಾಲ್ ಸ್ಟರ್ಲಿಂಗ್ ಮೊಣಕಾಲಿನ ಲಿಗಾಮೆಂಟ್ ಗಾಯದಿಂದಾಗಿ ವಿಶ್ವಕಪ್ನಿಂದ ಹೊರಬಿದ್ದಿದ್ದಾರೆ. ಹೀಗಾಗಿ ನಾಯಕತ್ವವು ಅನುಭವಿ ಟಕ್ಕರ್ ಹೆಗಲೇರಿದೆ.

7.3 ಓವರುಗಳಲ್ಲಿ 4 ವಿಕೆಟ್ಗೆ 64 ರನ್ ಗಳಿಸಿ ತಂಡ ಕುಸಿಯುವ ಅಪಾಯದಲ್ಲಿದ್ದಾಗ ಟಕ್ಕರ್ ನೆರವಿಗೆ ನಿಂತರು. 51 ಎಸೆತಗಳ ಅವರ ಇನಿಂಗ್ಸ್ 10 ಬೌಂಡರಿ, ನಾಲ್ಕು ಸಿಕ್ಸರ್ಗಳನ್ನು ಒಳಗೊಂಡಿತ್ತು. ಕೊನೆಯ ಓವರಿನಲ್ಲಿ ಜಾರ್ಜ್ ಡಾಕ್ರೆಲ್ ಆಡಿದ್ದರಿಂದ ಅವರಿಗೆ ಬ್ಯಾಟಿಂಗ್ ಅವಕಾಶ ಸಿಗಲಿಲ್ಲ. ಡಾಕ್ರೆಲ್ ಮೂರು ಬೌಂಡರಿಗಳನ್ನು ಬಾರಿಸಿದರು.

ಐದನೇ ವಿಕೆಟ್ಗೆ ಟಕ್ಕರ್ ಮತ್ತು ಗೆರೆತ್ ಡೆಲಾನಿ 101 ರನ್ ಸೇರಿಸಿ ತಂಡದ ಮೊತ್ತ ಏರಿಸಿದರು. ಡೆಲಾನಿ 30 ಎಸೆತಗಳಲ್ಲಿ 56 ರನ್ ಬಾರಿಸಿದರು. ಡಾಕ್ರೆಲ್ ಕೇವಲ 9 ಎಸೆತಗಳಲ್ಲಿ 35 ರನ್ ಸೇರಿಸಿದರು.

ಒಮಾನ್ ಪರ ಆರಂಭ ಆಟಗಾರ ಅಮೀರ್ ಕಲೀಮ್ 50 ರನ್ (29ಎ, 4x5, 6x2) ಗಳಿಸಿದರೆ, ಹಮ್ಮದ್ ಮಿರ್ಜಾ 46 ರನ್ (37ಎ, 4x6, 6x1) ಗಳಿಸಿದರು. ಮೂರನೇ ವಿಕೆಟ್ಗೆ ಇವರು 74 ರನ್ ಸೇರಿಸಿದ್ದು ಸೋಲಿನಲ್ಲೂ ಗಮನ ಸೆಳೆಯಿತು. ಎಡಗೈ ವೇಗಿ ಜೋಶ್ ಲಿಟ್ಲ್ 16 ರನ್ನಿಗೆ 3 ವಿಕೆಟ್ ಪಡೆದರೆ, ಮ್ಯಾಥ್ಯೂ ಹಂಫ್ರಿಸ್ ಮತ್ತು ಬ್ಯಾರಿ ಮೆಕಾರ್ಥಿ ತಲಾ 2 ವಿಕೆಟ್ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.