ಗುರುವಾರ , ಮೇ 13, 2021
34 °C

ಅಮೆರಿಕಾಕ್ಕೆ 9/11 ರ ಭೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್ (ಐಎಎನ್‌ಎಸ್):  ಅಲ್‌ಖೈದಾ ಸ್ಥಾಪಕ ಒಸಾಮ ಬಿನ್ ಲಾಡೆನ್ ಹತ್ಯೆಯ ನಂತರ ಆತನ ಉತ್ತರಾಧಿಕಾರಿ ಎನಿಸಿರುವ ಐಮನ್ ಅಲ್-ಜವಾಹಿರಿ, ಸಂಘಟನೆಯ ಮೇಲೆ ತನ್ನ ಹಿಡಿತ ಸಾಧಿಸಲು ಮುಂದಾಗಿದ್ದಾನೆ.ಈ ನಿಟ್ಟಿನಲ್ಲಿ 9/11ರ ಉಗ್ರರ ದಾಳಿಯ ಹತ್ತನೇ ವರ್ಷಾಚರಣೆ ಸಂದರ್ಭದಲ್ಲಿ ಅಮೆರಿಕದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಬೆಂಬಲಿಗ ಉಗ್ರರಿಗೆ ಆದೇಶಿಸಿದ್ದಾನೆ ಎಂದು ಮಾಧ್ಯಮ ವರದಿಯೊಂದು ತಿಳಿಸಿದೆ.ಅಮೆರಿಕದಲ್ಲಿ ಮತ್ತೆ ಭಯೋತ್ಪಾದಕ ದಾಳಿ ನಡೆಸುವ ಮೂಲಕ ಅಲ್‌ಖೈದಾ ನಾಯಕತ್ವವನ್ನು ತನ್ನ ವಶಕ್ಕೆ ತೆಗೆದುಕೊಳ್ಳಲು  ಜವಾಹಿರಿ ಬಯಸಿದ್ದಾನೆ ಎಂದು `ದಿ ಸನ್~ ಶನಿವಾರ ಪ್ರಕಟಿಸಿದೆ.ಅಮೆರಿಕದ ಮೇಲೆ ಕಾರು ಅಥವಾ ಟ್ರಕ್ ಬಾಂಬ್ ದಾಳಿ ನಡೆಸುವ ಸಾಧ್ಯತೆಗಳ ಗುಪ್ತಚರ ಮಾಹಿತಿ ಹಿನ್ನೆಲೆಯಲ್ಲಿ ಈ ಹಿಂದೆ ದಾಳಿಗೆ ಒಳಗಾಗಿದ್ದ ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ನಗರಗಳಲ್ಲಿ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ಈಗಿನ ಬೆದರಿಕೆ ಜವಾಹಿರಿ ಸೂಚನೆ ಮೇರೆಗೆ ಇದ್ದು, ಸೇತುವೆಗಳು ಮತ್ತು ಸುರಂಗಗಳನ್ನು ಸ್ಫೋಟಿಸಲು ಉಗ್ರರು ಸಂಚು ರೂಪಿಸಿರುವುದಾಗಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

 

 

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.