ಶನಿವಾರ, ಏಪ್ರಿಲ್ 17, 2021
27 °C

ಅರ್ಹ ವ್ಯಕ್ತಿಗೆ ನೈಜ ಗೌರವ: ದಸಂಸ ಪ್ರಶಂಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಕಾಕ: `ತಮ್ಮ ಜನಪರ ಸೇವೆ ಮೂಲಕ ಗುರ್ತಿಸಿಕೊಂಡಿರುವ ಜಿಲ್ಲೆಯ ಯುವ ಧುರೀಣ ಹಾಗೂ ಜಿ.ಪಂ. ಮಾಜಿ ಸದಸ್ಯ ಡಾ. ರಾಜೇಂದ್ರ ಸಣ್ಣಕ್ಕಿ ಅವರಿಗೆ ರಾಜ್ಯ ಸರ್ಕಾರದ ಪ್ರತಿಷ್ಠಿತ ಮಹರ್ಷಿ ಶ್ರೀ ವಾಲ್ಮೀಕಿ ಪ್ರಶಸ್ತಿ ಸಂದಿರುವುದು ಅರ್ಹ ವ್ಯಕ್ತಿ ಗೌರವ~ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಯಲ್ಲಪ್ಪ ಮಾದರ ಅಭಿಪ್ರಾಯ ಪಟ್ಟರು.ಭಾನುವಾರ ಇಲ್ಲಿಯ ತಾ.ಪಂ. ಸಭಾ ಭವನದಲ್ಲಿ ದಲಿತ ಸಂಘರ್ಷ ಸಮಿತಿಯ ತಾಲ್ಲೂಕು ಘಟಕ ಆಯೋಜಿಸಲಾಗಿದ್ದ ಡಾ. ರಾಜೇಂದ್ರ ಸಣ್ಣಕ್ಕಿ ಅವರ ಸನ್ಮಾನ ಹಾಗೂ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ. ರಾಜೇಂದ್ರ ಸಣ್ಣಕ್ಕಿ, ನನ್ನ ಸೇವೆಯನ್ನು ಸರ್ಕಾರ ಗುರುತಿಸಿರುವುದು ನನ್ನ ಮತಕ್ಷೇತ್ರದ ಜನತೆಗೆ ಸಂದ ಗೌರವ ಎಂದು ಹೆಮ್ಮೆಯಿಂದ ಹೇಳಿದರು.ತಾ.ಪಂ. ಅಧ್ಯಕ್ಷೆ ಕಸ್ತೂರಿ ಕೋಣಿ, ಉಪಾಧ್ಯಕ್ಷೆ ಶಾಂತವ್ವ ಸಂಕನ್ನವರ, ನಗರಾಧ್ಯಕ್ಷೆ ಸಾವಿತ್ರಿ ಕಂಬಳಿ, ಬಿ.ಎಸ್. ಪುಠಾಣಿ, ಅಶೋಕ ಉದ್ದಪ್ಪನವರ, ಜಿ.ಪಂ. ಮಾಜಿ ಸದಸ್ಯರಾದ ಶಂಕರ ಬಿಲಕುಂದಿ, ವಿಠ್ಠಲ ಸವದತ್ತಿ ಮತ್ತು ಸುಧೀರ ಜೋಡಟ್ಟಿ, ನಗರಸಭೆ ಸದಸ್ಯ ತಳದಪ್ಪ ಅಮ್ಮಣಗಿ, ಸತ್ಯಜೀತ ಕರವಾಡಿ, ಪರಸಪ್ಪ ಬಬಲಿ, ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.