ಮಂಗಳವಾರ, ಜೂನ್ 15, 2021
21 °C

ಅಳಗಿರಿ ಹೊಸ ಪಕ್ಷ ಸ್ಥಾಪನೆ ಪೋಸ್ಟರ್‌ನಲ್ಲಿ ಸುಳಿವು ಪ್ರಕಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮದುರೆ (ಪಿಟಿಐ): ಡಿಎಂಕೆ ನಾಯಕ ಕರುಣಾ­ನಿಧಿಯವರ ಹಿರಿಯ ಪುತ್ರ ಮತ್ತು ಕೇಂದ್ರದ ಮಾಜಿ ಸಚಿವ ಎಂ.ಕೆ. ಅಳಗಿರಿ ಅವರು ಹೊಸ ಪಕ್ಷ ಸ್ಥಾಪಿಸುವ ಪ್ರಕಟ­ಣೆ­ ಭಾನು­ವಾರ ನಗ­ರದ ಕೆಲವೆಡೆ ಗೋಡೆ ಪೋಸ್ಟ­ರ್‌­ಗಳಲ್ಲಿ ಕಾಣಿ­ಸಿದ್ದು, ಇದು ಕೆಲವು ಊಹಾ­­ಪೋಹ­­ಗಳಿಗೆ ದಾರಿ ಮಾಡಿಕೊಟ್ಟಿದೆ.ಪಕ್ಷದಿಂದ ಅಮಾನತುಗೊಂಡ ನಂತ­ರವೂ ತಾವು ಡಿಎಂಕೆ ಬಿಡುವುದಿಲ್ಲ ಎಂದು ಅಳ­ಗಿರಿ ಹೇಳುತ್ತಿದ್ದರೂ, ಅವರ ಬೆಂಬ­ಲಿ­ಗರು ಎನ್ನಲಾದ ಕೆಲವರು ಈ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ.ಅಳ­ಗಿರಿ ಮನೆಯ ಬಳಿ ಹಾಕಿರುವ  ಪೋಸ್ಟರ್‌­­ನಲ್ಲಿ ‘ಕಲೈನ್‌ಗರ್‌ ಡಿಎಂಕೆ’ ಸಿದ್ಧವಾ­ಗಿದ್ದು, ಈ ಅತೃಪ್ತ ನಾಯಕನೇ ಅದರ ಪ್ರಧಾನ ಕಾರ್ಯದರ್ಶಿ ಎಂದು ಘೋಷಿಸ­ಲಾಗಿದೆ.ತಮ್ಮ ಬೆಂಬಲಿಗರ ಸಭೆಗೂ ಮುನ್ನಾ ದಿನ ಕಾಣಿಸಿಕೊಂಡಿರುವ ಈ ಪೋಸ್ಟರ್‌­ಗಳಲ್ಲಿ ‘ನಮ್ಮ ಪಕ್ಷ, ಬಾವುಟ ತಯಾ­ರಾಗಿದ್ದು, ಲೋಕಸಭಾ ಚುನಾ­ವ­ಣೆ ಎದುರಿಸಲು ನಮ್ಮ್ನನ್ನು ಬಿಡಿ’ ಎಂದೂ ಬರೆಯಲಾಗಿದೆ.ಈಗ ಕಾಣಿಸಿರುವ ಪೋಸ್ಟರ್‌ಗಳಲ್ಲಿ ಅಳಗಿರಿ, ಅವರ ಪುತ್ರ ದಯಾನಿಧಿ, ಮಾಜಿ ಉಪ ಮೇಯರ್‌ ಪಿ.ಎಂ. ಮನ್ನಾನ್‌ ಮತ್ತಿತರರ ಭಾವಚಿತ್ರಗಳಿವೆ.ಡಿಎಂಕೆಯಿಂದ ಲೋಕ­ಸಭಾ ಟಿಕೆಟ್‌ ನಿರಾಕರಿಸಲ್ಪಟ್ಟ ನಂತರ ಪಕ್ಷದ ದಕ್ಷಿಣ ವಲಯ ಸಂಘಟನಾ ಕಾರ್ಯದರ್ಶಿ­ಯಾಗಿದ್ದ ಸಂಸದ ಅಳಗಿರಿ, ಕಳೆದ ವಾರ ಪ್ರಧಾನಿ ಮನ­ಮೋಹನ್‌ ಸಿಂಗ್‌, ಬಿಜೆಪಿ ಅಧ್ಯಕ್ಷ ರಾಜ­ನಾಥ್‌ ಸಿಂಗ್‌ ಮತ್ತು ತಮಿಳು ಸೂಪರ್‌­ಸ್ಟಾರ್‌ ರಜನಿ ಕಾಂತ್‌ ಅವ­ರನ್ನು ಭೇಟಿ­ಯಾಗಿದ್ದು, ಹಲವು ಶಂಕೆಗಳನ್ನು ಹುಟ್ಟಿಸಿದ್ದವು.ಆದರೆ ಈ ಬಗ್ಗೆ ಪ್ರತಿಕ್ರಿಯಿಸಿ­ರುವ ಡಿಎಂಕೆ ಹಿರಿಯ ನಾಯಕ­ರೊಬ್ಬರು, ‘ಅಳಗಿರಿಯವರ ಕೆಲವು ಶಂಕಿತ ಬೆಂಬಲಿ­ಗರು ಹೊಸ ಪಕ್ಷ ಸ್ಥಾಪಿಸಲು ಪ್ರಚೋ­ದನೆ ನೀಡಿ ಈ ಪೋಸ್ಟರ್‌ಗಳನ್ನು ಹಾಕಿ­ದ್ದಾರೆ’ ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.