ಶುಕ್ರವಾರ, ಮೇ 7, 2021
26 °C

ಅವ್ಯವಸ್ಥೆಯ ಆಗರ ಡಂಬಳ ಬಸ್‌ನಿಲ್ದಾಣ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಂಬಳ: ಮುಂಡರಗಿ ತಾಲ್ಲೂಕಿನ ಅತಿ ದೊಡ್ದ ಗ್ರಾಮ ಎನ್ನಿಸಿಕೊಂಡಿರುವ ಡಂಬಳದ ಬಸ್ ನಿಲ್ದಾಣ ಅಗತ್ಯ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿದ್ದು, ಬಸ್ ನಿಲ್ದಾಣ ಇದ್ದೂ ಇಲ್ಲದಂತಾಗಿರುವ ಸ್ಥಿತಿ ಸಾರ್ವಜನಿಕರಿಗೆ ಬಂದೊದಗಿದೆ.ದಿನ ನಿತ್ಯ ವಿವಿಧ ಕಡೆಗೆ ಪ್ರಯಾಣ ಮಾಡಲೆಂದು ಆಗಮಿಸುವ ಸಾರ್ವಜನಿಕರು ಇಲ್ಲಿನ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಪರದಾಡುವಂತಾಗಿದೆ. ವಾಯುವ್ಯ ಸಾರಿಗೆ ಸಂಸ್ಥೆಯ ಮುಂಡರಗಿ ಘಟಕದವರಿಗೆ ಹಿಡಿಶಾಪ ಹಾಕುತ್ತ ಬೇರೆ ದಾರಿ ಇಲ್ಲದೆ ನಿಲ್ದಾಣದಲ್ಲಿಯೇ ಕೂರುತ್ತಾರೆ.ಈ ಬಗೆಗೆ ಇತ್ತೀಚೆಗೆ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತಾ.ಪಂ. ಸದಸ್ಯ ಎನ್.ಟಿ. ಪ್ಯಾಟಿ `ಡಂಬಳ ಬಸ್ ನಿಲ್ದಾಣದೆಡೆಗೆ ಬಸ್ ಬರುತ್ತಿದ್ದಂತೆ ನಿದ್ದೆಗೆ ಜಾರಿದವರು ಏಳುತ್ತಾರೆ~ ಎಂದು ಬಸ್ ನಿಲ್ದಾಣದ ಅವ್ಯವಸ್ಥೆ ಕುರಿತು ಗಮನ ಸೆಳೆದಿದ್ದರು. ಶೌಚಾಲಯವನ್ನು ಸ್ವಚ್ಛತೆ ಮಾಡಿ ದುರಸ್ತಿಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಪ್ರವಾಸಿ ತಾಣವಾಗಿ ಹೆಸರು ಪಡೆದಿರುವ ಡಂಬಳಕ್ಕೆ ದಿನನಿತ್ಯ ಬಂದು ಹೋಗುವ ಪ್ರವಾಸಿ ಗರು, ಪ್ರಯಾಣಿಕರು, ಮೂಲ ಸೌಲಭ್ಯಗಳಾದ ಕುಡಿಯುವ ನೀರು ದೊರೆಯದೆ, ಸರ್ಮಪಕ ವಿದ್ಯುತ್ ದೀಪಗಳ ವ್ಯವಸ್ಥೆ ಇಲ್ಲದೆ, ಶೌಚಾ ಲಯಗಳ ಅಸಮರ್ಪಕ ನಿರ್ವಹಣೆಯಿಂದಾಗಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ.ಬಸ್‌ನಿಲ್ದಾಣ ನಿರ್ಮಾಣವಾಗಿ ದಶಕ ಕಳೆದರೂ ಶೌಚಾಲಯ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿಲ್ಲ ಅಪಾರ ಪ್ರಮಾಣದ ಹಣ ಪೋಲು ಮಾಡಿ ನಿರ್ಮಿಸಿದಂತಿರುವ ಶೌಚಾಲ ಯಗಳು ಹೆಸರಿಗೆ ಮಾತ್ರ ಎಂಬಂತೆ ಗೋಚರಿಸುತ್ತ ಯಾರ ನೆರವಿಗೂ ಬಾರದಂತಾಗಿವೆ. ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ ಈ ಕುರಿತು ಅನೇಕ ಬಾರಿ ಗ್ರಾಮಸ್ಥರು ಮನವಿ ಸಲ್ಲಿಸಿದ್ದರೂ ಅಷ್ಟೆ, ಯಾವುದೇ ಪ್ರಯೋಜನವಾಗಿಲ್ಲ.ಬಸ್ ನಿಲ್ದಾಣಕ್ಕೆ ಮೂಲ ಸೌಕರ್ಯ ನೀಡಲು ಸರ್ಕಾರ 22.50 ಲಕ್ಷ ರೂಪಾಯಿ ಮಂಜೂರು ಮಾಡಿದೆ. ಈಗಾಗಲೇ ಟೆಂಡರ್ ಪಡೆದಿರುವ ಗುತ್ತಿಗೆದಾರರು ಕಾಮಗಾರಿ ಆರಂಭಿಸಲಿದ್ದಾರೆ ಎಂದು ಕಾರ್ಯನಿರ್ವಾಹಕ ಎಂಜಿನಿಯರ್ ರವಿಶಂಕರ `ಪ್ರಜಾವಾಣಿ~ಗೆ ತಿಳಿಸಿದರು.ಡಂಬಳ ಮಾರ್ಗದಲ್ಲಿ ಅತಿ ಹೆಚ್ಚು ಆದಾಯ ಸಾರಿಗೆ ಇಲಾಖೆಗೆ ದೊರಕುತ್ತಿದ್ದು, ಸುಸ್ಥಿರವಾ ಗಿರುವ ಬಸ್ ವ್ಯವಸ್ಥೆ ಕಲ್ಪಿಸುವ ಬೇಕು. ಮುಂಡ ರಗಿಯಿಂದ ಗದಗ ಮಾರ್ಗವಾಗಿ ತೆರಳುವ ಬಸ್‌ಗಳನ್ನು ಗ್ರಾಮದೊಳಗೆ ಬಿಡಬೇಕು. ಮಹಿಳಾ ನಿರ್ವಾಹಕರು ಸಾರ್ವಜನಿಕರಿಗೆ ಸೌಜನ್ಯದಿಂದ ನಡೆದುಕೊಳ್ಳವಂತೆ ಹಿರಿಯ ಅಧಿಕಾರಿಗಳು ಜಾಗೃತಿ ವಹಿಸುವ ಅಗತ್ಯವಿದೆ ಎಂದು ಆಗ್ರಹಿಸಿ ರುವ ಪ್ರಯಾಣಿಕರು, ಈಗಲಾದರೂ ಬಸ್ ನಿಲ್ದಾಣದ ಕಾಮಗಾರಿಯನ್ನು ಬೇಗನೆ ಮುಗಿಸುವತ್ತ ಗಮನಹರಿಸಬೇಕು ಎಂದು ಒತ್ತಾ ಯಿಸಿದ್ದಾರೆ.

ಸಿದ್ಧಲಿಂಗೇಶ ಯಂಡಿಗೇರಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.