ಬುಧವಾರ, ಮೇ 12, 2021
24 °C

ಆಕಸ್ಮಿಕ ಬೆಂಕಿ: 10 ಲಕ್ಷ ರೂಪಾಯಿ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರಪುರ: ಕುಂಬಾರ–ಪೇಟೆಯಲ್ಲಿರುವ ರಂಗನಾಥ ಜಿನ್ನಿಂಗ್ ಮತ್ತು ಪ್ರೆಸಿಂಗ್ ಮಿಲ್‌ನಲ್ಲಿ ಮಂಗಳವಾರ ಮಧ್ಯಾಹ್ನ ಆಕಸ್ಮಿಕ ಬೆಂಕಿ ಅಪಘಾತ ಸಂಭವಿಸಿದೆ. ಅಂದಾಜು ರೂ. 10 ಲಕ್ಷ ಮೌಲ್ಯದ ಅರಳೆ ಸುಟ್ಟು ಕರಕಲಾಗಿದೆ. ಶೀಘ್ರದಲ್ಲಿ ಅಗ್ನಿ ಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಇಲ್ಲದಿದ್ದರೆ ಹಾನಿಯ ಮೌಲ್ಯ ಇನ್ನಷ್ಟು ಹೆಚ್ಚುತ್ತಿತ್ತು.ಹತ್ತಿಯನ್ನು ಜಿನ್ನಿಂಗ್ ಮಾಡಿ ಅರಳೆಯಾಗಿ ಪರಿವರ್ತಿಸಿ ಮಿಲ್‌ನ ಪಾಲಾಹೌಸ್‌ನಲ್ಲಿ ಸಂಗ್ರಹಿಸಲಾಗಿತ್ತು. ಕಳೆದ ತಿಂಗಳು ಇದೇ ರೀತಿ ಅಗ್ನಿ ಆಕಸ್ಮಿಕ ಸಂಭವಿಸಿ 20 ಲಕ್ಷ ರೂಪಾಯಿ ಮೌಲ್ಯದ ಹತ್ತಿ ಸುಟ್ಟಿತ್ತು. ಮಿಲ್‌ನ ಸುಪರ್‌ವೈಸರ್ ದೇವಿಂದ್ರಪ್ಪ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಸುರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.