ಸೋಮವಾರ, ಮೇ 23, 2022
24 °C

`ಆತುರದಲ್ಲಿ ಗಡಿ ವಿವಾದ ಇತ್ಯರ್ಥವಿಲ್ಲ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಗಪುರ (ಪಿಟಿಐ): ಚೀನಾ ಜತೆಗಿನ ಗಡಿ ವಿವಾದವನ್ನು ಆತುರದಲ್ಲಿ ಬಗೆಹರಿಸಿಕೊಳ್ಳಲು ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಶುಕ್ರವಾರ  ತಿಳಿಸಿದ್ದಾರೆ.ಇಲ್ಲಿಗೆ ಭೇಟಿ ನೀಡಿರುವ ಅವರು, ಗಡಿ ವಿವಾದ ಇತ್ಯರ್ಥಕ್ಕೆ ಹಂತ ಹಂತವಾಗಿ ಮಾತುಕತೆ ನಡೆಸಿ ಪ್ರಗತಿ ಸಾಧಿಸಲಾಗುವುದು ಎಂದು ಹೇಳಿದ್ದಾರೆ. ಉಭಯ ರಾಷ್ಟ್ರಗಳ ಮಧ್ಯೆ ದ್ವಿಪಕ್ಷೀಯ ಸಂಬಂಧ ಸುಧಾರಣೆ ಆಗಿದ್ದರೂ ಗಡಿ ಸಮಸ್ಯೆ ಇತ್ಯರ್ಥಕ್ಕೆ ಆತುರದ ಕ್ರಮ ಸಾಧ್ಯವಿಲ್ಲ ಎಂದೂ ನುಡಿದಿದ್ದಾರೆ.ವ್ಯಾಪಾರ ವೃದ್ಧಿಗೆ ಒತ್ತು: ಆಸಿಯಾನ್ ರಾಷ್ಟ್ರಗಳಲ್ಲಿ ಭಾರತವು ನಮ್ಮ ಆಪ್ತ ರಾಷ್ಟ್ರವಾಗಿರುವುದರಿಂದ ಎರಡೂ ದೇಶಗಳ ಮಧ್ಯೆ ದ್ವಿಪಕ್ಷೀಯ ಸಂಬಂಧಕ್ಕಿಂತ ಹೆಚ್ಚಾಗಿ ಬಹುವಿಧದ ವ್ಯವಹಾರಗಳ ವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಎಂದು ಸಿಂಗಪುರ ಪ್ರಧಾನಿ ಲೀ ಹೈನ್ ಲೂಂಗ್ ತಿಳಿಸಿದ್ದಾರೆ.ಪಾಕ್ ಪ್ರತಿಕ್ರಿಯೆ ನಿರೀಕ್ಷೆಯಲ್ಲಿ: ಮುಂಬೈ ಮೇಲೆ ದಾಳಿ ಮಾಡಲು ಕಾರಣರಾದ ಭಯೋತ್ಪಾದಕರ ವಿರುದ್ಧ ಕ್ರಮ ಸೇರಿದಂತೆ ಇನ್ನಿತರ ತುರ್ತು ವಿಷಯಗಳ ಬಗ್ಗೆ ಪಾಕಿಸ್ತಾನದ ಹೊಸ ಸರ್ಕಾರವು ಶೀಘ್ರ ಪ್ರತಿಕ್ರಿಯೆ ನೀಡುತ್ತದೆ ಎಂಬ ನಿರೀಕ್ಷೆ ಇದೆ ಎಂದು ಖುರ್ಷಿದ್ ತಿಳಿಸಿದ್ದಾರೆ.ಆಫ್ಘನ್‌ಗೆ ಶಸ್ತ್ರಾಸ್ತ್ರ ನೀಡೆವು: ಈಗಿನ ಸ್ಥಿತಿಯಲ್ಲಿ ಮಾರಕ ಶಸ್ತ್ರಾಸ್ತ್ರ ಪೂರೈಸಲು ಸಾಧ್ಯವಿಲ್ಲ ಎಂದು ಆಫ್ಘನ್‌ಗೆ ತಿಳಿಸಲಾಗಿದೆ ಎಂದು ಖುರ್ಷಿದ್ ಹೇಳಿದ್ದಾರೆ. ಆಫ್ಘನ್ ಅಧ್ಯಕ್ಷ ಹಮಿದ್ ಕರ್ಜೈ ಇದನ್ನು ಪ್ರಧಾನಿ ಸಿಂಗ್ ಜತೆ ಪ್ರಸ್ತಾಪ ಮಾಡಿದಾಗ ಮಾರಕ ಶಸ್ತ್ರಾಸ್ತ್ರದ ಬದಲು ಸಾಧಾರಣ ಶಸ್ತ್ರಾಸ್ತ್ರ ಪೂರೈಸುವುದರ ಬಗ್ಗೆ ಭರವಸೆ ನೀಡಲಾಗಿದೆ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.