ಗುರುವಾರ , ಜೂಲೈ 9, 2020
24 °C

ಆನಂದ್‌ಗೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನಂದ್‌ಗೆ ಸೋಲು

ಮೊನಾಕೊ (ಪಿಟಿಐ): ವಿಶ್ವನಾಥನ್ ಆನಂದ್ ಅವರು ಇಲ್ಲಿ ನಡೆಯುತ್ತಿರುವ ಅಂಬರ್ ಬ್ಲೈಂಡ್‌ಫೋಲ್ಡ್ ಮತ್ತು ರ್ಯಾಪಿಡ್ ಚೆಸ್ ಟೂರ್ನಿಯ ಎಂಟನೇ ಸುತ್ತಿನ ಪಂದ್ಯದಲ್ಲಿ ಅರ್ಮೇನಿಯದ ಲೆವೊನ್ ಅರೋನಿಯನ್ ಎದುರು ಸೋಲು ಅನುಭವಿಸಿದರು. ಸೋಮವಾರ ನಡೆದ ಪಂದ್ಯದಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್ 0.5-1.5 ಪಾಯಿಂಟ್‌ಗಳಿಂದ ಎದುರಾಳಿಗೆ ಶರಣಾದರು. ಬ್ಲೈಂಡ್‌ಫೋಲ್ಡ್ ಪಂದ್ಯದಲ್ಲಿ ಡ್ರಾ ಸಾಧಿಸಿದ ಆನಂದ್ ರ್ಯಾಪಿಡ್ ಪಂದ್ಯದಲ್ಲಿ ಪರಾಭವಗೊಂಡರು.ಸೋಲು ಅನುಭವಿಸಿದ ಕಾರಣ ಆನಂದ್ ಇಲ್ಲಿ ಅಗ್ರಸ್ಥಾನ ಪಡೆಯುವ ಸಾಧ್ಯತೆ ಮತ್ತಷ್ಟು ಕ್ಷೀಣಿಸಿದೆ. ಇದೀಗ ಅರೋನಿಯನ್ ಅವರು ಒಟ್ಟು 11.5 ಪಾಯಿಂಟ್‌ಗಳೊಂದಿಗೆ ಎಲ್ಲರಿಗಿಂತ ಮುಂದಿದ್ದಾರೆ. ನಾರ್ವೆಯ ಮ್ಯಾಗ್ನಸ್ ಕಾರ್ಲ್‌ಸನ್ 10 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ.  ಆನಂದ್ ಅವರು ಉಕ್ರೇನ್‌ನ ವಾಸಿಲಿ ಇವಾಂಚುಕ್ ಜೊತೆ ಮೂರನೇ ಸ್ಥಾನ ಹಂಚಿಕೊಂಡಿದ್ದಾರೆ. ಆದರೆ ಆನಂದ್ ಅವರು ಅರೋನಿಯನ್‌ಗಿಂತ ಮೂರು ಪಾಯಿಂಟ್‌ನಷ್ಟು ಹಿಂದಿದ್ದಾರೆ. ಈ ಕಾರಣ ಮುಂದಿನ ಸುತ್ತುಗಳಲ್ಲಿ ಪವಾಡ ನಡೆದರಷ್ಟೇ ಆನಂದ್‌ಗೆ ಇಲ್ಲಿ ಪ್ರಶಸ್ತಿ ಜಯಿಸಲು ಸಾಧ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.