ವಿಶಾಖಪಟ್ಟಣ: ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಬ್ಯಾಟರ್ ಸಂಜು ಸ್ಯಾಮ್ಸನ್ ಪರ ಟೀಂ ಇಂಡಿಯಾದ ಬೌಲಿಂಗ್ ಕೋಚ್ ಮಾರ್ನೆ ಮಾರ್ಕೆಲ್ ಅವರು ಬ್ಯಾಟ್ ಬೀಸಿದ್ದಾರೆ.

ಸಂಜು ಸ್ಯಾಮ್ಸನ್ ಅವರು ಉತ್ತಮ ಬ್ಯಾಟರ್, ಅವರಿಂದ ಒಂದು ಉತ್ತಮ ಇನ್ಸಿಂಗ್ಸ್ ಬಂದರೂ ಅವರಿಗೆ ತಮ್ಮ ಮೇಲೆ ವಿಶ್ವಾಸ ಬರುತ್ತದೆ. ಅವರು ಮತ್ತೆ ಫಾರ್ಮ್ಗೆ ಮರಳುತ್ತಾರೆ ಎಂದು ಹೇಳಿದ್ದಾರೆ.

ವಿಶ್ವಕಪ್ಗೂ ಮುನ್ನ ತಂಡದ ಆಟಗಾರರು ಲಯಕ್ಕೆ ಮರಳುವುದು ಮುಖ್ಯವಾಗಿದೆ. ಸಂಜು, ನೆಟ್ಸ್ನಲ್ಲಿ ಉತ್ತಮವಾಗಿ ಆಡುತ್ತಿದ್ದಾರೆ, ಅವರ ಮೇಲೆ ಭರವಸೆಯಿದೆ. ಆಟಗಾರರ ವೈಯಕ್ತಿಕ ಪ್ರದರ್ಶನಕ್ಕಿಂತ ತಂಡ ಗೆಲ್ಲುವುದು ಮುಖ್ಯವಾಗುತ್ತದೆ ಎಂದು ತಿಳಿಸಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ–20 ಸರಣಿಯ ಮೂರು ಪಂದ್ಯಗಳಲ್ಲಿ ಭಾರತ ಬ್ಯಾಟರ್ಗಳು ರನ್ ಮಳೆ ಹರಿಸಿದ್ದರೆ, ಆರಂಭಿಕನಾಗಿ ಆಡುತ್ತಿರುವ ಸಂಜು ಸ್ಯಾಮ್ಸನ್ ಬ್ಯಾಟ್ನಿಂದ 3 ಪಂದ್ಯಗಳಲ್ಲಿ ಕೇವಲ 16 ರನ್ ಬಂದಿದೆ. 10 ರನ್ ಗಳಿಸಿರುವುದು ಅವರ ಗರಿಷ್ಠ ರನ್ ಆಗಿದೆ.

ಐದು ಪಂದ್ಯಗಳ ಸರಣಿಯಲ್ಲಿ ಭಾರತವು 3–0 ಅಲ್ಲಿ ಮುನ್ನಡೆಯಲ್ಲಿದೆ. ನಾಲ್ಕನೇ ಪಂದ್ಯವು ಜ.28ರಂದು ವಿಶಾಖಪಟ್ಟಣದಲ್ಲಿ ಜರುಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.