ಬೆಂಗಳೂರು: ಕರ್ನಾಟಕದ ಪ್ಯಾರಾ ಈಜುಪಟುಗಳಾದ ಶ್ರೀಧರ್ ನಾಗಪ್ಪ ಮಾಳಗಿ, ಪುನೀತ್ ನಂದಕುಮಾರ್ ಮತ್ತು ಸಾಹಿಲ್ ರಾಜಾರಾಮ್ ಜಾಧವ್ ಅವರು ಐಸ್ಲ್ಯಾಂಡ್ನಲ್ಲಿ ಈಚೆಗೆ ನಡೆದ ‘ರೆಖ್ವೀಕ್ ಇಂಟರ್ನ್ಯಾಷನಲ್ ಗೇಮ್ಸ್’ನಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕಗಳನ್ನು ಗೆದ್ದಿದ್ದಾರೆ.

ಬೆಳಗಾವಿಯ ಶ್ರೀಧರ್ 50 ಮೀ. ಬ್ರೆಸ್ಟ್ಸ್ಟ್ರೋಕ್ನಲ್ಲಿ ಚಿನ್ನದ ಪದಕ ಗೆದ್ದರೆ, 50 ಮೀ. ಬಟರ್ಫೈ, 100 ಮೀ. ಫ್ರೀಸ್ಟೈಲ್, 400 ಮೀ.ಫ್ರೀಸ್ಟೈಲ್ನಲ್ಲಿ ಬೆಳ್ಳಿ ಪದಕ ಜಯಿಸಿದರು. 50 ಮೀ. ಫ್ರೀಸ್ಟೈಲ್, 100 ಮೀ. ಬ್ಯಾಕ್ಸ್ಟ್ರೋಕ್ ಮತ್ತು 100 ಮೀ.ಬಟರ್ಫೈ ಸ್ಪರ್ಧೆಗಳಲ್ಲಿ ಕಂಚಿನ ಪದಕಗಳಿಗೆ ಕೊರಳೊಡ್ಡಿದರು.

ಬೆಂಗಳೂರಿನ ಪುನೀತ್ 200 ಮೀ. ವೈಯಕ್ತಿಕ ಮೆಡ್ಲೆ ಮತ್ತು 200 ಮೀ. ಫ್ರೀಸ್ಟೈಲ್ ಸ್ಪರ್ಧೆಗಳಲ್ಲಿ ಬೆಳ್ಳಿ ಹಾಗೂ 100 ಮೀಟರ್ ಬ್ರೆಸ್ಟ್ ಸ್ಟ್ರೋಕ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.

ಬೆಳಗಾವಿಯ ಸಾಹಿಲ್ ಅವರು 50 ಮೀ. ಬ್ಯಾಕ್ಸ್ಟ್ರೋಕ್ನಲ್ಲಿ ಬೆಳ್ಳಿ ಮತ್ತು 200 ಮೀ. ವೈಯಕ್ತಿಕ ಮೆಡ್ಲೆಯಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಬಸವನಗುಡಿ ಈಜು ಕೇಂದ್ರದ ಕೋಚ್ ಜಾನ್ ಕ್ರಿಸ್ಟೋಫರ್ ಅವರು ಭಾರತದ ತಂಡದೊಂದಿಗೆ ಕೂಟದಲ್ಲಿ ಭಾಗವಹಿಸಿದ್ದರು. ಐಸ್ಲ್ಯಾಂಡ್ನ ರಾಜಧಾನಿ ರೆಖ್ವೀಕ್ನಲ್ಲಿ 23ರಿಂದ 25ರವರೆಗೆ ಕ್ರೀಡಾಕೂಟ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.