ಮಾಗಡಿ: ತಾಲ್ಲೂಕಿನ ಸಾವನದುರ್ಗ ತಪ್ಪಲಿನ ಪೋಲೇನಹಳ್ಳಿಯ ಮಾವಿನ ತೋಟಗಳಿಗೆ ಶುಕ್ರವಾರ ರಾತ್ರಿ ನುಗ್ಗಿದ ಆನೆಗಳು ತೋಟವನ್ನು ನಾಶ ಮಾಡಿವೆ.

ರೈತರಾದ ಶಿವಣ್ಣ ಮತ್ತು ಚಿತ್ತಯ್ಯ ಅವರ ತೋಪಿನಲ್ಲಿ ಫಸಲಿಗೆ ಬಂದಿದ್ದ ಸುಮಾರು 41 ಮಾವಿನ ಮರಗಳನ್ನು ಆನೆಗಳು ಹಾಳು ಮಾಡಿವೆ. ಭವತಾರಿಣಿ ಆಶ್ರಮದ ತೋಟಕ್ಕೂ ದಾಳಿ ಮಾಡಿರುವ ಆನೆಗಳು ತೆಂಗು ಮತ್ತು ಮಾವಿನ ಫಸಲನ್ನು ಹಾಳುಗೆಡವಿವೆ.

ರೈತರು ಶನಿವಾರ ಅರಣ್ಯ ಇಲಾಖೆಯ ಕಚೇರಿ ಎದುರು ನೆಲಕ್ಕುದುರಿದ ಮಾವಿನ ಕಾಯಿಗಳನ್ನು ಸುರಿದು ಪರಿಹಾರ ದೊರಕಿಸಿ ಕೊಡುವಂತೆ ಆಗ್ರಹಿಸಿದರು.

ಸೋಲಾರ್ ಬೇಲಿ: ಮಾವಿನ ಫಸಲು ಕಳೆದುಕೊಂಡವರ ಮನವಿ ಸ್ವೀಕರಿಸಿ ಮಾತನಾಡಿದ ವಲಯ ಅರಣ್ಯ ಅಧಿಕಾರಿ ಸುದರ್ಶನ್, ಸಾವನದುರ್ಗದ ಅರಣ್ಯದ ಅಂಚಿನ ಗ್ರಾಮದ ತೋಟಗಳಿಗೆ ಪ್ರತಿವರ್ಷವೂ ಆನೆಗಳು ದಾಳಿ ಮಾಡುತ್ತಿದ್ದು, ಇದರಿಂದ ಅಪಾರ ಬೆಳೆ ನಷ್ಟವಾಗುತ್ತಿದೆ. ಸಾವನದುರ್ಗ ಅರಣ್ಯದ ಸುತ್ತ 25 ಕಿ.ಮಿ ವ್ಯಾಪ್ತಿಯಲ್ಲಿ ಸೋಲಾರ್ ಬೇಲಿ ಅಳವಡಿಸಿ ರೈತರ ಫಸಲನ್ನು ರಕ್ಷಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ವೀರಾಪುರ ಕಾಡಿನಿಂದ 2 ಆನೆ ನಾಪತ್ತೆಯಾಗಿವೆ. ಈ ಆನೆಗಳು ರಾತ್ರಿ ವೇಳೆ ರೈತರ ತೋಟಗಳತ್ತ ನುಗ್ಗುತ್ತಿವೆ. ಒಟ್ಟು 5 ಆನೆಗಳನ್ನು ಸಾವನದುರ್ಗ ಅರಣ್ಯದಿಂದ ಬನ್ನೇರುಘಟ್ಟ ಅರಣ್ಯಕ್ಕೆ ಓಡಿಸಲು ಅರಣ್ಯ ಇಲಾಖೆಯ ಸಿಬ್ಬಂದಿ ಶ್ರಮಿಸುತ್ತಿದ್ದಾರೆ.

ಪ್ರತಿ ವರ್ಷ ಬನ್ನೇರುಘಟ್ಟ ಅರಣ್ಯದಿಂದ ಬರುವ ಆನೆಗಳು, ಮಂಚನಬೆಲೆಯ ಜಲಾಶಯದ ಹಿನ್ನೀರಿನ ಹಳ್ಳದಲ್ಲಿ ಸಂಚರಿಸಿ ಶಿವಗಂಗೆಯವರೆಗೆ ಕ್ರಮಿಸುತ್ತವೆ. ಗುಡ್ಡಹಳ್ಳಿ, ಮರಲಗೊಂಡಲ, ತಗ್ಗಿಕುಪ್ಪೆ, ಭಂಟರಕುಪ್ಪೆ, ಸೋಲೂರು, ಕುದೂರು, ಅದರಂಗಿ, ಬೆಟ್ಟಹಳ್ಳಿ, ಶ್ರೀಗಿರಿಪುರ, ಶಿವಗಂಗೆ ಸುತ್ತಮುತ್ತಲಿನ ರೈತ ತೋಟ, ಹೊಲಗದ್ದೆಗಳಿಗೆ ನುಗ್ಗುತ್ತವೆ ಎಂದು ಮಾಹಿತಿ ನೀಡಿದರು.

ಮನವಿ: ಆನೆಗಳ ಹಾವಳಿಯನ್ನು ಶಾಶ್ವತವಾಗಿ ತಡೆಗಟ್ಟಲು ಸಾವನದುರ್ಗ ಅರಣ್ಯದ ಸುತ್ತ ಸೋಲಾರ್ ಬೇಲಿ ನಿರ್ಮಾಣ ಅನಿವಾರ್ಯವಾಗಿದೆ. ಈ ಕುರಿತಂತೆ ಅರಣ್ಯ ಸಚಿವ ಸಿ.ಪಿ.ಯೋಗೇಶ್ವರ್ ಅವರಿಗೆ ಈಗಾಗಲೇ ಮನವಿ ಮಾಡಲಾಗಿದೆ ಎಂದು ಪ್ರಗತಿಪರ ರೈತ ಕುಂಬಳ ಕಾಯಿ ಗಂಗಣ್ಣ, ಶ್ಯಾನುಭೋಗನ ಹಳ್ಳಿಯ ರಾಮಚಂದ್ರಯ್ಯ, ಪೋಲೇನಹಳ್ಳಿಯ ಕೆಂಚಪ್ಪ, ಶಿವಣ್ಣ, ಪೂಜಾರಿ ಚಿಕ್ಕಣ್ಣಪ್ಪ, ಮರಲಗೊಂಡಲದ ಮರಿಯಪ್ಪ ಹಾಗೂ ಇತರರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.