ಗುರುವಾರ , ಫೆಬ್ರವರಿ 25, 2021
23 °C

ಆಮ್‌ ಆದ್ಮಿಯಿಂದ ಜಾಗೃತಿ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಮ್‌ ಆದ್ಮಿಯಿಂದ ಜಾಗೃತಿ ಅಭಿಯಾನ

ಬೆಂಗಳೂರು: ನಾಗರಿಕರಿಗೆ ನೈತಿಕ ರಾಜಕಾರಣದ ಬಗ್ಗೆ ಅರಿವು ಮೂಡಿ­ಸುವ ಸಲುವಾಗಿ ಆಮ್‌ ಆದ್ಮಿ ಪಕ್ಷ (ಎಎಪಿ) ಇದೇ ತಿಂಗಳ ಮೊದಲ ವಾರ­ದಿಂದ ರಾಜ್ಯಾದ್ಯಂತ ‘ಮನೆ ಮನೆಯಲ್ಲಿ ಆಮ್‌ ಆದ್ಮಿ, ಮನೆ ಮನೆಗೂ ಆಮ್‌ ಆದ್ಮಿ’ ಎಂಬ ಜನ ಜಾಗೃತಿ ಅಭಿಯಾನ­ವನ್ನು ಪ್ರಾರಂಭಿಸಲಿದೆ.ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತ­ನಾ­ಡಿದ ಪಕ್ಷದ ಮುಖಂಡ ಪೃಥ್ವಿರೆಡ್ಡಿ, ಈ ಅಭಿಯಾನದ ಮೂಲಕ ಪ್ರತಿ ಮನೆಯಲ್ಲೂ ಕಾರ್ಯಕರ್ತರನ್ನು ಗುರು­ತಿ­ಸು­ವುದರ ಜತೆಗೆ ಸಾಮಾನ್ಯ ಜನರ ಕುಂದುಕೊರತೆಗಳನ್ನು ಆಲಿಸಲಾ­ಗು­ವುದು ಎಂದರು.

 

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಶುಕ್ರವಾರ ಭ್ರಷ್ಟರ ಪಟ್ಟಿ ಬಿಡುಗಡೆ ಮಾಡಿದ್ದು, ಅಂತಹ ಭ್ರಷ್ಟರಿಗೆ ಈ ಲೋಕಸಭಾ ಚುನಾವಣೆಯಲ್ಲಿ ಪಾಠ ಕಲಿಸುವಂತೆ ಮನವಿ ಮಾಡಲಾ­ಗುವುದು ಎಂದು ತಿಳಿಸಿದರು.ಪಕ್ಷಕ್ಕೆ ಸೇರ್ಪಡೆ: ನಿವೃತ್ತ ರಾಯಭಾರಿ ಪಿ.ಎ. ನಜರತ್, ಉದ್ಯಮಿ ರಮಣಿಕ್ ಬಕ್ಷಿ, ಇನ್ಫೊಸಿಸ್‌ನ ನಿವೃತ್ತ ಸಿಎಫ್‌ಓ ವಿ.ಬಾಲಕೃಷ್ಣನ್‌, ಲೋಕಸತ್ತಾ ಪಕ್ಷದಲ್ಲಿದ್ದ ರವಿ ಕೃಷ್ಣರೆಡ್ಡಿ ಮತ್ತು ಶಾಂತಲಾ ದಾಮ್ಲೆ ಅಧಿಕೃತವಾಗಿ ಎಎಪಿಗೆ ಸೇರ್ಪಡೆಯಾದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.