ರೋಣ: ದೇಶದಲ್ಲಿ ಅನೇಕ ವೈದ್ಯಕೀಯ ಪದ್ಧತಿಗಳು ಇವೆ. ಆಯಾ ಪದ್ಧತಿಯಲ್ಲಿ ಪರಣಿತಿ ಹೊಂದಿರುವವರು ಮಾತ್ರ ಆಯಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬೇಕು. ಬೇರೆ ಪದ್ಧತಿಯಲ್ಲಿ ಸೇವೆ ಸಲ್ಲಿಸಿದರೆ ಅವರನ್ನು ನಕಲಿ ವೈದ್ಯರು ಎಂದು ಪರಿಗಣಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘ ತಾಲ್ಲೂಕು ಘಟಕ ಆಗ್ರಹಿಸಿದೆ.

ಅವರು ಇತ್ತೀಚೆಗೆ ಪಟ್ಟಣದ ತಹಶೀಲ್ದಾರ್ ಕಚೇರಿಯ ಕಾರ್ಯಾಲಯದಲ್ಲಿ ಆಯುಷ್ ವೈದ್ಯರ ಬೇಡಿಕೆ ಖಂಡಸಿ ತಹಶೀಲ್ದಾರ್ ಮುಖಂತಾರ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಬೇರೆ ಪದ್ಧತಿಯಲ್ಲಿ ಸೇವೆ ಸಲ್ಲಿಸುವ ವೈದರು ಸಾಮಾನ್ಯ ಜನರ ಜೀವದ ಮೇಲೆ ಚಲ್ಲಾಟ ಆಡುತ್ತಿದ್ದಾರೆ.

ಇದನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ತರಬೇತಿ ಪಡೆದ ಪದ್ಧತಿಯಲ್ಲೇ ವೈದ್ಯಕೀಯ ಸೇವೆ ನೀಡಬೇಕೆಂದು ಆದೇಶ ಮಾಡಿದೆ. ಆದರೂ ಆಯುಷ್ ವೈದ್ಯರು ತಮ್ಮ ಪದ್ಧತಿಯನ್ನು ಒಳಗೊಂಡಂತೆ ಅಲೋಪತಿ ಅಭ್ಯಾಸಕ್ಕೆ ಅವಕಾಶ ಕೋರಿ ಸರ್ಕಾರದ ಮೇಲೆ ಒತ್ತಡ ತರುತ್ತಿದ್ದಾರೆ ಎಂದು ಆರೋಪಿಸಿದರು.

ಆಯುಷ್ ವೈದ್ಯರ ಬೇಡಿಕೆಗಳಿಗೆ ಸರ್ಕಾರ ಮನ್ನಣೆಯನ್ನು ಯಾವುದೇ ಕಾರಣಕ್ಕೂ ನೀಡಬಾರದು ಎಂದು ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಡಾ. ಎಸ್.ಬಿ.ಲಕ್ಕೋಳ, ಡಾ.ಧನ್ನೂರ, ಡಾ. ಎಲ್.ಆರ್. ರಡ್ಡೇರ, ಡಾ.ಎಂ.ಐ. ಬಾಕಳೆ ಮತ್ತಿತರರು ಹಾಜರಿದ್ದರು.

ಪದಾಧಿಕಾರಿಗಳ ಆಯ್ಕೆ
ರೋಣ: ಭಾರತೀಯ ವೈದ್ಯಕೀಯ ಸಂಘ ರೋಣ ತಾಲ್ಲೂಕ ಘಟಕದ ನೂತನ ಅಧ್ಯಕ್ಷರಾಗಿ ನರೇಗಲ್ಲದ ವೈದ್ಯ ಡಾ. ಜಿ.ಕೆ.ಕಾಳೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಗಜೇಂದ್ರಗಡದ ಡಾ. ಸಿ.ವಿ. ಮಾಳಗಿ, ಕಾರ್ಯದರ್ಶಿಯಾಗಿ ಡಾ.ಐ.ಡಿ.ಬಾಕಳೆ, ಖಜಾಂಚಿಯಾಗಿ ಡಾ. ಡ್ಯಾನಿಯಲ್ ಪೇಡ್ರಿಕ್ಸ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.