ಬುಧವಾರ, ಏಪ್ರಿಲ್ 14, 2021
32 °C

ಆರೋಗ್ಯ ಕವಚ;ಸುರಕ್ಷಿತ ಹೆರಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಗೆ ಮನೆಯಲ್ಲಿ ಸುರಕ್ಷಿತ ಹೆರಿಗೆ ಮಾಡಿಸುವಲ್ಲಿ ಆರೋಗ್ಯ ಕವಚ 108 ರ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಅವಳಿ ಮಕ್ಕಳು ಜನಸಿದ್ದು, ತಾಯಿ ಮತ್ತು ಮಕ್ಕಳು ಆರೋಗ್ಯದಿಂದ ಇದ್ದಾರೆ.ಶಹಾಪುರ ತಾಲ್ಲೂಕಿನ ರೊಟ್ನಡಗಿ ಗ್ರಾಮದ ಸೌಭಾಗ್ಯ ವೆಂಕಟೇಶ ಎಂಬುವವರಿಗೆ ಬುಧವಾರ ರಾತ್ರಿ ತೀವ್ರ ಹೆರಿಗೆ ನೋವು ಕಾಣಿಸಿಕೊಂಡಿತು. ಕೂಡಲೇ 108 ಆರೋಗ್ಯ ಕವಚಕ್ಕೆ ಫೋನ್ ಮಾಡಲಾಯಿತು. ಆರೋಗ್ಯ ಕವಚ ಸಿಬ್ಬಂದಿ ಸ್ಥಳಕ್ಕೆ ಆಗಮಿಸುವಷ್ಟರಲ್ಲಿಯೇ ಹೆರಿಗೆ ನೋವು ಮತ್ತಷ್ಟು ಉಲ್ಬಣಿಸಿತ್ತು. ಇದರಿಂದಾಗಿ ಮನೆಯಲ್ಲಿಯೇ ಹೆರಿಗೆ ಮಾಡಿಸಲು ನಿರ್ಧರಿಸಿದ ಸಿಬ್ಬಂದಿ, ಸುರಕ್ಷಿತವಾಗಿ ಹೆರಿಗೆ ಮಾಡಿಸುವಲ್ಲಿ ಯಶಸ್ವಿಯಾದರು.ಮೊದಲು ಹೆಣ್ಣು ಮಗು ಜನಿಸಿದ್ದು, 10 ನಿಮಿಷದ ನಂತರ ಗಂಡು ಮಗು ಜನಿಸಿದೆ. ಆರೋಗ್ಯ ಕವಚ 108 ವಾಹನದ ತುರ್ತು ವೈದ್ಯ ಅಂಬಣ್ಣ ಈ ಹೆರಿಗೆ ಮಾಡಿಸಿದ್ದಾರೆ.

ಸಕಾಲಕ್ಕೆ ಆಗಮಿಸಿದ ಆರೋಗ್ಯ ಕವಚ ಸಿಬ್ಬಂದಿಯಿಂದಾಗಿ ಸೌಭಾಗ್ಯಳಿಗೆ ಸುರಕ್ಷಿತ ಹೆರಿಗೆ ಆಗಿದ್ದು, ಅವಳಿ ಮಕ್ಕಳು ಜನಿಸಿರುವುದು ಕುಟುಂಬದವರ ಸಂತಸವನ್ನು ಹೆಚ್ಚಿಸಿತ್ತು. ವಡಗೇರಾ ಆರೋಗ್ಯ ಕವಚದ ಸಿಬ್ಬಂದಿ ಅಂಬಣ್ಣ ಹಾಗೂ ವಾಹನ ಚಾಲಕ ಶಿವರಾಯ ಅವರಿಗೆ ಗ್ರಾಮದ ಜನರು ಅಭಿನಂದನೆ ಸಲ್ಲಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.