ಶುಕ್ರವಾರ, ಮೇ 20, 2022
19 °C

ಆಷಾಢದ ಸಂಜೆಯಲ್ಲಿ ನಾಟಕಗಳ ರಂಗವಲ್ಲಿ

- ಎನ್.ಆರ್.ದೇವಾನಂದ್ Updated:

ಅಕ್ಷರ ಗಾತ್ರ : | |

ನಾಗಮಂಗಲ : ಚುನಾವಣೆಯ ಗೌಜು, ಗದ್ದಲ ಮುಗಿದಿದೆ. ಬರದಿಂದಾಗಿ ತೆಂಗಿನ ಗಿಡಗಳು ಒಣಗಿ ಹೋಗಿವೆ. ಈ ನಡುವೆಯೇ ತಾಲ್ಲೂಕಿನ ಜನತೆಗೆ ಒಂದಷ್ಟು ಉಲ್ಲಾಸ ನೀಡುವ, ಬೇಸರದ ಕ್ಷಣಗಳನ್ನು ಮರೆಸುವ ನಿಟ್ಟಿನಲ್ಲಿ ಪಟ್ಟಣದ ಕನ್ನಡ ಸಂಘ ಮುಂದಾಗಿದೆ.ಜುಲೈ 14 ರಿಂದ ಒಂದು ವಾರ ಕಾಲ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವ ಹಮ್ಮಿಕೊಳ್ಳುವ ಮೂಲಕ ಕಲಾಸಕ್ತರಿಗಾಗಿ ನಾಟಕಗಳ ರಂಗವಲ್ಲಿ ಹಾಕಿ ಆಷಾಢದ ಸಂಜೆಗಳನ್ನು ಸಿಂಗರಿಸಿದ್ದಾರೆ.ಕಲೆ, ಸಾಹಿತ್ಯ, ಸಾಂಸ್ಕೃತಿಕವಾಗಿ ಹೆಸರು ಮಾಡಿದ್ದ ನಾಗಮಂಗಲ ತಾಲ್ಲೂಕು ಇತ್ತೀಚಿನ ದಿನಗಳಲ್ಲಿ ರಂಗ ಚಟುವಟಿಕೆಯಲ್ಲೂ ಸಹ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿದೆ.ಕನ್ನಡ ಸಂಘವು ಕಳೆದ 8 ವರ್ಷಗಳಿಂದ ರಾಜ್ಯಮಟ್ಟದ ನಾಟಕೋತ್ಸವವನ್ನು ಆಯೋ ಜಿಸುತ್ತಾ ಬಂದಿದೆ. ಆ ಮೂಲಕ ರಂಗ ರುಚಿಯನ್ನು ಇಲ್ಲಿನ ಜನತೆಗೆ ಉಣಬಡಿಸುತ್ತಿದೆ.ಸಂಘ ಬೆಳೆದು ಬಂದ ಹಾದಿ : 1972ರಲ್ಲಿ ನಾಗಮಂಗಲದ ಒಂದಷ್ಟು ಗೆಳೆಯರು ಸೇರಿಕೊಂಡು `ಕನ್ನಡ ಸಂಘ'ವನ್ನು ಅಸ್ತಿತ್ವಕ್ಕೆ ತಂದರು.ಆರಂಭದಲ್ಲಿ ಉಪನ್ಯಾಸ, ಕಲಾತ್ಮಕ ಚಲನಚಿತ್ರ ಪ್ರದರ್ಶನ, ಕವಿಗೋಷ್ಠಿ, ವಿಚಾರ ಸಂಕಿರಣ, ಛಾಯಾ ಚಿತ್ರಪ್ರದರ್ಶನ, ವ್ಯಂಗ್ಯಚಿತ್ರ ರಚನಾ ಶಿಬಿರಗಳನ್ನು ಏರ್ಪಡಿಸಲಾಗುತ್ತಿತ್ತು. ಜ್ಞಾನಪೀಠ ಪುರಸ್ಕೃತ ಶಿವರಾಮ ಕಾರಂತರು ಸಂಘದ ಬೆಳ್ಳಿ ಹಬ್ಬಕ್ಕೆ ಬಂದು ಹರಸಿದ್ದು ಸಂಘದ ಸಂಭ್ರಮಗಳಲ್ಲೊಂದಾಗಿದೆ.ಹೀಗೆ ತನ್ಮೂಲಕ ಸದಭಿರುಚಿಯ ಕಾರ್ಯಕ್ರಮಗಳನ್ನು ನಾಗಮಂಗಲದ ಸಾಂಸ್ಕೃತಿಕ ವಲಯಕ್ಕೆ ಉಣ ಬಡಿಸುವ ಮೂಲಕ ಸಂಘ ಮನೆ ಮಾತಾಗಿದೆ. ಸಂಘಕ್ಕೆ ಸಾರ್ವಜನಿಕರ ಪ್ರೋತ್ಸಾಹ ಬೆಂಬಲವೂ ಇದೆ.ನಾಡು, ನುಡಿಯ ಬಗ್ಗೆ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳ ಲಾಗುತ್ತದೆ. ನವೆಂಬರ್ ತಿಂಗಳಲ್ಲಿ ಕನ್ನಡ ಸಾರಸ್ವತ ಲೋಕದ ದಿಗ್ಗಜರನ್ನು ಆಹ್ವಾನಿಸಿ, ಗೌರವಿಸುವುದನ್ನು ರೂಢಿಸಿಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರದ ಯಾವುದೇ ನೆರವಿಲ್ಲದೆ ಚಟುವಟಿಕೆಗಳನ್ನು ನಡೆಸುತ್ತಿರು ವುದು ಗಮನಾರ್ಹ.ಉಡುಪಿಯಲ್ಲಿ ನಡೆಯುವ ರಾಜ್ಯ ಮಟ್ಟದ ನಾಟಕೋತ್ಸವದಲ್ಲಿ ಸತತ 3 ವರ್ಷ ಪ್ರಥಮ ಬಹುಮಾನ ಗಳಿಸಿದ ಕೀರ್ತಿ ಸಂಘಕ್ಕಿದೆ.

ಹೀಗೆ ಹತ್ತು ಹಲವು ಯಶಸ್ವಿ ಕಾರ್ಯಕ್ರಮಗಳ ಜೊತೆ ಈ ವರ್ಷವೂ ರಾಜ್ಯ ಮಟ್ಟದ ನಾಗರಂಗ ನಾಟಕೋತ್ಸವವು ಜುಲೈ14 ರಿಂದ 20ರ ವರೆಗೆ ನಡೆಯಲಿದೆ. ರಾಜ್ಯದ ವಿವಿಧ ಪ್ರಸಿದ್ಧ ಕಲಾತಂಡಗಳು ನಾಟಕ ಪ್ರದರ್ಶಿಸಲಿವೆ.ಸಾರ್ವಜನಿಕರ ಸಹಕಾರದಿಂದ ಹಲವಾರು ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗಿದೆ. ಈ ಬಾರಿಯೂ ಕಲಾಸಕ್ತರು ಹೆಚ್ಚಿನ ಪ್ರೋತ್ಸಾಹ ನೀಡುವರು ಎಂಬ ಭರವಸೆ ನಮಗಿದೆ ಎನ್ನುತ್ತಾರೆ ಸಂಘದ ಅಧ್ಯಕ್ಷ                       ಎಂ.ಎನ್. ಮಂಜುನಾಥ್.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.