ಬುಧವಾರ, ಮೇ 12, 2021
24 °C

ಇಂದು ಢಾಕಾಕ್ಕೆ ತೆರಳಲಿರುವ ಮೆಸ್ಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋಲ್ಕತ್ತ (ಪಿಟಿಐ): ಫುಟ್‌ಬಾಲ್ ಮಾಂತ್ರಿಕ ಲಿಯೊನೆಲ್ ಮೆಸ್ಸಿ ಸೋಮವಾರ ಬಾಂಗ್ಲಾದೇಶಕ್ಕೆ ತೆರಳಲಿದ್ದಾರೆ. ಮಂಗಳವಾರ ಮೆಸ್ಸಿ ಸಾರಥ್ಯದ ಅರ್ಜೆಂಟೀನಾ ತಂಡದವರು ಢಾಕಾದಲ್ಲಿ ನೈಜಿರಿಯಾ ಎದುರು ಅಂತರರಾಷ್ಟ್ರೀಯ ಸೌಹಾರ್ದ ಫುಟ್‌ಬಾಲ್ ಪಂದ್ಯ ಆಡಲಿದ್ದಾರೆ.ಭಾನುವಾರ ಸಂಜೆ ಯುವ ಭಾರತಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ ಮೆಸ್ಸಿ ಬಳಿಕ ಅಲ್ಲಿ ನೆರೆದಿದ್ದ ಪ್ರೇಕ್ಷಕರತ್ತ ಕೈ ಬೀಸಿದರು. ಅಭ್ಯಾಸ ಪಂದ್ಯದಲ್ಲಿ ಒಂದು ಗೋಲು ಗಳಿಸಿ ಅವರು ಅಭಿಮಾನಿಗಳನ್ನು ರಂಜಿಸಿದರು. ಅಷ್ಟು ಮಾತ್ರವಲ್ಲದೇ, ಪ್ರೇಕ್ಷಕರ ಗ್ಯಾಲರಿಯತ್ತ ಮೂರು ಚೆಂಡು ಎಸೆದರು.ಈ ನಗರಿಯಲ್ಲಿ `ಫುಟ್‌ಬಾಲ್ ಜಾದೂಗಾರ~ ಮೆಸ್ಸಿ ಐದು ದಿನ ಇದ್ದರೂ ಮಾಧ್ಯಮದವರೊಂದಿಗೆ ಮಾತನಾಡಲಿಲ್ಲ, ಯಾವುದೇ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿಲ್ಲ. ಶನಿವಾರ ಸಹ ಆಟಗಾರರು ಮದರ್ ತೆರೆಸಾ ನಿವಾಸಕ್ಕೆ ತೆರಳಿದ್ದರು. ಆದರೆ ಮೆಸ್ಸಿ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು. ಇದಕ್ಕೆ ಕಾರಣ ಭದ್ರತಾ ಸಮಸ್ಯೆ.ಶುಕ್ರವಾರ ನಡೆದ ಅಂತರರಾಷ್ಟ್ರೀಯ ಸೌಹಾರ್ದ ಪಂದ್ಯದಲ್ಲಿ ಅರ್ಜೆಂಟೀನಾ 1-0 ಗೋಲಿನಿಂದ ವೆನಿಜುವೆಲಾ ತಂಡವನ್ನು ಸೋಲಿಸಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.