ಶನಿವಾರ, ಮೇ 15, 2021
25 °C

ಇಂದು ಸಂಪುಟ ಸಭೆ: ಎಚ್‌ಎಲ್‌ಗೆ ಭೂಮಿ ಮಂಜೂರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೀದರ್‌ನಲ್ಲಿ ಸುಧಾರಿತ ಹೆಲಿಕಾಪ್ಟರ್ ತಯಾರಿಕಾ ಘಟಕ ಸ್ಥಾಪಿಸಲು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ಗೆ (ಎಚ್‌ಎಎಲ್) 500 ಎಕರೆ ಭೂಮಿ ನೀಡುವ ಪ್ರಸ್ತಾವಕ್ಕೆ ಗುರುವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡುವ ಸಾಧ್ಯತೆ ಇದೆ.ಸುಧಾರಿತ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಬೀದರ್‌ನಲ್ಲೇ ಸ್ಥಾಪಿಸುವಂತೆ ಸಂಸದ ಧರ್ಮಸಿಂಗ್ ಮಾಡಿದ್ದ ಮನವಿಯನ್ನು ರಕ್ಷಣಾ ಸಚಿವ ಎ.ಕೆ.ಆಂಟನಿ ಇತ್ತೀಚೆಗಷ್ಟೇ ಒಪ್ಪಿಕೊಂಡಿದ್ದರು. ನಂತರ ರಾಜ್ಯ ಸರ್ಕಾರಕ್ಕೆ ಪ್ರಸ್ತಾವವೊಂದನ್ನು ಕಳುಹಿಸಿದ್ದ ಎಚ್‌ಎಎಲ್ ಬೀದರ್‌ನಲ್ಲಿ 500 ಎಕರೆ ಭೂಮಿ ನೀಡುವಂತೆ ಕೋರಿತ್ತು. ಈ ವಿಷಯ ಗುರುವಾರ ಸಂಪುಟ ಸಭೆಯಲ್ಲಿ ಚರ್ಚೆಗೆ ಬರಲಿದೆ.ಮಸೂದೆಗೆ ಒಪ್ಪಿಗೆ ಸಾಧ್ಯತೆ: ಕೆರೆ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚಿನ ಅಧಿಕಾರ ನೀಡುವ `ಕೆರೆ ಅಭಿವೃದ್ಧಿ ಪ್ರಾಧಿಕಾರ ಮಸೂದೆ~ಗೂ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡುವ ಸಾಧ್ಯತೆ ಇದೆ. 2006ರಿಂದಲೂ ಈ ಮಸೂದೆ ಹಲವು ಬಾರಿ ಪರಿಷ್ಕರಣೆಗೆ ಒಳಗಾಗಿತ್ತು.ಶಿಕ್ಷಣ ಹಕ್ಕು ಕಾಯ್ದೆಯ ಕರಡು ನಿಯಮಗಳಿಗೆ ಒಪ್ಪಿಗೆ ನೀಡುವ ಪ್ರಸ್ತಾವವೂ ಸಂಪುಟ ಸಭೆಯಲ್ಲಿ ಚರ್ಚೆಗೆ ಬರುವ ಸಾಧ್ಯತೆ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.