ಶನಿವಾರ, ಮೇ 15, 2021
23 °C

ಇತರ ಕ್ರೀಡೆಗೆ ಪ್ರೋತ್ಸಾಹವಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: `ಕ್ರಿಕೆಟ್‌ನಂತೆ ಇತರ ಕ್ರೀಡೆ ಗಳಿಗೂ ಪ್ರೋತ್ಸಾಹ ದೊರೆಯುವ ಅಗತ್ಯವಿದ್ದು, ಯುವ ಪ್ರತಿಭಾವಂತ ಬ್ಯಾಡ್ಮಿಂಟನ್ ಕ್ರೀಡಾಪಟುಗಳು ಈ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾಗವಹಿಸಿರುವುದು ಈ ಕ್ರೀಡೆಯ ಬಗ್ಗೆ ಇನ್ನಷ್ಟು ಆಸಕ್ತಿ ಬೆಳೆಸಲು ಅನುಕೂಲವಾಗಲಿದೆ~ ಎಂದು ನಗರಸಭೆ ಅಧ್ಯಕ್ಷ ಜಗದೀಶ ಮಲಗೋಡ ಹೇಳಿದರು.ಜಿಲ್ಲಾ ಹಾಗೂ ರಾಜ್ಯ ಬ್ಯಾಡ್ಮಿಂ ಟನ್ ಸಂಸ್ಥೆ, ಲಯನ್ಸ್ ಕ್ಲಬ್ ಆಶ್ರಯ ದಲ್ಲಿ ನಗರದ ಜಿಲ್ಲಾ ಒಳಾಂಗಣ ಕ್ರೀಡಾಂಗಣದ ಬ್ಯಾಡ್ಮಿಂಟನ್ ಹಾಲ್‌ನಲ್ಲಿ ಗುರುವಾರದಿಂದ ಆರಂಭವಾದ ನಾಲ್ಕು ದಿನಗಳ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಟೂರ್ನಿಗೆ ಚಾಲನೆ ನೀಡಿ ಅವರು ಮಾತನಾಡಿದರು.ಜಿಲ್ಲಾ ಕೇಂದ್ರವಾದ ಹಾವೇರಿಯಲ್ಲಿ ಕ್ರೀಡೆಗೆ ಅವಶ್ಯವಿರುವ ಎಲ್ಲ ಅನುಕೂಲ ಗಳನ್ನು ಸರ್ಕಾರ ಒದಗಿಸಿದೆ. ಸುಸಜ್ಜಿತ ಈಜುಗೊಳ, ಬ್ಯಾಡ್ಮಿಂಟನ್ ಹಾಲ್, ಕ್ರೀಡಾ ಶಾಲೆ, ಮಲ್ಟಿಜಿಮ್,   ಅಥ್ಲೆ ಟಿಕ್ಸ್ ಮೈದಾನ ಹೀಗೆ ಹಲವಾರು ಸೌಲಭ್ಯಗಳಿದ್ದು, ಯುವಕರು ಇವುಗಳ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.ಉಪವಿಭಾಗಾಧಿಕಾರಿ ರಾಜೇಂದ್ರ ಚೋಳನ್ ಮಾತನಾಡಿ, ಹಾವೇರಿ ಯಲ್ಲಿ ರಾಜ್ಯ ಮಟ್ಟದ ಟೂರ್ನಿ ನಡೆಯುತ್ತಿರುವುದಕ್ಕೆ ಇಲ್ಲಿನ ಕ್ರೀಡಾ ಸಕ್ತರ ಸಹಕಾರ ನಿರಂತರವಾಗಿದ್ದು, ಇಂತಹ ಟೂರ್ನಿಗಳು ಹೆಚ್ಚು ಹೆಚ್ಚು ನಡೆದಾಗ ಹೊಸ ಪ್ರತಿಭೆಗಳು ಉದಯಿ ಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.

 

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಉಪಾಧ್ಯಕ್ಷ ಡಾ. ಜೆ.ಜೆ.ದೇವಧರ ಮಾತನಾಡಿ, ಜಿಲ್ಲಾ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಗೊಂಡಿದ್ದರಿಂದ ಇಂತಹ ರಾಜ್ಯ ಮಟ್ಟದ ಶ್ರೇಯಾಂಕಿತ ಟೂರ್ನಿ ನಡೆಸಲು ಸಾಧ್ಯವಾಗಿದೆ. ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಶ್ರೇಯಾಂಕಿತ ಕ್ರೀಡಾ ಪಟುಗಳು ಪಾಲ್ಗೊಂಡಿರುವುದು ಇತರ ಕ್ರೀಡಾಪಟುಗಳಿಗೆ ಸ್ಪೂರ್ತಿಯಾಗಲಿದೆ ಎಂದರು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗಿರೀಶ ತುಪ್ಪದ, ನಗರಸಭೆ ಸದಸ್ಯರಾದ ವಿಜಯಕುಮಾರ ಚಿನ್ನಿ ಕಟ್ಟಿ, ನಿರಂಜನ ಹೆರೂರ, ಬ್ಯಾಡ್ಮಿಂಟನ್ ಸಂಸ್ಥೆಯ ನಿರ್ದೇಶಕ ಪ್ರಭು ಹಿಟ್ನಳ್ಳಿ, ಅಶೋಕ ಹೆರೂರ, ಮಂಜುನಾಥ ಅಣ್ಣಿಗೇರಿ, ಆರ್. ನಾಗರಾಜ, ಜಿಲ್ಲಾ ಹಾಕಿ ಸಂಸ್ಥೆಯ ಕಾರ್ಯದರ್ಶಿ ರಮೇಶ ಆನವಟ್ಟಿ, ಕೆ.ಚಂದ್ರಶೇಖರ, ಅರುಣೋದಯ ಸ್ಪೋರ್ಟ್ಸ್ ಕ್ಲಬ್‌ನ ಸಿ.ಎನ್. ಕಸವಾಳ, ನ್ಯಾಯವಾದಿ ಜೆ.ಸಿ. ಗಿರಿ ಯಪ್ಪನವರ, ಸಿದ್ದಣ್ಣ ಮರಿ ರೇವಣ್ಣನವರ, ಬ್ಯಾಡ್ಮಿಂಟನ್ ಸಂಸ್ಥೆಯ ಜಿಲ್ಲಾ ಕಾರ್ಯದರ್ಶಿ ಶಿವ ರಾಜ ಮರ್ತೂರ, ರಾಜ್ಯ ಬ್ಯಾಡ್ಮಿಂ ಟನ್ ಸಂಸ್ಥೆಯ ನಿರ್ಣಾಯಕ ಆರ್. ಸುರೇಶಕುಮಾರ, ಚಂದ್ರ ಕುಲಕರ್ಣಿ ಮತ್ತಿತರರು ಹಾಜರಿದ್ದರು.ಶಿವರಾಜ ಸಜ್ಜನರ ಚಾಲನೆ: ಜಿಲ್ಲಾ ಕ್ರೀಡಾಂಗಣದಲ್ಲಿ ಗುರುವಾರ ಆರಂಭ ಗೊಂಡ ರಾಜ್ಯ ಶ್ರೇಯಾಂಕಿತ   ಯುನೆಕ್ಸ್ ಸನ್‌ರೈಸ್ ಬ್ಯಾಡ್ಮಿಂಟನ್ ಟೂರ್ನಿಯ ಪಂದ್ಯಗಳಿಗೆ ವಿಧಾನ ಪರಿಷತ್ ಸದಸ್ಯ ಶಿವರಾಜ ಸಜ್ಜನರ ಚಾಲನೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.