ಗುರುವಾರ , ಮೇ 19, 2022
20 °C

ಇರಾನಿ ಕಪ್: ಮಿಂಚಿದ ಉಮೇಶ್ ಯಾದವ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರ (ಪಿಟಿಐ): ಭಾರತ ಇತರೆ ತಂಡದವರು ಇಲ್ಲಿ ನಡೆಯುತ್ತಿರುವ ಇರಾನಿ ಕಪ್ ಕ್ರಿಕೆಟ್ ಪಂದ್ಯದಲ್ಲಿ ರಾಜಸ್ತಾನದ ವಿರುದ್ಧ ಮೇಲುಗೈ ಸಾಧಿಸಿದ್ದಾರೆ.ಸವಾಯ್ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಎರಡನೇ ದಿನವಾದ ಭಾನುವಾರ ಭಾರತ ಇತರೆ ತನ್ನ ಮೊದಲ ಇನಿಂಗ್ಸ್‌ನಲ್ಲಿ 663 ರನ್ ಪೇರಿಸಿತು. ದಿನದಾಟದ ಅಂತ್ಯಕ್ಕೆ ರಾಜಸ್ತಾನ 22.2 ಓವರ್‌ಗಳಲ್ಲಿ 3 ವಿಕೆಟ್‌ಗೆ 53 ರನ್ ಗಳಿಸಿ ಸಂಕಷ್ಟದಲ್ಲಿ ಸಿಲುಕಿದೆ. ಭಾರತ ಇತರೆ ತಂಡದ ಉಮೇಶ್ ಯಾದವ್ (22ಕ್ಕೆ 2) ಎದುರಾಳಿ ತಂಡಕ್ಕೆ ಆರಂಭಿಕ ಆಘಾತ ನೀಡಿದರು.ಇದಕ್ಕೂ ಮುನ್ನ ಮೂರು ವಿಕೆಟ್‌ಗೆ 400 ರನ್‌ಗಳಿಂದ ಎರಡನೇ ದಿನದಾಟ ಆರಂಭಿಸಿದ ಭಾರತ ಇತರೆ ಭಾರಿ ಮೊತ್ತ ಕಲೆಹಾಕಿತು. ಶಿಖರ್ ಧವನ್ ಮತ್ತು ಆಜಿಂಕ್ಯ ರಹಾನೆ ಗಳಿಸಿದ ಶತಕ ಅಲ್ಲದೆ, ಮನ್‌ದೀಪ್ ಸಿಂಗ್ (60), ಆರ್. ವಿನಯ್ ಕುಮಾರ್ (43), ವರುಣ್ ಆ್ಯರನ್ (41) ಹಾಗೂ ರಾಹುಲ್ ಶರ್ಮ (52) ಅವರ ಉತ್ತಮ ಬ್ಯಾಟಿಂಗ್ ಇದಕ್ಕೆ ಕಾರಣ. ಮೊದಲ ದಿನ ಅಜೇಯ 117 ರನ್ ಗಳಿಸಿದ್ದ ರಹಾನೆ 152 ರನ್ ಗಳಿಸಿ ಔಟಾದರು.ಸಂಕ್ಷಿಪ್ತ ಸ್ಕೋರ್: ಭಾರತ ಇತರೆ: ಮೊದಲ ಇನಿಂಗ್ಸ್ 153.4 ಓವರ್‌ಗಳಲ್ಲಿ 663 (ಶಿಖರ್ ಧವನ್ 177, ಆಜಿಂಕ್ಯ ರಹಾನೆ 152, ಪಾರ್ಥಿವ್ ಪಟೇಲ್ 55, ಮನ್‌ದೀಪ್ ಸಿಂಗ್ 60, ಆರ್, ವಿನಯ್ ಕುಮಾರ್ 43, ರಾಹುಲ್ ಶರ್ಮ 52, ಅಂಕಿತ್ ಚೌಧರಿ 125ಕ್ಕೆ 4, ಸುಮಿತ್ ಮಾಥುರ್ 129 ಕ್ಕೆ 3). ರಾಜಸ್ತಾನ: ಮೊದಲ ಇನಿಂಗ್ಸ್ 22.2 ಓವರ್‌ಗಳಲ್ಲಿ 3 ವಿಕೆಟ್‌ಗೆ 53 (ಆಕಾಶ್ ಚೋಪ್ರಾ 20, ಉಮೇಶ್ ಯಾದವ್ 22ಕ್ಕೆ 2).

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.