ದಕ್ಷಿಣದ ಚೆಲುವೆ ಇಲಿಯಾನಾ ಬಾಲಿವುಡ್ನಲ್ಲಿ ತಮಗಾದ ಮೊದಲ ಅನುಭವಕ್ಕೆ ಬೆರಗಾಗಿದ್ದಾರಂತೆ. ಆ ಖುಷಿಯನ್ನು ವರ್ಣಿಸಲು ಆಕೆಗೆ ಪದಗಳೇ ಸಿಗುತ್ತಿಲ್ಲವಂತೆ. ಪದಗಳಿಗೆ ನಿಲುಕದ ಭಾವಕ್ಕೆ ಸಿಲುಕುವ ವಿಸ್ಮಯಕಾರಿ ಅನುಭವದೊಳಗೆ ಮಿಂದಿರುವ `ಇಲಿ~ ಬಾಲಿವುಡ್ನಲ್ಲಿನ ಮೊದಲ ಅನುಭವ ಹಂಚಿಕೊಳ್ಳುತ್ತಿರುವುದು ಹೀಗೆ...

`ಬರ್ಫಿ~ ತುಂಬಾ ಸಿಹಿಯಾಗಿತ್ತು.ನಿರ್ದೇಶಕ ಅನುರಾಗ್ ಬಸು ಕೂಡ ಬರ್ಫಿಯಷ್ಟೇ ಸಿಹಿ ವ್ಯಕ್ತಿ. ಅವರೊಂದಿಗೆ ಕೆಲಸ ಮಾಡುವುದು ಖುಷಿಯ ಸಂಗತಿ. ಅನುರಾಗ್ ಬಸು ಬಾಲಿವುಡ್ನ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರು. ಅವರಿಗೆ ನಾನು ಕೇವಲ ಪದಗಳಲ್ಲಿ ಧನ್ಯವಾದ ತಿಳಿಸಲಾರೆ. ಮನಸಾರೆ ವಂದಿಸಿದರೇನೆ ತೃಪ್ತಿ.

ಬರ್ಫಿಯಲ್ಲಿ ರಣಬೀರ್ ಕಪೂರ್ ಹಾಗೂ ಪ್ರಿಯಾಂಕ ಜತೆಗಿದ್ದರು. ಶೂಟಿಂಗ್ ವೇಳೆ ನಾವೆಲ್ಲರೂ ಕಳೆದ ಖುಷಿಯನ್ನು ಲೋಡ್ ಲೆಕ್ಕದಲ್ಲಿ ಅಳೆದು ಹೇಳಬೇಕು. ಈ ಚಿತ್ರಕ್ಕಾಗಿ ನಾನು ಸಾಕಷ್ಟು ಹಾರ್ಡ್ವರ್ಕ್ ಮಾಡಿದ್ದೆ. ಒಟ್ಟಾರೆಯಾಗಿ `ಬರ್ಫಿ~ಯದ್ದು ವಿಸ್ಮಯಕಾರಿ ಅನುಭವ.

ನವರಸಗಳ ರಸಾಯನದಂತಿದ್ದ ಈ ಚಿತ್ರದ ಅನುಭವ, ಸಹನಟರ ಒಡನಾಟ, ಅನುಭವಿ ನಿರ್ದೇಶಕರ ಜತೆಗೆ ಕೆಲಸ ಮಾಡುವ ಅವಕಾಶ ಮತ್ತೊಮ್ಮೆ ಸಿಗಲಿ ಎಂಬ ಆಸೆ ನನ್ನನ್ನು ಕಾಡುತ್ತಿದೆ. ಭವಿಷ್ಯದಲ್ಲಿ ಈ ಆಸೆ ಕೈಗೂಡಬಹುದು ಎಂಬ ನಿರೀಕ್ಷೆಯಲ್ಲಿ ನಾನಿದ್ದೇನೆ~ ಎನ್ನುತ್ತಿದ್ದಾರೆ ಇಲಿಯಾನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.