ಶನಿವಾರ, ಜನವರಿ 25, 2020
19 °C

ಇವರಿಗೆ ಬೇಕಿದೆ ಸಹಾಯಹಸ್ತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಕಲೇಶಪುರ: ಇಲ್ಲಿಯ ಕುಡುಗರಹಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿ.ಕಾಂ. ವ್ಯಾಸಂಗ ಮಾಡುತ್ತಿರುವ ನಿಗರಾಜು ಕಿಡ್ನಿ ವೈಫಲ್ಯದಿಂದ ಇದೀಗ  ಹಾಸಿಗೆ ಹಿಡಿದಿದ್ದಾನೆ.ಕುಡುಗರಹಳ್ಳಿ ಬಡಾವಣೆಯಲ್ಲಿ ಕೂಲಿ ಕೆಲಸ ಮಾಡುವ ರಾಮಣ್ಣ ಅವರ 19 ವರ್ಷದ ಪುತ್ರ ನಿಂಗರಾಜು ಕಿಡ್ನಿ ವೈಪಲ್ಯದಿಂದಾಗಿ ಕಳೆದ ನಾಲ್ಕು ತಿಂಗಳಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದಾನೆ. ಬಡ ಪೋಷಕರು ಈಗಾಗಲೆ ಮೈತುಂಬಾ ಸಾಲ ಮಾಡಿ ಮಗನ ಚಿಕಿತ್ಸೆಗೆ ಸುಮಾರು ಒಂದು ಲಕ್ಷ ರೂಪಾಯಿಗೂ ಹೆಚ್ಚು ಖರ್ಚು ಮಾಡಿದ್ದಾರೆ. ಮುಂದಿನ ಚಿಕಿತ್ಸೆಗೆ ಇವರ ಬಳಿ ಹಣವಿಲ್ಲದೆ, ಮಗನನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಇವನ ಸಹೋದರಿ ಕೂಡ ತಮ್ಮನ ಚಿಕಿತ್ಸೆಗಾಗಿ ತಂದೆ ತನ್ನ ಕ್ನಿಡ್ನಿಯನ್ನು ಮಗನಿಗೆ ಕೊಡುವುದಕ್ಕೆ ಸಿದ್ದರಿದ್ದರೂ, ತಂದೆಯಿಂದ ತೆಗೆದು ಮಗನಿಗೆ ಅಳವಡಿಸುವುದಕ್ಕೆ ಸುಮಾರು 3.50 ಲಕ್ಷ ರೂಪಾಯಿ ಖರ್ಚು ಆಗುತ್ತದೆ ಎಂದು ಎಂ.ಎಸ್.ರಾಮಯ್ಯ ಆಸ್ಪತ್ರೆಯಿಂದ ಅಂದಾಜು ಪಟ್ಟಿ ನೀಡಿದ್ದಾರೆ. ಅದಲ್ಲದೆ ಕಿಡ್ನಿ ಅಳವಡಿಸಿದ ನಂತರ ಪ್ರತಿ ತಿಂಗಳು ಚಿಕಿತ್ಸಾ ವೆಚ್ಚ 10ರಿಂದ 15 ಸಾವಿರ ರೂಪಾಯಿಗಳಾಗುತ್ತದೆ. ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನೆ, ಇನ್ನಿತರ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಉತ್ತಮ ವಿದ್ಯಾರ್ಥಿ ಎನ್ನಿಸಿರುವ ಲಿಂಗರಾಜು ಚಿಕಿತ್ಸೆಗೆ ಇದೀಗ ದಾನಿಗಳ ನೆರವು ಬೇಕಿದೆ.ಆರ್ಥಿಕ ನೆರವು ನೀಡ ಬಯಸುವವರು ಲಿಂಗರಾಜು, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಶಾಖೆ 40018, ಖಾತೆ ಸಂಖ್ಯೆ 64089333441 ಹಣ ಕಳುಹಿಸಬಹುದು, ಇವರ ಸಂಪರ್ಕಕ್ಕೆ 8951748088, 9481668370 ಕರೆ ಮಾಡಬಹುದಾಗಿದೆ.

 

ಪ್ರತಿಕ್ರಿಯಿಸಿ (+)