‘ಥ್ರೀ ಈಡಿಯಟ್ಸ್’ಗೂ ಈ ಈಡಿಯಟ್ಸ್ಗೂ ಏನಾದರೂ ಸಂಬಂಧ?- ದೂರದಿಂದ ಹೊಮ್ಮಿದ ಪ್ರಶ್ನೆಗೆ ಆನಂದ್ ನಗು ಬೆರೆಸಿಯೇ ತಲೆ ಅಲ್ಲಾಡಿಸಿದರು. ಅವರು ಮೊದಲ ಸಲ ಆ್ಯಕ್ಷನ್/ಕಟ್ ಹೇಳಿರುವ ‘ಫೈವ್ ಈಡಿಯಟ್ಸ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಆ ನಿಮಿತ್ತ ಪ್ರಚಾರ ಚುರುಕುಗೊಳಿಸಲು ಆಡಿಯೋ ಬಿಡುಗಡೆ ಸಮಾರಂಭ ನೆಪವಷ್ಟೆ ಆಗಿತ್ತು.

ನಿರ್ದೇಶಕನೆಂಬ ಹಮ್ಮು ಆನಂದ್ ಮುಖದಲ್ಲಿ ಇರಲಿಲ್ಲ. ‘ನಾನು ಎಲ್ಲರ ಸಲಹೆ ಪಡೆದುಕೊಂಡೇ ಈ ಚಿತ್ರವನ್ನು ನಿರ್ದೇಶಿಸಿದ್ದೇನೆ. ಗೆಳೆಯ ವಾಸು ನೆರವು ತುಂಬಾ ಇದೆ. ಒಂದು ಒಳ್ಳೆಯ ಮನರಂಜನಾತ್ಮಕ ಚಿತ್ರ ಮಾಡಿದ್ದೇವೆ’ ಎಂದು ಆನಂದ್ ಎಂದಿನ ನಗು ತುಂಬಿಕೊಂಡೇ ಹೇಳಿದರು. ಅಹುದಹುದು ಎಂಬಂತೆ ಪಕ್ಕದಲ್ಲಿದ್ದ ವಾಸು ತಲೆಯಾಡಿಸಿದರು.

ಆಡಿಯೋ ಬಿಡುಗಡೆ ಮಾಡಿದ್ದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಸಂತ್ಕುಮಾರ್ ಪಾಟೀಲ್ ಹಾಗೂ ಸಮಾಜಸೇವಕ ಕೃಷ್ಣಮೂರ್ತಿ. ವಿವಿಧ ಜಿಲ್ಲಾಕೇಂದ್ರಗಳಿಗೆ ಹೋಗಿ ಹಾಡುಗಳ ಜೊತೆಗೆ ಸಿನಿಮಾ ಬಗ್ಗೆ ಪ್ರಚಾರ ಕಾರ್ಯ ನಡೆಸುವುದು ಆನಂದ್ ಉದ್ದೇಶ. ಆಗಲೇ ಅದು ಕಾರ್ಯಾಚರಣೆಗೂ ಬಂದಿದೆ.

ಚಿತ್ರದ ಸಂಭಾವನೆಯ ಚೆಕ್ ಬಂದದ್ದು ಗುರುವಾರ. ಆಡಿಯೋ ಬಿಡುಗಡೆಯೂ ಗುರುವಾರವೇ ಆಗುತ್ತಿದೆ. ಇದು ಶುಭಸೂಚನೆಯಲ್ಲದೆ ಇನ್ನೇನು ಎಂದು ಥೇಟ್ ಭವಿಷ್ಯಕಾರರ ಶೈಲಿಯಲ್ಲಿ ಹೇಳಿದವರು ಹರ್ಷಿಕಾ ಪೂಣಚ್ಚ. ಈಡಿಯಟ್ಗಳ ನಡುವೆ ಅವರ ಅಭಿನಯವೂ ಚಿತ್ರದಲ್ಲಿದೆ. ವಾಸು, ಆನಂದ್ ಅಲ್ಲದೆ ನವೀನ್ ಕೃಷ್ಣ, ಪೆಟ್ರೋಲ್ ಪ್ರಸನ್ನ ಕೂಡ ಈಡಿಯಟ್ಗಳ ತಂಡದಲ್ಲಿ ನಟಿಸಿದ್ದಾರೆ. ಎಲ್ಲರೂ ಚುಟುಕಾಗಿ ಮಾತಾಡಿದರು. ಹರ್ಷಿಕಾ, ನಮ್ರತಾ ಹೆಗ್ಡೆ, ನವ್ಯಶ್ರೀ ಈಡಿಯಟ್ಗಳಿಗೆ ಸಾಥ್ ನೀಡಿದ್ದು, ದೇವ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.