ಬುಧವಾರ, ಮೇ 25, 2022
23 °C

ಉ.ಕೋರಿಯಾದಲ್ಲಿ ಆಹಾರದ ಅಭಾವ, ಜನ ಕಂಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಏಎಫ್ ಪಿ): ಉತ್ತರ ಕೋರಿಯಾದಲ್ಲಿ  ಆಹಾರದ ತೀವ್ರ ಅಭಾವ ಕಾಣಿಸಿಕೊಂಡಿದ್ದು, ಜನ ಕಾಡುಹುಲ್ಲನ್ನು ತಿಂದು ಬದುಕುವ ದಾರುಣ ಸ್ಥಿತಿಗೆ ತಲುಪಿದ್ದಾರೆ ಎಂದಿರುವ ಅಮೆರಿಕದ ಸೇವಾ ಸಂಸ್ಥೆಗಳು, ಅಲ್ಲಿನ ಜನಕ್ಕೆ ಆಹಾರ ಒದಗಿಸುವ ಕಾರ್ಯ ತುರ್ತಾಗಿ ನಡೆಯಬೇಕಿದೆ ಎಂದು ಆಗ್ರಹಿಸಿವೆ.

ಆ ದೇಶಕ್ಕೆ ಭೇಟಿಕೊಟ್ಟು ಅಲ್ಲಿನ ಜನರ ಬಣವೆಯನ್ನು ಪ್ರತ್ಯಕ್ಷವಾಗಿ ಪರಿಶೀಲನೆ ನಡೆಸಿ ಬಂದಿರುವ ಅಮೆರಿಕದ ಐದು ಸೇವಾ ಸಂಸ್ಥೆಗಳು, ಜಾಗತಿಕ ಮಟ್ಟದಲ್ಲಿ ಆ ಜನಕ್ಕೆ ಆಹಾರಧಾನ್ಯ ಒದಗಿಸುವ ತುರ್ತು ಸಹಾಯದ ಅಗತ್ಯವಿದೆ ಎಂದು ಮನವಿ ಮಾಡಿಕೊಂಡಿವೆ.

ದಶಕದ ಹಿಂದೆ 1990ರಲ್ಲಿ ಕಾಣಿಸಿಕೊಂಡಿದ್ದ ಬರಗಾಲದ ಸಂದರ್ಭದಲ್ಲಿ ಉತ್ತರ ಕೋರಿಯಾದಲ್ಲಿ ಸಹಸ್ರಾರು ಜನರು ಆಹಾರ ಸಿಗದೇ ಮೃತಪಟ್ಟಿದ್ದರು ಎಂದು ಈ ಸೇವಾ ಸಂಘಡನೆಗಳು ಕಳವಳ ವ್ಯಕ್ತಪಡಿಸಿವೆ. ಇಂದಿನ ಬರಗಾಲದ ಸ್ಥಿತಿಯಲ್ಲಿ ಮಕ್ಕಳು ಮತ್ತು ಮಹಿಳೆಯರು ತೀವ್ರ ಸಂಕಷ್ಟದಲ್ಲಿದ್ದಾರೆ ಎನ್ನಲಾಗಿದೆ,

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.