ಗುರುವಾರ , ಜನವರಿ 23, 2020
27 °C

ಉಚಿತ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆನರಾ ಬ್ಯಾಂಕ್‌ ಎ.ಡಿ.ಪೈ ಗ್ರಾಮೀಣ ಅಭಿವೃದ್ಧಿ ತರಬೇತಿ ಸಂಸ್ಥೆಯು ನಿರುದ್ಯೋಗ ಯುವಕ ಮತ್ತು ಯುವತಿಯರಿಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ. ಕೈ ಕಸೂತಿ, ಬಹುವಿಧ ಮೊಬೈಲ್‌ಗಳ ಸರ್ವಿಸಿಂಗ್‌ ತರಬೇತಿ, ಮಹಿಳೆಯರ ವಸ್ತ್ರವಿನ್ಯಾಸ, ಡಿಟಿಪಿ ತರಬೇತಿಯನ್ನು ನೀಡಲಾಗುವುದು ಎಂದು ಪ್ರಕಟಣೆಯು ತಿಳಿಸಿದೆ.ಅರ್ಜಿದಾರರು ಕನಿಷ್ಠ 7 ನೇ ತರಗತಿಯವರೆಗೆ ವಿದ್ಯಾಭ್ಯಾಸ ಪಡೆದಿರಬೇಕು. 18 ರಿಂದ 35 ವರ್ಷದವರು ತರಬೇತಿಯಲ್ಲಿ ಭಾಗವಹಿಸಬಹುದು. ತರಬೇತಿಯ ಅವಧಿಯಲ್ಲಿ ಉಚಿತ ಊಟ ಹಾಗೂ ವಸತಿ ಸೌಲಭ್ಯವಿರುತ್ತದೆ.ಮಾಹಿತಿಗೆ ಸಂಪರ್ಕಿಸಿ: ಕೆನರಾ ಬ್ಯಾಂಕ್‌ ಎ.ಡಿ. ಪೈ ಗ್ರಾಮೀಣ ಅಭಿವೃದ್ಧಿ ತರಬೇತಿ ಸಂಸ್ಥೆ, ಬೆಂಗಳೂರು–ಮೈಸೂರು ಹೆದ್ದಾರಿ, ವಾಜರಹಳ್ಳಿ, ಬಿಡದಿ ಹೋಬಳಿ. ದೂರವಾಣಿ ಸಂಖ್ಯೆ– 2720 2092.

ಪ್ರತಿಕ್ರಿಯಿಸಿ (+)