ಬುಧವಾರ, ಏಪ್ರಿಲ್ 14, 2021
30 °C

ಉದ್ಯೋಗ ಭದ್ರತಾ ಯೋಜನೆ ಕಾರ್ಯಕರ್ತನ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಂಚಿ (ಪಿಟಿಐ): ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭದ್ರತಾ ಯೋಜನೆಯ ಅನುಷ್ಟಾನಕ್ಕಾಗಿ ಅವಿರತ ಶ್ರಮಿಸುತ್ತಿದ್ದ ಕಾರ್ಯಕರ್ತ ನಿಯಾಮತ್ ಅನ್ಸಾರಿ ಎಂಬಾತನನ್ನು 12 ಜನರ ಮಾವೋವಾದಿಗಳು ಗುಂಪೊಂದು ಮನೆಯಿಂದ ಹೊರಗೆಳೆತಂದು ಮನಬಂದಂತೆ ಥಳಿಸಿ, ಹತ್ಯೆಗೈದ ಘಟನೆ  ಬುಧವಾರ ಸಂಜೆ ನಡೆದಿದೆ.

ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದರೆಂದು ಪೊಲೀಸರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮಾವೋವಾದಿಗಳು ಮತ್ತೊಬ್ಬ ಕಾರ್ಯಕರ್ತ ಭೂಕನ್ ಸಿಂಗ್ ಅವರಿಗಾಗಿಯೂ ಹಳ್ಳಿಯಲ್ಲಿ ಶೋಧ ನಡೆಸಿದ್ದರು, ಆದರೆ  ಅದೃಷ್ಟವಶಾತ್ ಅವರು ಪತ್ತೆಯಾಗಲಿಲ್ಲ ಎಂದು ವರದಿಯಾಗಿದೆ.

ನಿಯಾಮತ್ ಅನ್ಸಾರಿ ಅವರು ಪ್ರಖ್ಯಾತ ಅರ್ಥಶಾಸ್ತ್ರಜ್ಞ ಜೀನ್ ಡ್ರೂಜ್ ಅವರ ನಿಕಟವರ್ತಿಗಳಾಗಿದ್ದರು. ಅಲ್ಲದೆ ಗ್ರಾಮಸ್ವರಾಜ್ ಅಭಿಯಾನಕ್ಕಾಗಿ ಶ್ರಮಿಸುತ್ತಿದ್ದರು ಹಾಗೂ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭದ್ರತಾ ಯೋಜನೆಯ ಸಂಚಾಲಕರೂ ಆಗಿದ್ದರು ಎಂದು ಮೂಲಗಳು ತಿಳಿಸಿವೆ.

ಈ ಹಿಂದೆ ಮಾವೋವಾದಿಗಳು ಇವರಿಗೆ ~ಅರಣ್ಯವನ್ನು ದೋಚದಿರಿ, ಇಲ್ಲವೆ ಪರಿಣಾಮ ಎದುರಿಸಿ~ ಎಂದು ಎಚ್ಚರಿಕೆ ನೀಡಿದ್ದರು  ಎನ್ನಲಾಗಿದೆ..

 ಮೂರು ವರ್ಷದ ಹಿಂದೆ ಖ್ಯಾತ ಅರ್ಥಶಾಸ್ತ್ರಜ್ಞ ಜೀನ್ ಡ್ರೂಜ್ ಅವರ ನಿಕಟವರ್ತಿಯೊಬ್ಬನನ್ನು ಅಪರಿಚಿತ ವ್ಯಕ್ತಿಗಳು ಕೊಂದು ಹಾಕಿದ್ದರು. ನಂತರ ಡ್ರೂಜ್ ಸೇರಿದಂತೆ ಹಲವು ಸಂಘಟನೆಗಳು ಈ ಘಟನೆಯನ್ನು ಖಂಡಿಸಿ ರಾಜಾದ್ಯಂತ ಪ್ರತಿಭಟನೆಗಳನ್ನು ನಡೆಸಿದ್ದವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.