ಬೆಂಗಳೂರು: ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗೆ ಸಲ್ಲಿಸಿದ್ದ ನಾಮಪತ್ರಗಳ ಪರಿಶೀಲನೆ ಗುರುವಾರ ನಡೆದಿದ್ದು, ಒಟ್ಟು 11 ನಾಮಪತ್ರಗಳು ತಿರಸ್ಕೃತಗೊಂಡಿವೆ. ಜಗಳೂರಿನಲ್ಲಿ ಐದು, ಚನ್ನಪಟ್ಟಣದಲ್ಲಿ ನಾಲ್ಕು ಹಾಗೂ ಬಂಗಾರಪೇಟೆಯಲ್ಲಿ ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ. ಮೂರು ಕ್ಷೇತ್ರಗಳಲ್ಲಿ ಒಟ್ಟು 47 ಅಭ್ಯರ್ಥಿಗಳ ನಾಮಪತ್ರಗಳನ್ನು ಸ್ವೀಕರಿಸಲಾಗಿದೆ.

ಜಗಳೂರು ವರದಿ: ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ 17 ಅಭ್ಯರ್ಥಿಗಳ 21 ನಾಮಪತ್ರಗಳ ಪೈಕಿ ಮೂವರು ಅಭ್ಯರ್ಥಿಗಳ 5 ನಾಮಪತ್ರಗಳು ತಿರಸ್ಕೃತಗೊಂಡವು. ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರಪ್ಪ, ಬಿಜೆಪಿಯ ಎಸ್.ವಿ. ರಾಮಚಂದ್ರ, ಜೆಡಿಎಸ್ನ ಹುಚ್ಚವ್ವನಹಳ್ಳಿ ಮಂಜುನಾಥ್ ಅವರ ನಾಮಪತ್ರಗಳು ಸೇರಿದಂತೆ ಒಟ್ಟು 14 ಅಭ್ಯರ್ಥಿಗಳ ನಾಮಪತ್ರಗಳು ಸ್ವೀಕೃತವಾಗಿವೆ. ಎಸ್.ವಿ. ರಾಮಚಂದ್ರ ಅವರ ಪತ್ನಿ ಎಸ್.ಆರ್. ಇಂದಿರಾ, ಎ.ಲಿಂಗಪ್ಪ, ಎಂ. ನಾಗೇಂದ್ರಪ್ಪ ಅವರ ನಾಮಪತ್ರಗಳನ್ನು ತಾಂತ್ರಿಕ ಕಾರಣಗಳಿಂದಾಗಿ ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಕೆ. ರಾಮೇಶ್ವರಪ್ಪ ತಿಳಿಸಿದರು.

ಆಕ್ಷೇಪಣೆ: ಎಸ್.ವಿ. ರಾಮಚಂದ್ರ ಅವರ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಭ್ಯರ್ಥಿ ದೇವೇಂದ್ರಪ್ಪ, ಪಕ್ಷೇತರ ಅಭ್ಯರ್ಥಿಗಳಾದ ಎಚ್.ಪಿ. ರಾಜೇಶ್, ಮಲ್ಲಿಕಾರ್ಜುನ್ ಅವರು ಚುನಾವಣಾಧಿಕಾರಿಗೆ ಲಿಖಿತ ತಕರಾರು ಸಲ್ಲಿಸಿದರು. ರಾಮಚಂದ್ರ ಅವರು ‘ನಾಯಕ’ ಜಾತಿಗೆ ಸೇರಿದವರಲ್ಲ. ಅವರ ನಾಮಪತ್ರವನ್ನು ತಿರಸ್ಕರಿಸಬೇಕು ಎಂದು ಒತ್ತಾಯಿಸಿದರು.

ರಾಮಚಂದ್ರ ಅವರ ಪರವಾಗಿ ವಕೀಲ ಸ್ವಾಮಿ ಅವರು ಸುಮಾರು ಎರಡು ಗಂಟೆ ಕಾಲ ವಾದ ಮಂಡಿಸಿದರು. ಈ ಸಮಯದಲ್ಲಿ ಅಭ್ಯರ್ಥಿಗಳ ಮಧ್ಯೆ ಪರಸ್ಪರ ಮಾತಿನ ಚಕಮಕಿಯೂ ನಡೆಯಿತು. ಒಂದು ಸಂದರ್ಭದಲ್ಲಿ ಕೈಕೈ ಮಿಲಾಯಿಸುವ ಹಂತ ತಲುಪಿತ್ತು. ವಾದ ಆಲಿಸಿದ ಚುನಾವಣಾಧಿಕಾರಿ ರಾಮೇಶ್ವರಪ್ಪ ಅವರು ಅಗತ್ಯ ದಾಖಲೆ ಹಾಜರುಪಡಿಸಿರುವ ಹಿನ್ನೆಲೆಯಲ್ಲಿ ಎಸ್.ವಿ. ರಾಮಚಂದ್ರ ಅವರ ನಾಮಪತ್ರ ಸ್ವೀಕೃತವಾಗಿದೆ ಎಂದು ಘೋಷಿಸಿದರು.

ಬಂಗಾರಪೇಟೆ ವರದಿ: 15 ಅಭ್ಯರ್ಥಿಗಳು ಸಲ್ಲಿಸಿದ್ದ 21 ನಾಮಪತ್ರಗಳ ಪರಿಶೀಲನೆ ಬಳಿಕ ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ. ಎರಡು ನಾಮಪತ್ರ ಸಲ್ಲಿಸಿದ್ದ ಜೆಡಿಎಸ್ ಅಭ್ಯರ್ಥಿ ಸಿ.ವೆಂಕಟೇಶಪ್ಪ ಅವರ ಒಂದು ನಾಮಪತ್ರ ಮತ್ತು ಪಕ್ಷೇತರ ಅಭ್ಯರ್ಥಿ ಸಿ.ಬಿ.ಕೆ.ರಾಮ ಅವರ ನಾಮಪತ್ರ ತಿರಸ್ಕೃತಗೊಂಡಿವೆ. 14 ಅಭ್ಯರ್ಥಿಗಳ 19 ನಾಮಪತ್ರಗಳನ್ನು ಸ್ವೀಕರಿಸಲಾಗಿದೆ.

ಬೆಂಗಳೂರು ಚಿಕ್ಕಪೇಟೆ ನಿವಾಸಿ ರಾಮ ಅವರು ಒಂದೇ ನಾಮಪತ್ರ ಮಾತ್ರ ಸಲ್ಲಿಸಿದ್ದರು. ಕಾನೂನು ರೀತಿ ಪಕ್ಷೇತರ ಅಭ್ಯರ್ಥಿಯು 10 ಜನ ಸೂಚಕರಿಂದ ಅನುಮೋದಿತವಾಗಿರಬೇಕು. ಆದರೆ ರಾಮ ಅವರಿಗೆ 8 ಜನ ಸೂಚಕರು ಮಾತ್ರ ಅನುಮೋದಿಸಿದ್ದರು. ಇನ್ನುಳಿದ ಇಬ್ಬರು ಸೂಚಕರ ಬದಲಾಗಿ ಮೊದಲ 8 ಜನರ ಪೈಕಿ ಇಬ್ಬರು ಮತ್ತೆ ಅನುಮೋದಿಸಿದ್ದರು. ಹಾಗಾಗಿ ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿ ಸೈಯದ್ ನಿಲೂಫರ್ ಜಬೀನ್ ತಿಳಿಸಿದರು. ಕಣದಲ್ಲಿ 10 ಪಕ್ಷೇತರ ಅಭ್ಯರ್ಥಿಗಳಿದ್ದಾರೆ.

ರಾಮನಗರ ವರದಿ: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಇಬ್ಬರು ಅಭ್ಯರ್ಥಿಗಳ ನಾಲ್ಕು ನಾಮಪತ್ರಗಳು ತಿರಸ್ಕೃತಗೊಂಡಿವೆ. ಪಕ್ಷೇತರ ಅಭ್ಯರ್ಥಿ ಸುಗಂದರಾಜ್ ಅರಸ್ ಹಾಗೂ ಎಂ.ಬೋರೇಗೌಡ ಅವರು ಸಲ್ಲಿಸಿದ್ದ ತಲಾ ಎರಡು ನಾಮಪತ್ರಗಳು ತಿರಸ್ಕೃತಗೊಂಡಿವೆ.

ಒಟ್ಟು 21 ಅಭ್ಯರ್ಥಿಗಳು 30 ನಾಮಪತ್ರಗಳನ್ನು ಸಲ್ಲಿಸಿದ್ದರು. ಚುನಾವಣಾ ಅಧಿಕಾರಿ ವಿಜಯ್ ಕುಮಾರ್ ಪರಿಶೀಲನೆ ನಂತರ ಇಬ್ಬರು ಅಭ್ಯರ್ಥಿಗಳ ನಾಲ್ಕು ನಾಮಪತ್ರಗಳನ್ನು ತಿರಸ್ಕರಿಸಿದ್ದು, 19 ಅಭ್ಯರ್ಥಿಗಳ 26 ನಾಮಪತ್ರಗಳು ಸ್ವೀಕೃತವಾಗಿವೆ. ನಾಮಪತ್ರಗಳನ್ನು ವಾಪಸ್ ಪಡೆಯಲು ಶನಿವಾರ ಕೊನೆಯ ದಿನವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.