ಬುಧವಾರ, ಮೇ 18, 2022
23 °C

ಎಂಕೆಎಸ್ ಹೇಳಿಕೆಗೆ ಬಿಜೆಪಿ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಉಸ್ತುವಾರಿ   ಸಚಿವ ಎಸ್.ಎ.ರಾಮದಾಸ್ ವಿರುದ್ಧ ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆರೋಪಗಳನ್ನು ಬಿಜೆಪಿ ಕೆ.ಆರ್.      ಕ್ಷೇತ್ರ ಘಟಕ ತೀವ್ರವಾಗಿ ಖಂಡಿಸಿದೆ.ರಾಮದಾಸ್ ಮಾಡುತ್ತಿರುವ ಪ್ರಗತಿಪರ ಕೆಲಸ ಸಹಿಸಲಾರದೇ ಈ  ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆಶ್ರಯ ಮನೆಗಳ ವಿಚಾರವಾಗಿ ರಾಮದಾಸ್ 1999-2004ರ ಅವಧಿಯಲ್ಲಿ ಒಬ್ಬ ವಿರೋಧ ಪಕ್ಷದ ಶಾಸಕನಾಗಿ ಇದ್ದುಕೊಂಡು ಕ್ಷೇತ್ರದ 4500ಕ್ಕೂ ಹೆಚ್ಚು ಫಲಾನುಭವಿಗ   ಳನ್ನು ಗುರುತಿಸಿ ಅವರಿಗೆ ಮನೆ ನೀಡಿದ್ದಾರೆ. 2004ರಲ್ಲಿ ಎಂಕೆಎಸ್ ಶಾಸಕರಾದ ಮೇಲೆ ಫಲಾನುಭವಿಗಳನ್ನು ಬದಲಾಯಿಸುವ ಪ್ರಯತ್ನ ಮಾಡಿ ್ದ    ದ್ದಾರೆ ಎಂದು ಕೆ.ಆರ್.ಕ್ಷೇತ್ರದ ಅಧ್ಯಕ್ಷ ವಿ.ಸೋಮಸುಂದರ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.ರೆವಿನ್ಯೂ ಬಡಾವಣೆಗಳಲ್ಲಿ ಅಕ್ರಮ ಮನೆಗಳನ್ನು ತೆರವುಗೊಳಿಸುವ ಕಾರ್ಯಕ್ಕೆ ರಾಮದಾಸ್ ಸೂಚನೆ ನೀಡಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರ, ಈ ವಿಚಾರದಲ್ಲಿ ರಾಮದಾಸ್ ಅವರು ಸೋಮಶೇಖರ್ ಅವರಿಂದ ಪಾಠ ಕಲಿಯಬೇಕಾದ ಅವಶ್ಯಕತೆ      ಯಿಲ್ಲ. ರಾಮದಾಸ್ ಅವರು ತಮ್ಮ ರಾಜಕೀಯ ಹೋರಾಟ ಆರಂಭ ಮಾಡಿದ್ದೇ ಈ ರೆವಿನ್ಯೂ ಬಡಾವಣೆಯ ನಿವಾಸಿ     ಗಳ ವಿಷಯದಿಂದ ಎಂದು ಸ್ಪಷ್ಟಪಡಿಸಿದರು.ಸಚಿವ ರಾಮದಾಸ್ ಪ್ರತಿ ತಾಲ್ಲೂಕಿಗೂ ಭೇಟಿ ನೀಡಿ ಖುದ್ದು ಸಮಸ್ಯೆ ಆಲಿಸಿ ಅಧಿಕಾರಿಗಳೊಂದಿಗೆ ಸಭೆ ನಡೆಸುತ್ತಿದ್ದಾರೆ. ಅಲ್ಲದೇ ಕೆಡಿಪಿ ಸಭೆ ನಡೆಸುತ್ತಿರುವುದು ನಿಮ್ಮ ಕಾಣಿಗೆ ಕಾಣಿಸುತ್ತಿಲ್ಲವೇ ಅಥವಾ ಜಾಣ ಕುರುಡೇ ಎಂದು ಪ್ರಶಸ್ನಿಸಿದ್ದಾರೆ.ಕ್ಷೇತ್ರದ ಉಪಾಧ್ಯಕ್ಷ ಆರ್.ರಾಮಪ್ರಸಾದ್, ರಾಜೇಶ್, ಪ್ರಧಾನ ಕಾರ್ಯದರ್ಶಿ ಎಚ್.ಪಿ.ಚೇತನ್, ಮಂಜುನಾಥ್, ಕಾರ್ಯದರ್ಶಿ ವಿ.ಎನ್.ಕೃಷ್ಣ, ಶಿವಪ್ರಕಾಶ್, ನಟರಾಜ್, ಖಜಾಂಚಿ ರವಿಶಂಕರ್ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.