ಕಾಂಗ್ರೆಸ್, ಜೆಡಿಎಸ್, ಶಾಸಕರು ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದರೆ, ಆ ರಾಜೀನಾಮೆಯ ಹಿಂದಿನ ಕಾರಣಗಳು ಇನ್ನಷ್ಟು ಸ್ಪಷ್ಟೀಕರಣ ಅಗತ್ಯವಿಲ್ಲ ಎನ್ನುವಷ್ಟು ಸಮಾಧಾನಕರವಾಗಿ ಕಂಡುಬಂದು, ನಮ್ಮ ವಿಧಾನಸಭಾಧ್ಯಕ್ಷರು ಅದನ್ನು ತಕ್ಷಣ ಅಂಗೀಕರಿಸಿಬಿಡುತ್ತಾರೆ.

ಅದೇ, ಬಿಜೆಪಿ ಶಾಸಕ ಶ್ರೀರಾಮುಲು ವಿಧಾನಸಭಾಧ್ಯಕ್ಷರ ಮಡಿಕೇರಿಯ ಮನೆಗೇ ಹೋಗಿ, ಅವರಿಗಾಗಿ ಕಾಯ್ದು ಕುಳಿತು, ರಾಜೀನಾಮೆ ಸಲ್ಲಿಸಿ, ಸೂಕ್ತ ಕಾರಣವನ್ನು ನೀಡಿ, ಅದನ್ನು ಅಂಗೀಕರಿಸುವಂತೆ ವಿನಂತಿಸಿಕೊಂಡರೂ ಅವರಿಗೆ ಅದು `ಸಮಾಧಾನ~ ತರುವುದಿಲ್ಲ. ಇನ್ನಷ್ಟು `ಸ್ಪಷ್ಟೀಕರಣ~ ಕೋರಿ ವಾರಗಟ್ಟಲೆ ರಾಜೀನಾಮೆ ಅಂಗೀಕರಿಸದೆ (ರಾಜೀನಾಮೆ ವಾಪಸ್ ಪಡೆಯುವವರೆಗೂ) ಕಾಯ್ದು ಕೂರುತ್ತಾರೆ. ಎಂತಹ ನಿಷ್ಪಕ್ಷಪಾತ ಧೋರಣೆ!

ಇನ್ನು ಸಚಿವ ಜಗದೀಶ ಶೆಟ್ಟರ್, `ತೆಲಂಗಾಣ ಹೋರಾಟ ಸಂಬಂಧ ಅಷ್ಟೊಂದು ಶಾಸಕರು ಸಲ್ಲಿಸಿದ ರಾಜೀನಾಮೆಯನ್ನು ಅಲ್ಲಿ ಅಂಗೀಕರಿಸಲಾಗಿದೆಯೇ?~ ಎಂದು ಪ್ರಶ್ನಿಸುತ್ತಾರೆ.

ನಮ್ಮ ಮುಖ್ಯಮಂತ್ರಿಗಳಾದರೋ, `ರಾಜೀನಾಮೆ ವಿಚಾರ ಶ್ರೀರಾಮುಲು ಮತ್ತು ವಿಧಾನಸಭಾಧ್ಯಕ್ಷರ ನಡುವಿನ ವಿಚಾರ~ ಎಂದು ಒಮ್ಮೆ ಹೇಳಿದರೆ, `ರಾಜೀನಾಮೆ ಅಂಗೀಕರಿಸುವುದು ಅಥವಾ ಅಂಗೀಕರಿಸದಿರುವುದು ವಿಧಾನಸಭಾಧ್ಯಕ್ಷರಿಗೆ ಬಿಟ್ಟ ವಿಚಾರ~ ಎಂದು ಇನ್ನೊಮ್ಮೆ ಹೇಳುತ್ತಾರೆ.

ಮತ್ತೊಮ್ಮೆ `ರಾಜೀನಾಮೆ ಹಿಂಪಡೆಯುವಂತೆ ಮನವೊಲಿಸಲಾಗುತ್ತಿದೆ~ ಎಂದು ಹೇಳಿದರೆ, ಮಗದೊಮ್ಮೆ `ಇನ್ನೆರಡು ದಿನಗಳಲ್ಲಿ ಶ್ರೀರಾಮುಲು ರಾಜೀನಾಮೆ ಹಿಂಪಡೆಯಲಿದ್ದಾರೆ~ ಎಂದು ಘೋಷಿಸುತ್ತಾರೆ!

ತಾವು ಏನು ಮಾಡಿದರೂ ನಡೆಯುತ್ತದೆ ಎಂದು ಇವರೆಲ್ಲ ಅಂದುಕೊಂಡಿದ್ದಾರೋ, ಅಥವಾ ಜನರು ಇವರ ಕಪಟನಾಟಕದ ಹಿಂದಿನ ಮರ್ಮವನ್ನು ಅರಿಯದಷ್ಟು ಮೂರ್ಖರೆಂದುಕೊಂಡಿದ್ದಾರೋ.. ತಿಳಿಯದು !.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.