ಬುಧವಾರ, ಏಪ್ರಿಲ್ 14, 2021
24 °C

ಎಂಥ ವಿಪರ್ಯಾಸ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾತನಾಡುವುದು ರಾಷ್ಟ್ರೀಯತೆ ಬಗ್ಗೆ; ಮಣೆ ಹಾಕುವುದು ಜಾತಿವಾದಕ್ಕೆ!

ಹೇಳಿಕೊಳ್ಳುವುದು ತಾನು ಸ್ಥಿರ ಸರ್ಕಾರವೆಂದು; ನಾಲ್ಕು ವರ್ಷಗಳಲ್ಲಿ ಮೂರನೇ ಮುಖ್ಯಮಂತ್ರಿ ರೆಡಿ!ಕರೆದು ಕೊಳ್ಳುವುದು ತನ್ನನ್ನು ಶಿಸ್ತಿನ ಪಕ್ಷವೆಂದು; ಅದೇ ವೇಳೆ, ಮುಖ್ಯಮಂತ್ರಿಯನ್ನು ನಿಂದಿಸುತ್ತ ದಿನ ಕಳೆದ ಸಚಿವರ ವಿರುದ್ಧ ಶಿಸ್ತು ಕ್ರಮದ ಬದಲು ಅವರ (ಅಸಡ್ಡಾಳ) ಮಾತಿಗೆ ಮನ್ನಣೆ!`ತುರ್ತು ಪರಿಸ್ಥಿತಿ~ ವಿರೋಧಿಸಿ ಜೈಲಿಗೆ ಹೋಗಿಬಂದವರ ಪಕ್ಷ; ಅಂಥ ಪಕ್ಷವೀಗ, ಭ್ರಷ್ಟಾಚಾರದ ಆರೋಪ ಹೊತ್ತು ಜೈಲಿಗೆ ಹೋಗಿ ಬಂದಾತನಿಗೆ ಶರಣು!

ಹೈಕಮಾಂಡ್‌ನಲ್ಲಿ, ಪ್ರಧಾನಿ ಹುದ್ದೆಗೆ ಯೋಗ್ಯರಾದ ಹಲವರಿದ್ದಾರಂತೆ; ಲೋಕಮಾಂಡ್‌ನ ಸದಸ್ಯನೊಬ್ಬನನ್ನು ಅಂಕೆಯಲ್ಲಿಡುವಷ್ಟು ಸಾಮರ್ಥ್ಯ ಹೊಂದಿರುವವರು ಒಬ್ಬರೂ ಇಲ್ಲ! ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಪಟ್ಟಕ್ಕೇರಿದ ಪಕ್ಷದ `ಸಾಧನೆ~ ಇದು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.