ಭಾನುವಾರ, ಏಪ್ರಿಲ್ 11, 2021
27 °C

ಎಎಫ್‌ಸಿ ಫುಟ್‌ಬಾಲ್: ಭಾರತಕ್ಕೆ ನಿರಾಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕತ್ (ಪಿಟಿಐ): ಭಾರತ ತಂಡದವರು ಇಲ್ಲಿ ನಡೆಯುತ್ತಿರುವ 22 ವರ್ಷ ವಯಸ್ಸಿನೊಳಗಿನವರ ಎಎಫ್‌ಸಿ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಿಂದ ಹೊರಬಿದ್ದಿದ್ದಾರೆ.ಸುಲ್ತಾನ್ ಕಾಬೂಸ್ ಕ್ರೀಡಾ ಸಮುಚ್ಛಯದಲ್ಲಿ ಗೆಲ್ಲಲೇಬೇಕಾಗಿದ್ದ ಪಂದ್ಯದಲ್ಲಿ ಭಾರತ ತಂಡದವರು 0-4 ಗೋಲುಗಳಿಂದ ಆತಿಥೇಯ ಓಮನ್ ವಿರುದ್ಧ ಸೋಲು ಕಂಡರು. ಈ ಕಾರಣ ಅಂತಿಮ ಸುತ್ತಿಗೆ ಅರ್ಹತೆ ಪಡೆಯಲು ವಿಫಲರಾದರು. ಮುಂದಿನ ವರ್ಷ ನಡೆಯಲಿರುವ ಏಷ್ಯಾಕಪ್‌ನಲ್ಲಿ ಸ್ಥಾನ ಪಡೆಯುವ ಅವಕಾಶವನ್ನೂ ಕಳೆದುಕೊಂಡರು.ಭಾರತ ತಂಡದವರು ಐದು ಪಂದ್ಯಗಳಿಂದ ಕೇವಲ ಏಳು ಪಾಯಿಂಟ್ ಕಲೆಹಾಕಿದರು. ಇಷ್ಟೇ ಪಂದ್ಯಗಳಿಂದ ಓಮನ್ 10 ಪಾಯಿಂಟ್ಸ್ ಗಳಿಸಿದೆ.ಈ ಪಂದ್ಯದಲ್ಲಿ ವಿಜಯಿ ತಂಡದ ಹಮೂದ್ ಸಲೇಹ್ (54ನೇ ನಿಮಿಷ), ಫಾಯೇದ್ ಇಬ್ರಾಹಿಂ (67ನೇ ನಿ.), ಸಲೇಹ್ ಹಬೀದ್ (75ನೇ ನಿ.) ಹಾಗೂ ಮುಬಾರಕ್ ಹುಮೇದ್ (89ನೇ ನಿ.) ಗೋಲು ಗಳಿಸಿದರು.

ಮೊದಲಾರ್ಧದಲ್ಲಿ ಯಾವುದೇ ಗೋಲು ಬರಲಿಲ್ಲ. ಈ ಅವಧಿಯಲ್ಲಿ ಭಾರತವೇ ಮೇಲುಗೈ ಸಾಧಿಸಿತ್ತು. ಆದರೆ ಎರಡನೇ ಅವಧಿಯಲ್ಲಿ ಓಮನ್ ಅಮೋಘ ಆಟದ ಮೂಲಕ ನಾಲ್ಕು ಗೋಲು ಗಳಿಸಿ ಮುಂದಿನ ಹಂತ ಪ್ರವೇಶಿಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.