ಬುಧವಾರ, ಜೂಲೈ 8, 2020
29 °C

ಎಪಿಎಂಸಿ ಅಕ್ರಮ ಕಟ್ಟಡ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಪಿಎಂಸಿ ಅಕ್ರಮ ಕಟ್ಟಡ ತೆರವು

ಸಿಂಧನೂರು: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಹಳೆ ಪ್ರಾಂಗಣದಲ್ಲಿ ಅನಧಿಕೃತವಾಗಿ ಕಟ್ಟಿದ್ದ ಕಟ್ಟಡಗಳನ್ನು ಎಪಿಎಂಸಿ ಅಧ್ಯಕ್ಷೆ ಎನ್.ಶಾಂತಾ ಭೀಮನಗೌಡ ಮಂಗಳವಾರ ತೆರವುಗೊಳಿಸಲು ಸೂಚಿಸಿದ ಹಿನ್ನೆಲೆಯಲ್ಲಿ ವರ್ತಕರೇ ತಮ್ಮ ಕಟ್ಟಡಗಳನ್ನು ಒಡೆದುಕೊಂಡರು.ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಪಕ್ಕದಲ್ಲಿ ವರ್ತಕರಿಗೆ ತಲಾ 39್ಡ12 ಅಡಿಯ ನಿವೇಶನಗಳನ್ನು ನೀಡಲಾಗಿತ್ತು. ಆದರೆ ವರ್ತಕರು ತಮಗೆ ನೀಡಿದ ನಿವೇಶನಕ್ಕಿಂತ ಹೆಚ್ಚಿನ ಜಾಗೆಯನ್ನು ಅತಿಕ್ರಮಿಸಿ 51್ಡ12 ನಿವೇಶನದಲ್ಲಿ ಮಳಿಗೆ ಕಟ್ಟಿಕೊಂಡಿದ್ದರು.ಎಪಿಎಂಸಿಯ ಚುನಾವಣಾ ಫಲಿತಾಂಶ ಪ್ರಕಟವಾಗುವ ದಿನದಂದು ಬೆಳಗಿನ ಜಾವ ಪೊಲೀಸ್ ಬಿಗಿ ಭದ್ರತೆಯಲ್ಲಿ ಸಹಾಯಕ ಆಯುಕ್ತ ಉಜ್ವಲ್‌ಕುಮಾರ ಘೋಷ್ ಮತ್ತು ಎಪಿಎಂಸಿ ಕಾರ್ಯದರ್ಶಿ ಸತೀಶಕುಮಾರ ಅಕ್ರಮವಾಗಿ ಕಟ್ಟಿದ್ದ 8 ಮಳಿಗೆಗಳನ್ನು ಹಿಟಾಚಿ ಮೂಲಕ ತಾಸಿನಲ್ಲಿಯೇ ಒಡೆದುರುಳಿಸಿದ್ದರು.ಆನಂತರ ವರ್ತಕರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಹೆಚ್ಚಿನ ಪ್ರಮಾಣದಲ್ಲಿ ಒಡೆಯದಂತೆ ನೋಡಿಕೊಂಡಿದ್ದರು. ಸಹಾಯಕ ಆಯುಕ್ತರು ತೆರವುಗೊಳಿಸಿದ್ದರೂ ಮಾಲೀಕರು ಮಳಿಗೆಗಳನ್ನು ಪುನಃ ಕಟ್ಟಿಕೊಂಡಿದ್ದರು.ಮಂಗಳವಾರದ ಪ್ರಜಾವಾಣಿ ಸಂಚಿಕೆಯಲ್ಲಿ ಸಹಾಯಕ ಆಯುಕ್ತರು ಅಕ್ರಮ ಕಟ್ಟಡಗಳನ್ನು ದ್ವಂಸಗೊಳಿಸಿದರೂ ಪುನಃ ಕಟ್ಟಿಕೊಂಡ ಬಗ್ಗೆ ಪ್ರಕಟವಾದ ವರದಿಗೆ ಸ್ಪಂದಿಸಿದ ಎಪಿಎಂಸಿ ಅಧ್ಯಕ್ಷೆ ಎನ್. ಶಾಂತಾ ಭೀಮನಗೌಡ ಅತಿಕ್ರಮಣಕಾರರಿಗೆ ತೆರವುಗೊಳಿಸಲು ಸೂಚಿಸಿದರು.ನಿರ್ದೇಶಕರಾದ ಹರಟನೂರು ಕರಿಯಪ್ಪ ವಕೀಲರು, ಮಲ್ಲನಗೌಡ ಮೇಟಿ, ಬಸನಗೌಡ, ಚನ್ನಬಸವರಾಜ ಮತ್ತಿತರರು ವರ್ತಕರ ತಮ್ಮ ಮಳಿಗೆಗಳನ್ನು ತೆರವುಗೊಳಿಸುವ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.