ಎಫ್‌ಐಆರ್: ಇದೀಗ ಮುರುಗೇಶ್ ನಿರಾಣಿ ಸರದಿ

7

ಎಫ್‌ಐಆರ್: ಇದೀಗ ಮುರುಗೇಶ್ ನಿರಾಣಿ ಸರದಿ

Published:
Updated:

ಬೆಂಗಳೂರು (ಪಿಟಿಐ): ಭೂಹಗರಣಕ್ಕೆ ಸಂಬಂಧಿಸಿದಂತೆ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಲೋಕಾಯುಕ್ತ ಪೊಲೀಸರು ಶನಿವಾರ ಪ್ರಥಮ ಮಾಹಿತಿ ವರದಿ (ಎಫ್ ಐ ಆರ್) ದಾಖಲಿಸಿದ್ದಾರೆ.ಕೈಗಾರಿಕಾ ಉದ್ದೇಶಕ್ಕಾಗಿ ಸ್ವಾಧಿನಪಡಿಸಿಕೊಂಡ ಭೂಮಿಯನ್ನು ಡಿನೋಟಿಫೈ ಮಾಡುವ ಸಮಯದಲ್ಲಿ ಅಕ್ರಮ ಎಸಗಿದ್ದಾರೆ ಎಂಬ ಆರೋಪ ಮೇರೆಗೆ ಮುರುಗೇಶ್ ನಿರಾಣಿ ಮತ್ತು ಇತರರು ಸೇರಿದಂತೆ  8 ಮಂದಿಯ ವಿರುದ್ಧ ಲೋಕಾಯುಕ್ತ ಪೊಲೀಸರು ಶನಿವಾರ ಪ್ರಥಮ ಮಾಹಿತಿ ವರದಿ ದಾಖಲಿಸಿದ್ದಾರೆ. ಸಚಿವರ ಸಹೋದರ ಎಚ್.ಆರ್. ನಿರಾಣಿ ಅವರ ಹೆಸರೂ ಎಫ್‌ಐಆರ್‌ನಲ್ಲಿ ದಾಖಲಾಗಿದೆ.

ದೇವನಹಳ್ಳಿ ಬಳಿಯ ಹೂವಿನಾಯಕನಹಳ್ಳಿಯಲ್ಲಿನ ಸುಮಾರು 20 ಎಕರೆ ಕೈಗಾರಿಕಾ ಜಮೀನು ಹಾಗೂ ದಾಬಸ್‌ಪೇಟೆ ಕೈಗಾರಿಕಾ ಪ್ರದೇಶದಲ್ಲಿನ ಮರಕನಕುಪ್ಪೆ ಗ್ರಾಮದಲ್ಲಿ ಏಳು ಎಕರೆ ಜಮೀನನ್ನು 2010ರಲ್ಲಿ ಸ್ವಂತ ಲಾಭಕ್ಕಾಗಿ ಸ್ವಾಧೀನ ಪ್ರಕ್ರಿಯೆಯಿಂದ ಕೈಬಿಟ್ಟಿದ್ದಾರೆ (ಡಿನೋಟಿಫೈ) ಎನ್ನುವುದು ಅರ್ಜಿದಾರರ ದೂರು.

 

ಇಲ್ಲಿಗೆ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರ ಸಂಪುಟದ ಇಬ್ಬರು ಸಚಿವರ ಮೇಲೆ  ಎಫ್‌ಐಆರ್ ದಾಖಲಾದಂತಾಗಿದೆ. ಗೃಹ ಸಚಿವ ಆರ್. ಅಶೋಕ್ ವಿರುದ್ಧ ಈಗಾಗಲೇ ಎಫ್ಐಆರ್ ದಾಖಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry