ಚಿಕ್ಕಮಗಳೂರು: ನಗರದಲ್ಲಿ ಮಂಗಳವಾರ ಮಧ್ಯಾಹ್ನ ಒಂದು ತಾಸಿಗೂ ಹೆಚ್ಚು ಹೊತ್ತು ಧಾರಾಕಾರ ಮಳೆ ಸುರಿಯಿತು. ಮಳೆಯಿಂದ ನಗರದ ರಸ್ತೆಗಳು ಕ್ಷಣ ಮಾತ್ರದಲ್ಲಿ ಹಳ್ಳದಂತೆ ಕಾಣಿಸುತ್ತಿದ್ದವು. ಮಲ್ಲಂದೂರು ರಸ್ತೆ ಹಾಗೂ ವಿಜಯಪುರ ಕೆಲವು ಬಡಾವಣೆಗಳಲ್ಲಿ ಚರಂಡಿ ನೀರು, ಉಕ್ಕಿ ರಸ್ತೆಯಲ್ಲಿ ಹರಿಯಿತು. ಕಳೆದೆರಡು ದಿನಗಳಿಂದಲೂ ಉತ್ತಮ ಮಳೆ ಯಾಗುತ್ತಿದೆ.

ಕಳೆದ ಒಂದು ವಾರದಿಂದ ಬಿಸಿಲು ಹೆಚ್ಚಾಗಿತ್ತು. ಈಗ ಮಳೆ ಬರುತ್ತಿರುವುದರಿಂದ ಕಾದ ಇಳೆಗೆ ಮಳೆ ತಂಪೆರೆ ದಂತಾಗಿದೆ. ನಗರದ ಐ.ಜಿ.ರಸ್ತೆ ಕಾಮಗಾರಿ ಪೂರ್ಣಗೊಳ್ಳದೆ ಚರಂಡಿ ನೀರು ಸರಾಗವಾಗಿ ಹರಿಯಲು ಅವಕಾಶವಿಲ್ಲದಂತಾಗ್ದ್ದಿದು, ಇಡೀ ರಸ್ತೆ ಅಲ್ಲಲ್ಲಿ ಹಳ್ಳದಂತೆ ಕಾಣಿಸುತ್ತಿತ್ತು. ದ್ವಿಚಕ್ರ ವಾಹನ ಸವಾರರು ಮತ್ತು ಪಾದಚಾರಿಗಳು ಪರದಾಡುವಂತಾಯಿತು.

11574.2 ಮಿಲಿ ಮೀಟರ್ ಮಳೆ: ಜನವರಿ 1ರಿಂದ ಇದೇ 10ರವರೆಗೆ ಜಿಲ್ಲೆಯಲ್ಲಿ ವಾಡಿಕೆ ಮಳೆ 12142 ಮಿಲಿ ಮೀಟರ್ಗೆ ಬದಲಾಗಿ ಸರಾಸರಿ 11574.2 ಮಿಲಿ ಮೀಟರ್ ಮಳೆಯಾಗಿದೆ.

ಚಿಕ್ಕಮಗಳೂರು ತಾಲ್ಲೂಕಿನಲ್ಲಿ 705 ಮಿಲಿ ಮೀಟರ್ ವಾಡಿಕೆ ಮಳೆಗೆ ಬದಲಾಗಿ 661 ಮತ್ತು ಕಡೂರು ತಾಲ್ಲೂಕಿನಲ್ಲಿ 438ಕ್ಕೆ 297.3 ಮಿಲಿ ಮೀಟರ್ ನರಸಿಂಹರಾಜಪುರದಲ್ಲಿ 1552ಕ್ಕೆ 1295, ತರೀಕೆರೆಯಲ್ಲಿ 766ಕ್ಕೆ 742 ಮಿ.ಮೀ. ಕಡಿಮೆಯಾದರೆ ಉಳಿದ ತಾಲ್ಲೂಕುಗಳಲ್ಲಿ ವಾಡಿಕೆ ಮಳೆಗೆ ಬದಲಾಗಿ ಸರಾಸರಿ ಮಳೆ ಉತ್ತಮವಾಗಿದೆ. ಕೊಪ್ಪ ತಾಲ್ಲೂಕಿನಲ್ಲಿ 2893 ವಾಡಿಕೆ ಮಳೆಗೆ ಬದಲಾಗಿ ಸರಾಸರಿ ಮಳೆ 2513, ಮೂಡಿಗೆರೆ 2122ಕ್ಕೆ 2250, ಶೃಂಗೇರಿಯಲ್ಲಿ ವಾಡಿಕೆ ಮಳೆ 3661ಕ್ಕೆ 3814 ಸರಾಸರಿ ಮಳೆ ಬಿದ್ದಿದೆ.

ಮಳೆ ವಿವರ: ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 373.5 ಮಿಲಿ ಮೀಟರ್ ಮಳೆಯಾಗಿದೆ. ವಿವಿಧ ಸ್ಥಳಗಳಲ್ಲಿ ಬಿದ್ದಿರುವ ಮಳೆ ವಿವರ ಮಿ.ಮೀ.ಗಳಲ್ಲಿ ಇಂತಿದೆ.

ಚಿಕ್ಕಮಗಳೂರು 102, ಜೋಳದಾಳ್ 10.2, ಆಲ್ದೂರು 20, ಕೆ.ಆರ್.ಪೇಟೆ 22.5, ಸಂಗಮೇಶ್ವರಪೇಟೆ 10, ಬ್ಯಾರುವಳ್ಳಿ 5, ಕಳಸ 8.2, ಮಳಲೂರು 26, ದಾಸರಹಳ್ಳಿ 8.6, ಕಡೂರು 29, ಬೀರೂರು 1.2, ಗಿರಿಯಾಪುರ 8.2, ಎಮ್ಮೆದೊಡ್ಡಿ 25, ಕೊಪ್ಪ 5, ಹರಿಹರಪುರ 1, ಜಯಪುರ 2.2, ಬಸರಿಕಟ್ಟೆ 20.8, ಮೂಡಿಗೆರೆ 18.8, ಕೊಟ್ಟಿಗೆಹಾರ 11, ಜಾವಳಿ 18.8, ಗೋಣಿಬೀಡು 33, ಕಳಸ 32.8, ನರ ಸಿಂಹರಾಜಪುರ ತಾಲ್ಲೂಕಿನ ಬಾಳೆಹೊನ್ನೂರು 1, ಮೇಗರಮಕ್ಕಿ 4, ಶೃಂಗೇರಿ 25.8, ಕೆರೆಕಟ್ಟೆ 1.2, ತರೀಕೆರೆ ತಾಲ್ಲೂಕಿನ ಲಿಂಗದಹಳ್ಳಿಯಲ್ಲಿ 14.8 ಮಿಲಿ ಮೀಟರ್ ಮಳೆಯಾಗಿದೆ.

ನರಸಿಂಹರಾಜಪುರ: ಭಾರಿ ಮಳೆ
ನರಸಿಂಹರಾಜಪುರ: ಪಟ್ಟಣದ ವ್ಯಾಪ್ತಿಯಲ್ಲಿ ಸೋಮವಾರ ಸಂಜೆ 4.30 ವೇಳೆಗೆ ಸುರಿದ ಭಾರಿ ಮಳೆಗೆ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು.

ಗುಡುಗು ಸಿಡಿಲು ಸಹಿತ ಗಾಳಿಯಿಂದ ಕೂಡಿದ ಭಾರಿ ಪ್ರಮಾಣದಲ್ಲಿ ಮಳೆ ಸುರಿದ ಪರಿಣಾಮವಾಗಿ ಬಸ್ನಿಲ್ದಾಣದ ಮುಂಭಾಗದ ಮನೆಯ ಮುಂದಿದ್ದ ತೆಂಗಿನ ಮರ ಬುಡ ಸಮೇತ ಧರೆಗುರುಳಿ ವಿದ್ಯುತ್ ಕಂಬದ ಮೇಲೆ ಬಿದ್ದು ಇದು ಸಹ ವಾಲಿಕೊಂಡಿತು.

ಅಲ್ಲದೆ ಬಸ್ ನಿಲ್ದಾಣದೊಳಗೆ ನಿಲ್ಲಿಸಿಲಾಗಿದ್ದ ಆಟೊ ಜಖಂ ಗೊಂಡಿತು. ಅಲ್ಲದೆ ತೆಂಗಿನ ಮರ ತುಂಬಾ ಉದ್ದ ಇದ್ದ ಕಾರಣದಿಂದ ಸ್ಟೇಟ್ ಬ್ಯಾಂಕ್ ಆಪ್ ಮೈಸೂರಿನ ಆವರಣದಲ್ಲಿ ಎಟಿಎಂ ಕೇಂದ್ರದ ಸಮೀಪ ಹೋಗಿ ಬಿದ್ದಿತು. ಸುಮಾರು 2ಗಂಟೆ ಕಾಲ ಸುರಿದ ಭಾರಿ ಮಳೆ ಸುರಿದಿದ್ದು 4 ಸೆಂಟಿ ಮೀಟರ್ (45ಮಿ.ಮೀ) ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.