ಸೋಮವಾರ, ಜನವರಿ 20, 2020
21 °C

ಎಲ್ಲ ಗ್ರಾಮಗಳಿಗೂ ಸಂಪರ್ಕ ರಸ್ತೆ: ಸಂಸದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳ್ಳೇಗಾಲ: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಎಲ್ಲ ಗ್ರಾಮಗಳಿಗೂ ತಮ್ಮ ಅವಧಿಯೊಳಗೆ ಸಂಪರ್ಕ ರಸ್ತೆ ಕಲ್ಪಿಸುವುದಾಗಿ ಸಂಸದ ಆರ್. ಧ್ರುವನಾರಾಯಣ ಭರವಸೆ ನೀಡಿದರು.ತಾಲ್ಲೂಕಿನ ರಾಮಾಪುರ ಗ್ರಾಮದಲ್ಲಿ ರಾಮಾಪುರದಿಂದ ಮುತ್ತಶೆಟ್ಟಿ ದೊಡ್ಡಿವರೆಗೆ ನಿರ್ಮಿಸಲಾಗುತ್ತಿರುವ ರೂ.32 ಲಕ್ಷ ಅಂದಾಜು ವೆಚ್ಚದ ರಸ್ತೆ ನಿರ್ಮಾಣ ಕಾಮಗಾರಿಗೆ ಬುಧವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಜನತೆ ಸರ್ಕಾರದ ಹಣವನ್ನೇ ಎದುರು ನೋಡದೇ ಪ್ರತಿಯೊಂದು ಮನೆಯವರೂ ತಮ್ಮ ದೇಣಿಗೆ ನೀಡುವ ಮೂಲಕ ಉತ್ತಮ ಭವನ ನಿರ್ಮಾಣ ಮಾಡಲು ಮುಂದಾಗಬೇಕು.ಸಮುದಾಯ ಭವನಗಳ ನಿರ್ಮಾಣದ ನಂತರ ನಿರ್ವಹಣೆ ಬಗ್ಗೆ ಜನರು ಹೆಚ್ಚು ಒತ್ತುನೀಡಬೇಕು ಎಂದು ಅವರು ಹೇಳಿದರು.ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದಿದ್ದರೂ ಸಹ ಕ್ಷೇತ್ರದಲ್ಲಿ ಸಂಸದರ ಜೊತೆಗೂಡಿ ಜನತೆಗೆ ಸಾಕಷ್ಟು ಕೆಲಸಗಳನ್ನು ಮಾಡಲಾಗುತ್ತಿದೆ. ಜನತೆಗೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮುಖಂಡರು ಅರಿವನ್ನು ಮೂಡಿಸುವ ಪ್ರಯತ್ನ ಮಾಡಬೇಕು ಎಂದು ಶಾಸಕ ಆರ್. ನರೇಂದ್ರ ತಿಳಿಸಿದರು.ರಾಮಾಪುರದಲ್ಲಿ 10 ಲಕ್ಷ ರೂ. ಅಂದಾಜು ವೆಚ್ಚದ ರಾಜೀವ್‌ಗಾಂಧಿ ಸೇವಾ ಕೇಂದ್ರ ಕಟ್ಟಡ ನಿರ್ಮಾಣ, ಅಂಬೇಡ್ಕರ್ ನಗರದಲ್ಲಿ ರೂ.6 ಲಕ್ಷ ಅಂದಾಜು ವೆಚ್ಚದ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ,ಗೋಪಿಶೆಟ್ಟಿಯೂರಿನಲ್ಲಿ ಶಾಸಕರ ರೂ.2 ಲಕ್ಷ ಅಂದಾಜು ವೆಚ್ಚದ ಬಸ್ ನಿಲ್ದಾಣ, ಪುದುರಾಮಾಪುರದಲ್ಲಿ ರೂ.6 ಲಕ್ಷ ಅಂದಾಜು ವೆಚ್ಚದಲ್ಲಿ ಪಡಿಯಾಚ್ಚಿ ಜನಾಂಗದ ಸಮುದಾಯ ಭವನ ನಿರ್ಮಾಣ, ಆರ್‌ಐಡಿಎಫ್ ಯೋಜನೆಯಡಿ ರೂ. 20 ಲಕ್ಷ ಅಂದಾಜು ವೆಚ್ಚದಲ್ಲಿ ಹೆಣ್ಣುಮಕ್ಕಳ ಸರ್ಕಾರಿ ಪ್ರೌಢಶಾಲೆಗೆ 4 ಕೊಠಡಿಗಳ ನಿರ್ಮಾಣ ಕಾಮಗಾರಿಗಳಿಗೆ ಇದೇ ಸಂದರ್ಭದಲ್ಲಿ ಸಂಸದರು ಮತ್ತು ಶಾಸಕರು ಗುದ್ದಲಿ ಪೂಜೆ ನೆರವೇರಿಸಿದರು.ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಶಿಕಲಾ, ರಾಮಾಪುರ ಬ್ಲಾಕ್ ಅಧ್ಯಕ್ಷ ಕಾಮರಾಜ್, ಕೆಪಿಸಿಸಿ ಸದಸ್ಯ ಬಸವ ರಾಜು, ರಾಮಾಪುರ  ಗ್ರಾ.ಪಂ. ಅಧ್ಯಕ್ಷೆ ಮರಿಯಮ್ಮ, ಮುಖಂಡ ರವಿ, ಪಿಎಂಜಿಎಸ್‌ವೈ ಎಂಜಿನಿಯರ್ ರಘು ನಾಥನ್, ಟಿ.ಸಿ.ವೀರಭದ್ರಯ್ಯ, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಹಾದೇವ ಸ್ವಾಮಿ ಇತರರರು ಇದ್ದರು.ದೂರು ದಾಖಲಿಸಲು ಸೂಚನೆ

ಚಾಮರಾಜನಗರ: ಗುಂಡ್ಲುಪೇಟೆ ಪುರಸಭೆಯಲ್ಲಿ ಕುಂದುಕೊರತೆ ಮತ್ತು ಪರಿಹಾರ ಕೇಂದ್ರವನ್ನು ಆರಂಭಿಸಿದ್ದು, ಸಾರ್ವಜನಿಕರು ತಮ್ಮ ದೂರುಗಳನ್ನು ದೂರವಾಣಿ ಮುಖಾಂತರ ದೂರು ನೀಡುವ ಜೊತೆಗೆ ಅಂತರ್ಜಾಲದಲ್ಲೂ ಸಹ ದೂರುಗಳನ್ನು ದಾಖಲಿಸಬಹುದಾಗಿದೆ.   ಸಾರ್ವಜನಿಕರು  ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದು ಹಾಗೂ ದೂರವಾಣಿ ಸಂಖ್ಯೆ: 08229-223377,        ಅಂತರ್ಜಾಲ ವಿಳಾಸ ಡಿಡಿಡಿ.ಜ್ಠ್ಞಛ್ಝ್ಠಛಿಠಿಠಿಟಡ್ಞಿ.ಜಟ.ಜ್ಞಿ ನೋಡಬಹುದು ಎಂದು ಪುರಸಭೆಯ ಮುಖ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)