ಗುರುವಾರ , ಏಪ್ರಿಲ್ 22, 2021
30 °C

ಎಸ್ಪಿ ಕಚೇರಿ ಎದುರು ಪ್ರತಿಭಟನೆ: ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಘಟಗಿ:  ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಬಂಧನಕ್ಕೊಳಗಾದವರ ಕುಟುಂಬದವರನ್ನು ಸಂಸದ ಪ್ರಹ್ಲಾದ ಜೋಶಿ ಮಂಗಳವಾರ ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೊಲೀಸರು ಏಕಪಕ್ಷೀಯವಾಗಿ ವರ್ತಿಸಿದ್ದು ಒಂದು ಕೋಮಿನ ಕುಟುಂಬದವರನ್ನು ಬಂಧಿಸಿದ್ದಾರೆ, ಇದರಿಂದ ಹಲವು ಅನುಮಾನಗಳು ಸೃಷ್ಟಿಯಾಗಿವೆ. ಹೀಗಾಗಿ ಸೂಕ್ತ ತನಿಖೆ ಕೈಗೊಳ್ಳದಿದ್ದಲ್ಲಿ ನೊಂದ ಕುಟುಂಬಗಳ ಮಹಿಳೆಯರೊಂದಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರಿಗೆ ಪ್ರತಿಭಟನೆ ನಡೆಸಲಾಗುವುದು  ಎಂದು ಎಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಕಿರೇಸೂರ ಕುಟುಂಬದ ಕಸ್ತೂರಿ ಕಿರೇಸೂರ ಮಾತನಾಡಿ, ಮಾನಸಿಕ ಅಸ್ವಸ್ಥನಾದ ತಮ್ಮ ಮಗ ಪ್ರಕಾಶ ಕಿರೇಸೂರನನ್ನು ಪೊಲೀಸರು ವಿನಾಕಾರಣ ಬಂಧಿಸಿ, ಅನ್ಯಾಯ ಎಸಗಿದ್ದು, ಪರಿಪರಿಯಾಗಿ ವಿನಂತಿಸಿಕೊಂಡರೂ, ಬಿಡದೆ ಬಂಧಿಸಿದ್ದಾರೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.ಗೋವಿಂದಪ್ಪ ಭೋವಿ ಅವರ ಮನೆಗೆ ಭೇಟಿ ನೀಡಿದ ಸಂಸದರ ಎದುರಿನಲ್ಲಿ, ಕುಟುಂಬದ ಮಹಿಳೆಯರು, ಪೊಲೀಸರು ಬೂಟುಗಾಲಿನಿಂದ ಪೂಜಾ ಕೋಣೆಯವರೆಗೂ ತೆರಳಿ, ಹಸುಗೂಸಿನೊಂದಿಗೆ ಮಲಗಿದ್ದ, ಮಹಿಳೆಯನ್ನೂ ಬಿಡದೆ ಪರೀಕ್ಷಿಸಿರುವುದಾಗಿ ದೂರಿದರು.

 

ಇದಕ್ಕೆ ಪ್ರತಿಕ್ರಿಯಿಸಿ  ಸಂಸದರು, ಬೂಟುಗಾಲಿನಲ್ಲಿ ಮನೆಯೊಳಗೆ ಪ್ರವೇಶಿಸಿದ ಪೇದೆಯನ್ನು ಗುರುತಿಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿಯೇ ಇದ್ದ ಡಿವೈಎಸ್‌ಪಿ ರಮೇಶ ಬನಹಟ್ಟಿ, ಸಿಪಿಐ ಮಹಾಂತೇಶ ಜಿದ್ದಿ ಅವರಿಗೆ ಸೂಚಿಸಿದರು.ಮಾನಸಿಕ ಅಸ್ವಸ್ಥ ಪ್ರಕಾಶ ಕಿರೇಸೂರನನ್ನು ಬಂಧಿಸಿರುವುದನ್ನು ಪ್ರಶ್ನಿಸಿ, ಮಾನವಹಕ್ಕುಗಳ ಆಯೋಗಕ್ಕೆ ದೂರು ನೀಡುವುದಾಗಿ ತಿಳಿಸಿದರು.ಈ ಸಂದರ್ಭದಲ್ಲಿ, ವೆಂಕಟೇಶ ಮೇಸ್ತ್ರಿ, ಈರಣ್ಣ ಗೋಕುಲ, ಜಯತೀರ್ಥ ಕಟ್ಟಿ, ದತ್ತಾತ್ರೇಯ ವಜ್ರಳ್ಳಿ, ಗದಿಗೆಪ್ಪ ಕಳ್ಳಿಮನಿ, ತಾ.ಪಂ. ಅಧ್ಯಕ್ಷ ಶೇಖಣ್ಣ ಹುಲಗೂರ, ಜಿ.ಪಂ. ಸದಸ್ಯ ಶಂಕ್ರಣ್ಣ ಅಗಡಿ, ತಾ.ಪಂ.ಸದಸ್ಯ ಚಿನ್ನಪ್ಪ ಕೊಪ್ಪದಗಾಣಿಗೇರ, ಎಲ್ಲಾರಿ ಶಿಂಧೆ, ಶಿವಲೀಲಾ ಜವಳಿ, ವೀಣಾ ಕುಲಕರ್ಣಿ, ನಾಗವೇಣಿ ಉಡುಪಿ, ವಿಜಯ ನಾಡಜೋಶಿ, ಚಂದ್ರಗೌಡ ಪಾಟೀಲ, ಸಿ.ಬಿ.ಪಾಟೀಲ, ಪರಶುರಾಮ ರಜಪೂತ, ಅಲ್ಲದೇ ಗ್ರಾಮದ ಎರಡೂ ಕೋಮಿನ ಗಣ್ಯರು ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಕ್ರೆಡಲ್ ಅಧ್ಯಕ್ಷ ಸಿ.ಎಂ.ನಿಂಬಣ್ಣವರ, ಜಿ.ಪಂ.ಸದಸ್ಯ ವೈ.ಬಿ.ದಾಸನಕೊಪ್ಪ ಅವರು ಗ್ರಾಮಕ್ಕೆ ಭೇಟಿ ನೀಡಿ, ಸಂತ್ರಸ್ತ ಕುಟುಂಬಗಳಿಗೆ ಸಾಂತ್ವನ ಹೇಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.