ಶನಿವಾರ, ಜನವರಿ 18, 2020
19 °C

ಏಕತಾ ಅಭಿಯಾನ ಓಟಕ್ಕೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಸರ್ದಾರ ವಲ್ಲಭ­ಭಾಯಿ ಪಟೇಲ್‌ ಅವರ ಪುಣ್ಯಸ್ಮರಣೆ ಹಾಗೂ ಏಕತಾ ಪ್ರತಿಮೆಯ ಪ್ರತಿ­ಷ್ಠಾನದ ಅಭಿಯಾನದ ಅಂಗವಾಗಿ ಭಾನುವಾರ ಏಕತಾ ಓಟ ನಡೆಯಿತು.ಬೆಳಿಗ್ಗೆ ನಗರದ ಪಟೇಲ್‌ ವೃತ್ತದಲ್ಲಿ­ರುವ ಸರ್ದಾರ ವಲ್ಲಭಭಾಯಿ ಪಟೇಲ್‌ ಪುತ್ಥಳಿಗೆ ಗಣ್ಯರಿಂದ ಮಾರ್ಲಾ­­ಪಣೆ ಮಾಡಿದರು. ನಂತರ ಸೋಮ­ವಾರಪೇಟೆ ಹಿರೇಮಠ ರಾಚೋಟಿ ವೀರಶಿವಾಚಾರ್ಯ ಸ್ವಾಮೀಜಿ ಏಕತಾ ಓಟಕ್ಕೆ ಚಾಲನೆ ನೀಡಿದರು.ಏಕತಾ ಓಟ ವಲ್ಲಭಭಾಯಿ ವೃತ್ತದಿಂದ ಆರಂಭಗೊಂಡು ಚಂದ್ರಮೌಳೇಶ್ವರ ವೃತ್ತ, ಮಹಾವೀರ ವೃತ್ತದ, ಜೈನ್ ಮಂದಿರ ಮಾರ್ಗವಾಗಿ ತೀನ್‌ಕಂದೀಲ್‌, ಸದರ ಬಜಾರ ಮೂಲಕ  ಶೆಟ್ಟಿಭಾವಿ ವೃತ್ತದಿಂದ ಸೋಮವಾರಪೇಟೆ ಹಿರೇಮಠದಲ್ಲಿ ಅಂತ್ಯಗೊಳಿಸಲಾಯಿತು.ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ಬಸನಗೌಡ ಬ್ಯಾಗವಾಟ್, ವಿಧಾನ ಪರಿಷತ್‌ ಮಾಜಿ ಸದಸ್ಯ ಎನ್‌.ಶಂಕರಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ತಿಮ್ಮಾರೆಡ್ಡಿ, ಆರ್‌ಡಿಎ ಮಾಜಿ ಅಧ್ಯಕ್ಷ ರಾಜಕುಮಾರ, ಅಮರೇಶ ಹೊಸಮನಿ, ತ್ರಿವಿಕ್ರಮ ಜೋಶಿ, ಬಂಡೇಶ ವಲ್ಕಂದಿನ್ನಿ,ನಗರಸಭೆ ಸದಸ್ಯರಾದ ನರಸಪ್ಪ ಯಕ್ಲಾಸಪುರ, ಆಂಜನೇಯ ಹಾಗೂ ಗಿರೀಶ ಕನಕವೀಡು, ನಾರಾಯಣರಾವ್‌ ಪುರತಿಪ್ಲಿ, ರಮಾನಂದ ಯಾದವ್‌, ಪ್ರಕಾಶ ವಕೀಲ ಹಾಗೂ ಮತ್ತಿತರರಿದ್ದರು.

ಪ್ರತಿಕ್ರಿಯಿಸಿ (+)