ಶನಿವಾರ, ಮೇ 8, 2021
26 °C

ಏಸುವಿನ ಕಷ್ಟ ಮರಣದ ನೆನಪು ಗುಡ್ ಫ್ರೈಡೇ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ಗುಡ್ ಫ್ರೈಡೇ  ನಿಮಿತ್ತ  ಸ್ಥಳೀಯ ಕ್ರೈಸ್ತ  ಬಾಂಧವರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ   ಶುಕ್ರವಾರ ಶಿಲುಬೆಯೊಂದಿಗೆ ಮೆರವಣಿಗೆ (ಶಿಲುಬೆಯ ಹಾದಿ) ನಡೆಸಿದರು.ಶುಭಶುಕ್ರವಾರದ ಈ ಸಂದರ್ಭದಲ್ಲಿ ಏಸುವಿನ ಕಷ್ಟ ಮರಣದ  ಚರಿತ್ರೆಯನ್ನು ನೆನಪು ಮಾಡಿಕೊಳ್ಳಲಾಯಿತಲ್ಲದೇ, ಈ ದಿನದ ಸಂದೇಶವನ್ನು ಹಂಚಿಕೊಳ್ಳಲಾಯಿತು. ಈ ಕಾರ್ಯಕ್ರಮದಲ್ಲಿ ಪಟ್ಟಣದ ಹೋಲಿ ರೋಸರಿ ಚರ್ಚ್‌ನ ಧರ್ಮಗುರು ಫಾ.ಪಾವೋಸ್ತೀನ್ ಪುಡ್ತಾದೋ, ಚರ್ಚ್‌ನ ಕನ್ಯಾ ಸ್ತ್ರೀಯರು ಮತ್ತು ಎಲ್ಲ ಕ್ರೈಸ್ತ ಬಾಂಧವರು ಭಾಗವಹಿಸಿದ್ದರು. ಹಳಿಯಾಳ ವರದಿ

ತಾಲ್ಲೂಕಿನಾದ್ಯಂತ ಕ್ರೈಸ್ತರ ತ್ಯಾಗ ಬಲಿದಾನದ ದಿನವಾದ ಗುಡ್ ಫ್ರೈಡೇಯನ್ನು  ಭಕ್ತಿಯಿಂದ ಆಚರಿಸಲಾಯಿತು.ಸ್ಥಳೀಯ ಮಿಲಾಗ್ರಾಸ್ ದೇವಾಲಯದಲ್ಲಿ ಗುರುವಾರ ಮಧ್ಯ ರಾತ್ರಿಯವರೆಗೂ ಪೂಜೆ ನಡೆಯಿತು. ಶುಕ್ರವಾರ ಬೆಳಿಗ್ಗೆ ತಾಲ್ಲೂಕಿನ ಎಲ್ಲ ಚರ್ಚ್‌ಗಳಲ್ಲಿ ವಿಶೇಷ ಪೂಜೆಗಳು ನಡೆದವು.ಮಿಲಾಗ್ರ್ರೆಸ್ ಚರ್ಚಿನ ಆವರಣದಲ್ಲಿ ಕ್ರಿಸ್ತನು ಎದುರಿಸಿದ ಸಂಕಷ್ಟಗಳನ್ನು ಸ್ಮರಿಸುವಂತಹ `ವೇ ಆಫ್ ಕ್ರಾಸ್~ ಎಂಬ ಶಿಲುಬೆ ಮಾರ್ಗದ ವಿಶೇಷ ಪೂಜೆ ವಿಧಿ ನಡೆಯಿತು. ಈ ವಿಶೇಷ ಪೂಜಾ ವಿಧಿಯಲ್ಲಿ ಐತಿಹಾಸಿಕ ಹಿನ್ನೆಲೆವುಳ್ಳ ಪ್ರಾಚೀನವಾದಂತಹ ಗ್ರೀಕ್ ಇಟಾಲಿಯನ್ ಶೈಲಿಯಲ್ಲಿ ನಿರ್ಮಿಸಿದ ಏಸುವಿನ ಕಳೆಬರಹದ ಮೂರ್ತಿ ಹಾಗೂ ಮಾತೆಯ ಮೇರಿಯ ಮೂರ್ತಿಗಳನ್ನು ಪ್ರದರ್ಶಿಸಲಾಯಿತು. ಕ್ರೈಸ್ತ ಧರ್ಮ ಗುರುಗಳಾದ  ಡಿಸೋಜಾ ಹಾಗೂ ವಿಕ್ಟರ್ ಪೂಜಾ ವಿಧಿ ವಿಧಾನವನ್ನು ಬೋಧಿಸಿದರು.

ಪ್ರಾರ್ಥನಾ ವಿಧಿಯಲ್ಲಿ ತಾಲ್ಲೂಕಿನ ಎಲ್ಲ ಕ್ರೈಸ್ತ ಧರ್ಮೀಯರು ಪಾಲ್ಗೊಂಡಿದ್ದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.