ಬುಧವಾರ, ಸೆಪ್ಟೆಂಬರ್ 18, 2019
21 °C

ಐಎಎಸ್, ಐಪಿಎಸ್ ಪರೀಕ್ಷೆಯತ್ತ ಗಮನ ಹರಿಸಿ

Published:
Updated:

ಬೆಳಗಾವಿ: ನಗರದ ಆರ್.ಎಲ್. ವಿಜ್ಞಾನ ಕಾಲೇಜಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾ ಟನಾ ಸಮಾರಂಭ ಇತ್ತೀಚೆಗೆ ಜರುಗಿತು.ಮುಖ್ಯ ಅತಿಥಿಯಾಗಿದ್ದ ಉಪ ಸಂರಕ್ಷಣಾಧಿಕಾರಿ ಜಿ.ಎಸ್. ಹೊಸೂರ ಮಾತನಾಡಿ, ಕ್ಷೇತ್ರ ಯಾವುದೇ ಇರಲಿ. ಸಾಧನೆಯತ್ತ ಗಮನ ಕೊಡಬೇಕು. ಉನ್ನತ ಮಟ್ಟದ ಗುರಿ ಹೊಂದಿರಬೇಕು. ಮನಸ್ಸು ಚಂಚಲವಾಗಿದ್ದರೆ ಸಾಧನೆ ಸಾಧ್ಯವಿಲ್ಲ ಎಂದರು.`ಐಎಎಸ್, ಐಪಿಎಸ್ ಪರೀಕ್ಷೆಗಳತ್ತ ಗಮನ ಹರಿಸಬೇಕು. ಸಣ್ಣ ಅವ ಕಾಶಗಳಿಗೆ ಸಂತೃಪ್ತರಾಗಬಾರದು. ಉನ್ನತ ಸಾಧನೆಯನ್ನು ಗುರಿಯಾಗಿ ಸಿಕೊಳ್ಳಬೇಕು~ ಎಂದು ಅವರು ಹೇಳಿದರು. ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಎಲ್.ವಿ. ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ.ಸಿ.ಎನ್. ನಾಯ್ಕರ ಪರಿಚಯಿಸಿದರು. ಪದವಿ ಪ್ರಾಚಾರ್ಯ ಪ್ರೊ.ವಿ.ಜಿ. ಅಷ್ಟಗಿ ಸ್ವಾಗತಿಸಿದರು.ಎನ್‌ಜಿಓಗೆ ಆಹ್ವಾನ

ಬೆಳಗಾವಿ: ಜಿಲ್ಲೆಯ ಅಪಾಯಕಾರಿ ಹಾಗೂ ಅಪಾಯಕಾರಿ ಅಲ್ಲದ ಉದ್ಯಮ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಬಾಲಕಾರ್ಮಿಕರನ್ನು ಸಮೀಕ್ಷೆ ಮೂಲಕ ಗುರುತಿಸಲು ಅರ್ಹ ಸರ್ಕಾರೇತರ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಅರ್ಹ ಅನುಭವಿ/ಪರಿಣತ ಸರ್ಕಾರೇತರ ಸಂಸ್ಥೆ/ಶೈಕ್ಷಣಿಕ ವಿಶ್ವವಿದ್ಯಾಲಯದ ಸಾಮಾಜಿಕ ಕಾರ್ಯ/ ಅಭಿವೃದ್ಧಿ/ಮಹಿಳಾ ವಿಭಾಗ ಗಳಿಂದ ಅರ್ಜಿಗಳನ್ನು ಆಹ್ವಾನಿಸ ಲಾಗಿದೆ.ಅರ್ಜಿ ಸಲ್ಲಿಸಬಯಸುವವರು ಅಗತ್ಯ ವಿವರಗಳಿಗೆ ಜಿಲ್ಲಾ ಪಂಚಾಯಿತಿ ಕಚೇರಿ, ಅಪರ ಜಿಲ್ಲಾಧಿಕಾರಿಗಳ ಕಚೇರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ, ಸಮಾಜ ಕಲ್ಯಾಣ ಇಲಾಖೆ ಕಚೇರಿ ಸೂಚನಾ ಫಲಕಗಳನ್ನು ವೀಕ್ಷಿಸಬಹುದು.ಅರ್ಜಿಯನ್ನು ದ್ವಿಪ್ರತಿಯಲ್ಲಿ ಜಿಲ್ಲಾಧಿಕಾರಿಗಳು ಮತ್ತು ಅಧ್ಯಕ್ಷರು ಜಿಲ್ಲಾ ಬಾಲಕಾರ್ಮಿಕರ ಯೋಜನಾ ಸಂಸ್ಥೆ ಬೆಳಗಾವಿ ಅಥವಾ ಯೋಜನಾ ನಿರ್ದೇಶಕರು, ಜಿಲ್ಲಾ ಬಾಲಕಾರ್ಮಿಕ ಯೋಜನೆ, ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ, ಕ್ಲಬ್ ರಸ್ತೆ, ಬೆಳಗಾವಿ ಇವರಿಗೆ ಇದೇ 17ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂ: 0831- 2407293/ 2407200 ಅಥವಾ ಮೊ: 9945132821 ಸಂಪರ್ಕಿ ಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Post Comments (+)