ರಿಯಾಲಿಟಿ ಷೋ ಸ್ಟಾರ್ ಕಿಮ್ ಕರ್ದೇಷಿಯಾನ್–ಕನೇ ವೆಸ್ಟ್ ದಂಪತಿ ಐರ್ಲೆಂಡ್ನ ಖಾಸಗಿ ಎಸ್ಟೇಟ್ ಒಂದಕ್ಕೆ ಮಧುಚಂದ್ರಕ್ಕಾಗಿ ತೆರಳಿದ್ದಾರೆ. ಶನಿವಾರವಷ್ಟೇ ಇಟಲಿಯ ಪೋರ್ಟ್ ಡಿ ಬೆಲ್ವೆಡಾರ್ನಲ್ಲಿ ಇನ್ನೂರು ಮಂದಿ ಆಪ್ತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದ ಈ ಜೋಡಿ ಮದುವೆಗೆ ಮುನ್ನವೇ ಮಗುವನ್ನು ಪಡೆದು ಸುದ್ದಿಯಾಗಿತ್ತು.

ಭಾನುವಾರ ಸಂಜೆಯೇ ಈ ಜೋಡಿ ಖಾಸಗಿ ಏರ್ಜೆಟ್ನಲ್ಲಿ ಐರ್ಲೆಂಡ್ಗೆ ತೆರಳಿದೆ ಎಂದು ಐರಿಷ್ ಪತ್ರಿಕೆಯೊಂದು ವರದಿ ಮಾಡಿದೆ. ದಂಪತಿಯ ಹನ್ನೊಂದು ತಿಂಗಳ ಮಗಳು ನಾರ್ಥ್ ವೆಸ್ಟ್ ಅಜ್ಜಿಯ ಜೊತೆ ಪ್ಯಾರಿಸ್ಗೆ ತೆರಳಿದ್ದಾಳಂತೆ.

ಐದು ದಿನಗಳ ಮಧುಚಂದ್ರವನ್ನು ಸವಿಯಲು ಕಿಮ್ ಮತ್ತು ಕನೇ ಮೊದಲೇ ಯೋಜನೆ ರೂಪಿಸಿದ್ದರಂತೆ. ಭಾನುವಾರ ಸಂಜೆ 3ಕ್ಕೆ ಕಾರ್ಕ್ ಏರ್ರ್ಪೋರ್ಟ್ನಲ್ಲಿ ಬಂದಿಳಿದ ದಂಪತಿ ನೇರವಾಗಿ ಎಸ್ಟೇಟ್ಗೆ ಪಯಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.