ಗುರುವಾರ , ಮೇ 19, 2022
20 °C

ಒನಿಡಾ ಐಟ್ಯೂಬ್ ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒನಿಡಾ ಐಟ್ಯೂಬ್ ಮಾರುಕಟ್ಟೆಗೆ

ಬೆಂಗಳೂರು: ಮುಂಬೈನ ಮಿರ್ಕ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್, ಆಂಡ್ರಾಯ್ಡ್ ಸಾಫ್ಟ್‌ವೇರ್ ಒಳಗೊಂಡ ದೇಶದ ಮೊಟ್ಟ ಮೊದಲ ಸ್ಮಾರ್ಟ್ ಎಲ್‌ಇಡಿ ಟಿವಿ `ಒನಿಡಾ ಐಟ್ಯೂಬ್~ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಒನಿಡಾ ಐಟ್ಯೂಬ್, ಟೆಲಿವಿಷನ್ ಕಾರ್ಯಕ್ರಮಗಳ ವೀಕ್ಷಣೆಯಲ್ಲಿ ಅತ್ಯುತ್ಕೃಷ್ಟ 3ಡಿ ಅನುಭವ ನೀಡುವುದರ ಜತೆಗೆ ಇಂಟರ್‌ನೆಟ್ ಜಾಲಾಡುವ ಸೌಲಭ್ಯವನ್ನೂ ಒದಗಿಸಲಿದೆ. ಆಂಡ್ರಾಯ್ಡನ 2 ಲಕ್ಷದಷ್ಟು ಅಪ್ಲಿಕೇಷನ್ಸ್‌ಗಳು ಈ ಟಿವಿಯಲ್ಲಿ ಲಭ್ಯವಿದ್ದು, ಅವುಗಳಲ್ಲಿ ಶೇ 80ರಷ್ಟು ಸೌಲಭ್ಯಗಳು ಉಚಿತವಾಗಿ ದೊರೆಯುತ್ತವೆ ಎಂದು ಮಿರ್ಕ್ ಎಲೆಕ್ಟ್ರಾನಿಕ್ಸ್‌ನ ಮಾರಾಟ ವಿಭಾಗದ ಉಪಾಧ್ಯಕ್ಷ  ಸಂಜೀವ್ ಕೆ. ಜೈನ್ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ವಿಶಿಷ್ಟ ಐಟ್ಯೂಬ್ ಟಿವಿ,  32 ಮತ್ತು 40 ಇಂಚುಗಳ 5 ಮಾದರಿಯಲ್ಲಿ ಲಭ್ಯ ಇದೆ. ಬೆಲೆ ರೂ. 56 ಸಾವಿರದಿಂದ ರೂ. 68 ಸಾವಿರದವರೆಗೆ ಇದೆ ಎಂದು ಉಪಾಧ್ಯಕ್ಷ ಕೆ. ಮೀರ್‌ಚಂದನ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.