ಮಂಗಳವಾರ, ಮೇ 17, 2022
26 °C

ಒಳಚರಂಡಿ ಕೆಲಸಗಾರರಿಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಳಚರಂಡಿ ಕೆಲಸಗಾರರಿಗೆ ಪ್ರಶಸ್ತಿ

ಬೆಂಗಳೂರು: ರೋಟರಿ ಕ್ಲಬ್ ಬೆಂಗಳೂರು ಸೋಮವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಬೆಂಗಳೂರು ಜಲಮಂಡಲಿಯ ನಾಲ್ವರು ಒಳಚರಂಡಿ ಕೆಲಸಗಾರರಿಗೆ `ಪ್ರೈಡ್ ಆಫ್ ವರ್ಕ್‌ಮನ್‌ಶಿಪ್ ಪ್ರಶಸ್ತಿ~ ನೀಡಿ ಗೌರವಿಸಲಾಯಿತು.ಒಳಚರಂಡಿ ಮೇಲ್ವಿಚಾರಕ ಪಿ.ನರಸಿಂಹಯ್ಯ, ಮೇಸ್ತ್ರಿ ಕಾಟುಮಯ್ಯ, ಒಳಚರಂಡಿ ನೌಕರರಾದ ವೇಣುಗೋಪಾಲ್ ಹಾಗೂ ಪಿಳ್ಳಪ್ಪ ಅವರಿಗೆ ಕ್ಲಬ್‌ನ ಸಹಾಯಕ ಗವರ್ನರ್ ಸುರೇಶ್ ಹರಿ ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಸುರೇಶ್ ಹರಿ, `ಒಳಚರಂಡಿ ನೌಕರರು ನಿರ್ವಹಿಸುವ ಕೆಲಸ ಅತ್ಯಂತ ಕಷ್ಟಕರವಾದದ್ದು. ಜಲಮಂಡಲಿಯ ನೌಕರರು ಮಾಡುತ್ತಿರುವ ಕೆಲಸಕ್ಕೆ ಸಂಸ್ಥೆ ನೀಡುತ್ತಿರುವ ಪುಟ್ಟ ಕಾಣಿಕೆ ಇದು. ಇವರು ಇನ್ನೂ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಿ ಮಂಡಲಿಗೆ ಕೀರ್ತಿ ತರಬೇಕು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.