ಸೋಮವಾರ, ಮಾರ್ಚ್ 8, 2021
30 °C

ಒಳ್ಳೆಯತನ!

-ಸಂದೇಶ್ ಪಾಣಿ,7ನೇ ತರಗತಿ,ಶ್ರೀ ಸ್ವಾಮಿ ವಿವೇಕಾನಂದ ಶಾಲೆ,ಸೊರಬ Updated:

ಅಕ್ಷರ ಗಾತ್ರ : | |

ಒಳ್ಳೆಯತನ!

ಒಂದೂರಲ್ಲಿ ಒಂದು ಚೌರದ ಅಂಗಡಿ ಇತ್ತು. ಒಂದು ದಿನ ಒಬ್ಬ ಹೂವಿನ ಅಂಗಡಿಯವನು ಕಟಿಂಗ್ ಮಾಡಿಸಿಕೊಳ್ಳಲು ಆ ಅಂಗಡಿಗೆ ಬಂದ. ಚೌರದ ಅಂಗಡಿಯವನು ಆತನ ಹತ್ತಿರ ದುಡ್ಡನ್ನು ತೆಗೆದುಕೊಳ್ಳಲೇ ಇಲ್ಲ. ಮಾರನೆಯ ದಿನ ಬೆಳಗ್ಗೆ ಅಂಗಡಿಯವನು ಚೌರದ ಅಂಗಡಿಯ ಬಾಗಿಲು ತೆಗೆಯಲು ಬಂದಾಗ ಅವನಿಗೆ ಕಂಡಿದ್ದು, ಒಂದು ಬುಟ್ಟಿಯ ತುಂಬಾ ಗುಲಾಬಿ ಹೂವುಗಳು! ಅದು ಹೂವಿನ ಅಂಗಡಿಯವನು ಕಳುಹಿಸ್ದ್ದಿದ ಉಡುಗೊರೆ.ಇನ್ನೊಂದು ದಿನ ಒಂದು ಚರ್ಚ್‌ನ ಫಾದರ್ ಕಟಿಂಗ್ ಮಾಡಿಸಿಕೊಳ್ಳಲು ಆ ಅಂಗಡಿಗೆ ಬಂದ. ಚೌರದ ಅಂಗಡಿಯವನು ಆತನ ಹತ್ತಿರವೂ ದುಡ್ಡನ್ನು ತೆಗೆದುಕೊಳ್ಳಲಿಲ್ಲ. ಮಾರನೆಯ ದಿನ ಬೆಳಿಗ್ಗೆ ಚೌರದ ಅಂಗಡಿಯವನು ಚೌರದ ಅಂಗಡಿಯ ಬಾಗಿಲು ತೆಗೆಯಲು ಬಂದಾಗ ಅವನಿಗೆ ಒಂದು ತಟ್ಟೆಯ ತುಂಬಾ ಕೇಕ್‌ಗಳು ಕಾಣಿಸಿದವು. ಅದು ಚರ್ಚ್‌ನ ಫಾದರ್ ಕಳುಹಿಸಿದ್ದಾಗಿತ್ತು.ಮತ್ತೊಂದು ದಿನ ಒಬ್ಬ ಸಾಫ್ಟ್‌ವೇರ್ ಎಂಜಿನಿಯರ್ ಕಟಿಂಗ್ ಮಾಡಿಸಿಕೊಳ್ಳಲು ಆ ಅಂಗಡಿಗೆ ಬಂದ. ಆಗಲೂ ಚೌರದ ಅಂಗಡಿಯವನು ಆತನ ಹತ್ತಿರ ದುಡ್ಡು ತೆಗೆದುಕೊಳ್ಳಲಿಲ್ಲ. ಮಾರನೆಯ ದಿನ ಆತನಿಗೆ ಒಂದು ದೊಡ್ಡ ಆಶ್ಚರ್ಯ ಕಾದಿತ್ತು! ಅಂಗಡಿಯ ಮುಂದೆ ಜನರ ಸಾಲಿತ್ತು. ಸಾಫ್ಟ್‌ವೇರ್ ಎಂಜಿನಿಯರ್ ತನ್ನ ಸ್ನೇಹಿತರಿಗೆ ಕಳುಹಿಸಿದ್ದ `ಉಚಿತವಾಗಿ ಕಟಿಂಗ್ ಮಾಡಲಾಗುವುದು' ಎಂಬ ಇ-ಮೇಲ್ ಪ್ರಿಂಟೌಟ್ ಹಿಡಿದಿದ್ದ ಅವರೆಲ್ಲ ಚೌರದ ಅಂಗಡಿಯವನಿಗಾಗಿ ಕಾಯುತ್ತಾ ಸಾಲಿನಲ್ಲಿ ಕುಳಿತಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.