ಮಂಗಳವಾರ, ಆಗಸ್ಟ್ 3, 2021
28 °C

ಒಸಾಮಾಗೆ ಪಾಕ್ ಅಧಿಕೃತ ಬೆಂಬಲ: ಅಮೆರಿಕ ಶಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಹತ್ಯೆಗೀಡಾದ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಗೆ ಪಾಕಿಸ್ತಾನದಲ್ಲಿ ಯಾವುದೇ ಬೆಂಬಲದ ವ್ಯವಸ್ಥೆ ಇರಲಿಲ್ಲ ಎಂಬುದನ್ನು ನಂಬಲು ಮಂಗಳವಾರ ನಿರಾಕರಿಸಿದ ಅಮೆರಿಕವು, ಆತನಿಗೆ ಏನಾದರೂ ಅಧಿಕೃತ ಸಂಪರ್ಕಗಳು ಇದ್ದವೇ ಎಂಬ ಬಗ್ಗೆ ತಾನು ತನಿಖೆ ನಡೆಸಬಹುದು ಎಂದು ಹೇಳಿತು.

ಅಮೆರಿಕ ಪಡೆಗಳು ಆತನನ್ನು ಜೀವಂತವಾಗಿ ಸೆರೆ ಹಿಡಿಯಲು ಸಿದ್ಧವಾಗಿದ್ದವು. ಆದರೆ ಆತನ ಪ್ರತಿರೋಧ ಮತ್ತು ಆತನ ಪತ್ನಿಯೆಂದು ನಂಬಲಾದ ಮಹಿಳೆಯನ್ನು ಆತ ಗುರಾಣಿಯಂತೆ ಬಳಸಿಕೊಂಡದ್ದರಿಂದ, ಅಲ್ ಖೈದಾ ಮುಖಂಡನ ಹತ್ಯೆ ಅನಿವಾರ್ಯವಾಯಿತು ಎಂದು ಅಮೆರಿಕ ಹೇಳಿತು.

~ಇಷ್ಟೊಂದು ದೀರ್ಘ ಕಾಲ ಈ ಜಾಗದಲ್ಲಿ ನೆಲೆಸಿರಲು ಅವಕಾಶ ನೀಡಿದ ರಾಷ್ಟ್ರದಲ್ಲಿ ಒಸಾಮಾ ಬಿನ್ ಲಾಡೆನ್ ಗೆ  ಯಾವುದೇ ಬೆಂಬಲದ ವ್ಯವಸ್ಥೆ ಇರಲಿಲ್ಲ ಎಂಬುದನ್ನು ನಂಬಲು ಸಾಧ್ಯವಿಲ್ಲ~ ಎಂದು ಭಯೋತ್ಪಾದನಾ ನಿಗ್ರಹ ಹಾಗೂ ಒಳನಾಡು ಭದ್ರತಾ ವಿಭಾಗದ ರಾಷ್ಟ್ರೀಯ ಭದ್ರತಾ ಉಪಸಲಹೆಗಾರ ಜಾನ್ ಬ್ರೆನ್ನನ್ ಅವರ ಶ್ವೇತಭವನದಲ್ಲಿ ನಡೆದ ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

~ಪಾಕಿಸ್ತಾನದಲ್ಲಿ ಆತನಿಗೆ ಯಾವ ರೀತಿಯ ಅಧಿಕೃತ ಬೆಂಬಲದ ವ್ಯವಸ್ಥೆ ಇತ್ತು ಎಂಬುದನ್ನು ಊಹಿಸಲು ನಾನು ಹೋಗುವುದಿಲ್ಲ~ ಎಂದೂ ಈ ಸಂದರ್ಭದಲ್ಲಿ ಅವರು ನುಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.