ಸೋಮವಾರ, ಜನವರಿ 20, 2020
22 °C

ಕಟ್ಟಡ ನಿರ್ಮಾಣಕ್ಕೆ ಅನುದಾನ ವಿತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಗ್ರಾಮ ಕಲ್ಯಾಣ ಕಾರ್ಯಕ್ರಮದಡಿ ಕಟ್ಟಡ ನಿರ್ಮಾಣಕ್ಕೆ ಅನುದಾನದ ಚೆಕ್‌ ವಿತರಿಸಲಾಯಿತು.ತಾಲ್ಲೂಕಿನ ಹುತ್ತೂರು ಗ್ರಾಮದಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ  ಗ್ರಾಮಾಭಿವೃದ್ದಿ ಯೋಜನೆಯಡಿ ತಾಲ್ಲೂಕಿನ 13 ಹಾಲು ಉತ್ಪಾದಕರ ಸಹಕಾರಿ ಸಂಘಗಳಿಗೆ ₨ 6,10,000 ಅನುದಾನ ಮಂಜೂರಾಗಿದ್ದು, ಹುತ್ತೂರು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ₨40,000 ಅನುದಾನ ಚೆಕ್‌ಅನ್ನು ಯೋಜನಾಧಿಕಾರಿ ಚೆನ್ನಕೇಶವ  ಅವರು   ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಹದೇವಪ್ಪ  ಅವರಿಗೆ ವಿತರಿಸಿದರು.ನಿರ್ದೇಶಕರಾದ ಮಾದೇಶ್, ಬಸವಣ್ಣ, ಸಿದ್ದಯ್ಯ, ಶಿವಕುಮಾರ್, ಮಾದಪ್ಪ, ಬೆಳ್ಳಮ್ಮ, ಚಿಕ್ಕಣಮ್ಮ, ಸಂಘದ ಕಾರ್ಯದರ್ಶಿ ಪ್ರಕಾಶ್, ಹಾಲು ಪರೀಕ್ಷಕ ನಂಜಪ್ಪ, ರಮೇಶ್್ ಇದ್ದರು.

ಪ್ರತಿಕ್ರಿಯಿಸಿ (+)