ಗುರುವಾರ , ಏಪ್ರಿಲ್ 15, 2021
31 °C

ಕನಕಪುರ ತಾಲ್ಲೂಕು ಅಪಘಾತ : ಗಾಯಾಳುಗಳು ನಗರದ ಆಸ್ಪತ್ರೆಗೆ ದಾಖಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕನಕಪುರ ತಾಲ್ಲೂಕಿನ ಇಂದಿರಾನಗರದ ಬಳಿ ಭಾನುವಾರ ಸಂಭವಿಸಿದ ಅಪಘಾತದಲ್ಲಿ ಗಾಯಗೊಂಡ ಕೆಲವರನ್ನು ನಗರದ ವಿಕ್ಟೋರಿಯಾ ಹಾಗೂ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಲ್ಲಿ ಗಾಯಗೊಂಡಿದ್ದ ವೀರಣ್ಣ (60) ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ.ಜಯಲಕ್ಷ್ಮೀ (25) ಮತ್ತು ಬಾಲಮ್ಮ (60) ಎಂಬುವರಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮಹೇಶ್ (18)ಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಲ್ಲಿ ತಲೆಗೆ ಗಂಭೀರವಾಗಿ ಪೆಟ್ಟಾದ ಇಬ್ಬರು ಮಕ್ಕಳಿಗೆ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಮದ್ಯಪಾನ ಮಾಡಿದ್ದ ಚಾಲಕ: `ಅಪಘಾತ ನಡೆದ ವೇಳೆ ಚಾಲಕ ಮದ್ಯಪಾನ ಮಾಡಿದ್ದ~ ಎಂದು ಗಾಯಾಳು ಮಹೇಶ್ ತಿಳಿಸಿದ್ದಾರೆ.`ದೇವಸ್ಥಾನಕ್ಕೆ ಹೋಗುವಾಗ ಸುಮಾರು 28 ಜನರಿದ್ದೆವು. ಬರುವಾಗ ಸುಮಾರು 15 ಜನರು ವಾಹನದಲ್ಲಿದ್ದೆವು. ಉಮೇಶ್ ಎಂಬುವರು ವಾಹನ ಚಾಲನೆ ಮಾಡುತ್ತಿದ್ದು, ಅವರೂ ಸೇರಿದಂತೆ ವಾಹನದಲ್ಲಿದ್ದ ಅನೇಕರು ಮದ್ಯಪಾನ ಮಾಡಿದ್ದರು~ ಎಂದು ಅವರು ತಿಳಿಸಿದ್ದಾರೆ.`ಇಂದಿರಾನಗರದ ಬಳಿ ವಾಹನ ಬರುತ್ತಿದ್ದಾಗ ವಾಹನ ನಿಯಂತ್ರಣ ತಪ್ಪಿ ಸುಮಾರು ಇಪ್ಪತ್ತು ಅಡಿ ಆಳದಿಂದ ಮುಮ್ಮುಖವಾಗಿ ಸೇತುವೆಯಿಂದ ಕೆಳಕ್ಕೆ ಬಿತ್ತು. ನಂತರ ನಾನು ಪ್ರಜ್ಞೆ ತಪ್ಪಿದೆ. ಎಚ್ಚರವಾದಾಗ ಹಲವರು ಸಾವನ್ನಪ್ಪಿದ್ದಾರೆ ಎಂಬುದು ತಿಳಿಯಿತು~ ಎಂದು ಅವರು ಹೇಳಿದರು.ಹರಕೆ ಸಲ್ಲಿಸಲು ಹೋಗಿದ್ದರು
: ` ವೀರಣ್ಣ ಅವರ ಕುಟುಂಬ ಭಾನುವಾರ ಕಬ್ಬಾಳಮ್ಮ ದೇವಾಲಯದಲ್ಲಿ ಹರಕೆ ಸಲ್ಲಿಸುವ ಆಚರಣೆ ಇದ್ದ ಕಾರಣ ಅವರ ಕುಟುಂಬದ ಜತೆಗೆ ಇತರರೂ ಹೋಗಿದ್ದೆವು. ಬೆಳಿಗ್ಗೆ ನಾಲ್ಕು ಗಂಟೆಗೇ ಮನೆ ಬಿಟ್ಟಿದ್ದೆವು. ಆಚರಣೆ ಎಲ್ಲ ಮುಗಿದು ಅಲ್ಲಿಂದ ಹೊರಟಾಗ ಸಂಜೆ ಐದು ಗಂಟೆಯಾಗಿತ್ತು. ಸುಮಾರು 5.30ರ ವೇಳೆಗೆ ಅಪಘಾತ ಸಂಭವಿಸಿತು~ ಎಂದರು.ಘಟನೆಯಲ್ಲಿ ಮೃತಪಟ್ಟ ರಾಜು ಅವರ ಚಿಕ್ಕಪ್ಪನ ಮಗನಾದ ಮಹೇಶ್ ಮಾಗಡಿಯ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಬಿಕಾಂ ವಿದ್ಯಾರ್ಥಿಯಾಗಿದ್ದಾರೆ.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.